PLACE YOUR AD HERE AT LOWEST PRICE
ಆಕಸ್ಮಿಕವಾಗಿ ಗ್ರೀಸ್ ಮೆತ್ತಿಕೊಂಡಿದ್ದ ತನ್ನ ಕೈ ಸ್ಪರ್ಶವಾಗಿದ್ದಕ್ಕೆ ಸವರ್ಣೀಯ ಯುವಕನೊಬ್ಬ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಮುಖಕ್ಕೆ ಮಲ ಬಳಿದು ಹೀನ ಕೃತ್ಯ ನಡೆಸಿದ ಘಟನೆ ಛತ್ತರ್‌ಪುರ್ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ನಡೆದಿದೆ.
ದೂರಿನ ಆಧಾರದ ಮೇಲೆ ಆರೋಪಿ ರಾಮ್‌ಕೃಪಾಲ್ ಪಟೇಲ್ ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಲಿತ ಸಮುದಾಯದ ದಶರತ್ ಅಹಿರ್ವಾರ್ ಅವರು ಬಿಕೌರಾ ಗ್ರಾಮದಲ್ಲಿ ಪಂಚಾಯತ್ ವ್ಯಾಪ್ತಿಯ ಚರಂಡಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದಾಗ ಗ್ರೀಸ್ ಮೆತ್ತಿಕೊಂಡಿದ್ದ ಅವರ ಕೈ ಆಕಸ್ಮಿಕವಾಗಿ ಆರೋಪಿ ರಾಮ್‌ಕೃಪಾಲ್ ಪಟೇಲ್ ಕೈ ತಾಕಿದೆ. ಇದಕ್ಕೆ ಕೋಪಗೊಂಡ ರಾಮ್‌ಕೃಪಾಲ್, ದಶರತ್ ಅವರ ಮುಖಕ್ಕೆ ಮಲವನ್ನು ಬಳಿದು ಜಾತಿ ನಿಂದನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾನು ಈ ವಿಷಯವನ್ನು ಪಂಚಾಯತಿ ಗಮನಕ್ಕೆ ತಂದಾಗ ಅವರು ರಾಮ್‌ಕೃಪಾಲ್ ಮೇಲೆ ದೂರು ದಾಖಲಿಸಿಕೊಳ್ಳುವ ಬದಲು ನನಗೇ 600 ರೂಪಾಯಿ ದಂಡವನ್ನು ವಿಧಿಸಿದರು” ಎಂದು ಅಹಿರ್ವಾರ್ ಆರೋಪಿಸಿದ್ದಾರೆ.
ರಾಮ್‌ಕೃಪಾಲ್ ಪಟೇಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ)ಕಾಯ್ದೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಿರ್ವಾರ್ ಇತರರೊಂದಿಗೆ ಕೆಲಸ ಮಾಡುತ್ತಿದ್ದಾಗ, ರಾಮ್‌ಕೃಪಾಲ್ ಪಟೇಲ್ ಸ್ನಾನ ಮಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಕೈ ತಾಕಿದೆ. ಇದರಿಂದ ಸಿಟ್ಟಿಗೆದ್ದು ಕೊಳಕಾದ ವಸ್ತುಗಳನ್ನು ಅಹಿರ್ವಾರ್ ಮೇಲೆ ಎಸೆದ. ನಂತರ ಮಲವನ್ನು ಎತ್ತಿಕೊಂಡು ಮುಖ ಹಾಗೂ ಮೈಮೇಲೆ ಎಸೆದಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
ಇತ್ತೀಚೆಗೆ, ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಅಲ್ಲದೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆ ವ್ಯಾಪ್ತಿಯ ಸೈಫೈ ಎಂಬಲ್ಲಿ ದಲಿತ ಬಾಲಕನಿಗೆ ಥಳಿಸಿದ ಯುವಕನೊಬ್ಬ ತನ್ನ ಮಲವನ್ನು ಬಾಲಕನ ಕೈಯಿಂದ ಒತ್ತಾಯಪೂರ್ವಕವಾಗಿ ತೆಗೆಸಿದ್ದ.
nammasuddi.net ನಲ್ಲಿ ಜಾಹೀರಾತು ಪ್ರಕಟಣೆಗಾಗಿ ಸಂಪರ್ಕಿಸಿ :
ಕೆ.ಎಸ್.ಗಣೇಶ್ – 9448311003
ಸಿ.ವಿ.ನಾಗರಾಜ್ – 9632188872
ಕೆ.ರಾಮಮೂರ್ತಿ – 9449675480