• Thu. May 2nd, 2024

PLACE YOUR AD HERE AT LOWEST PRICE

ಕೋಲಾರ ಜು-೨೬,: ಕೋಲಾರ ಜಿಲ್ಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಸೇರಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದಿ ಇ.ಎಸ್.ಐ ಆಸ್ಪತ್ರೆಯಲ್ಲಿ ಮಂಜೂರು ಮಾಡಬೇಕೆಂದು ರೈತ ಸಂಘದಿoದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರವರು ಬಯಲು ಸೀಮೆಯ ಕೋಲಾರ ಜಿಲ್ಲೆಗೆ ಖಾಸಗಿ ಮೆಡಿಕಲ್ ಕಾಲೇಜು ಇದ್ದು, ಇಡೀ ದೇಶಕ್ಕೆ ಹಾಲು ಹಣ್ಣು ತರಕಾರಿ ರೇಷ್ಮೆ, ಚಿನ್ನ ನೀಡಿದಂತ ಲಕ್ಷಾಂತರ ಬಡ ರೈತ ಕೂಲಿಕಾರ್ಮಿಕರ ಮಕ್ಕಳ ಕನಸು ನನಸಾಗಲು ಸರ್ಕಾರಿ ವೈದಕೀಯ ಕಾಲೇಜು, ಮಂಜೂರು ಮಾಡಿದರೆ ಸಾವಿರಾರು ವೈದ್ಯರು ಸೃಷ್ಟಿಯಾಗುತ್ತಾರೆ. ಕನಸಿನಲ್ಲಿ ವೈದ್ಯರಾಗುವ ಆಸೆ ಇದ್ದರೂ, ದುಬಾರಿ ಖಾಸಗಿ ವೈದ್ಯಕೀಯ ಡೊಣೇಷನ್ ಕಟ್ಟಲಾರದೆ ತಮ್ಮ ಕನಸನ್ನು ಕಣ್ಣೀರಾಗಿ ಕೈ ತೊಳೆಯುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ ಬಡ ಮಕ್ಕಳ ಕನಸನ್ನು ನನಸು ಮಾಡಬಹುದೆಂದು ಸಚಿವರಿಗೆ ಮನವರಿಕೆ ಮಾಡಿದರು.

ಜೊತೆಗೆ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಒಂದು ಸಿ.ಟಿ ಸ್ಯಾನಿಂಗ್ ಸೆಂಟರ್ ಹಾಗೂ ಒಂದು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸೇರಿದಂತೆ ಜಿಲ್ಲಾದ್ಯಂತ ಲಕ್ಷಾಂತರ ಕಾರ್ಮಿಕರು ದುಡಿಯುತ್ತಿರುವ ಜಿಲ್ಲೆಯಲ್ಲಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಇ.ಎಸ್.ಐ ಆಸ್ಪತ್ರೆ ಇಲ್ಲ. ಸರ್ಕಾರ ಇದರ ಕಡೆ ಗಮನಹಿರಿಸಬೇಕೆಂದು ಒತ್ತಾಯ ಮಾಡಿದರು.

ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಖಾಸಗಿ ಆಸ್ಪತ್ರೆಗಳ ದುಬಾರಿ ಹಣ ವಸೂಲಿ ದಂದೆಯನ್ನೆ ಗುರಿಯಾಗಿಸಿಕೊಂಡು ವೈದ್ಯಕೀಯ ಗಂದಗಾಳಿ ಗೊತ್ತಿಲ್ಲದ ನೂರಾರು ನಕಲಿ ವೈದ್ಯರು ಕೆ.ಎಂ.ಸಿ.ಯಲ್ಲಿ ನಕಲಿ ದಾಖಲೆಗಳನ್ನು ಪಡೆದುಕೊಂಡು ಜಿಲ್ಲಾದ್ಯಂತ ಗಡಿ ಬಾಗಗಳಲ್ಲಿ ನಾಯಿ ಕೊಡೆಗಳಂತೆ ನಕಲಿ ಕ್ಲೀನಿಕ್‌ಗಳು ಜನ ಸಾಮಾನ್ಯರ ಆರೋಗ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪ್ರಭಲ ಕಾನೂನು ಜಾರಿಮಾಡಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ನರ್ಸಗಳು ಎ.ಎಂ.ಗಳ ಹುದ್ದೆಗಳನ್ನು ಭರ್ತಿ ಮಾಡಿ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ ೨೪ ಗಂಟೆ ವೈದ್ಯರು ಕೆಲಸ ನಿರ್ವಹಿಸುವಂತೆ ಆದೇಶ ಮಾಡಬೇಕು. ಜೊತೆಗೆ ೧೦೮ ಆಂಬುಲೆನ್ಸ್ ಅವ್ಯವಸ್ಥೆಯಾಗಿದ್ದು, ಕರೆ ಮಾಡಿದರೆ ೫ ತಾಸುಗಳ ನಂತರ ರೋಗಿಯ ಪ್ರಾಣ ಹೋದ ಮೇಲೆ ಬರುತ್ತದೆ. ಆ ಅವ್ಯವಸ್ಥೆಯನ್ನು ಸರಿಪಡಿಸಲು ಪ್ರತಿ ತಾಲ್ಲೂಕಿನಲ್ಲಿ ೪ ಆಂಬುಲೆನ್ಸ್ನoತೆ ೨೪ ಜಿಲ್ಲೆಗೆ ಮಂಜೂರು ಮಾಡಬೇಕೆಂದು ಸಚಿವರಿಗೆ ಸರ್ಕಾರಿ ಆಸ್ಪತ್ರೆಗಳ ಅವ್ಯಸ್ಥೆ ಬಗ್ಗೆ ಮನವರಿಕೆ ಮಾಡಿದರು.

ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿಗೌಡ, ಯಾರಂಘಟ್ಟ ಗಿರೀಶ್, ಪುತ್ತೇರಿ ರಾಜು, ಮಂಗಸAದ್ರ ತಿಮ್ಮಣ್ಣ, ಚಂದ್ರಫ್ಪ, ಮುಂತಾದವರು ಇದ್ದರು.

nammasuddi.net ನಲ್ಲಿ ಜಾಹೀರಾತು ಪ್ರಕಟಣೆಗಾಗಿ ಸಂಪರ್ಕಿಸಿ :

ಕೆ.ಎಸ್.ಗಣೇಶ್ – 9448311003
ಸಿ.ವಿ.ನಾಗರಾಜ್ – 9632188872
ಕೆ.ರಾಮಮೂರ್ತಿ – 9449675480

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!