• Thu. May 2nd, 2024

PLACE YOUR AD HERE AT LOWEST PRICE

By-ನಂದಕುಮಾರ್  ಕುಂಬ್ರಿಉಬ್ಬು.

ಜನಸಾಮಾನ್ಯರ ಬಳಕೆಯ ಪದಗಳನ್ನು ಭಾಷೆಯೊಂದು ಒಳಗೂಡಿಸಿಕೊmಡಾಗ ಹಲವರು ಆರೋಪಿಸುವ ರೀತಿಯ ಶಬ್ಧ ಸಂಪತ್ತಿನ ಕೊರತೆಗಳು,  ರ್ಯಾಯ ಪದಗಳ ಕೊರತೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಗ ಸಂಸ್ಕೃತವನ್ನೋ ಇಲ್ಲವೇ ಆಂಗ್ಲವನ್ನೋ ಎಲ್ಲದಕ್ಕೂ ಆಶ್ರಯಿಸಬೇಕಾದ ಅಗತ್ಯ ಕಡಿಮೆಯಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗಳ ಭಾಷಾ ಹೇರಿಕೆಗಳು ಹಾಗೂ ಒಳತೂರಿಸುವಿಕೆಗೂ ಅವಕಾಶ ಕಡಿಮೆಯಾಗುತ್ತದೆ.

ವಿದ್ಯಾವಂತರೆನಿಸಿದವರಲ್ಲಿ ಹಲವರು ಅರೋಪಿಸುವ ಕನ್ನಡ ಅನ್ನದ ಭಾಷೆಯಲ್ಲ. ಆಂಗ್ಲ ಅನ್ನದ ಭಾಷೆ, ಇಲ್ಲವೇ ಹಿಂದಿ ಅನ್ನದ ಭಾಷೆ ಎನ್ನುವ ಮಾತುಗಳು ಎಷ್ಟು ಸುಳ್ಳು ಎನ್ನುವುದನ್ನು ಬಹುಸಂಖ್ಯಾತ ಜನರು ಅವರವರ ಭಾಷೆಗಳಲ್ಲೇ ದೈನಂದಿನ ವ್ಯವಹಾರ, ವ್ಯಾಪಾರ, ಒಡನಾಟಗಳನ್ನು; ಕಲೆ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು, ಸಂವಹನವನ್ನು ಮಾಡುತ್ತಿದ್ದಾರೆ ಎನ್ನುವುದನ್ನು ಅರಿತಾಗ ಮಾತ್ರ ಅರ್ಥವಾಗುತ್ತವೆ.

ಕರ್ನಾಟಕದಲ್ಲಿ ಕನ್ನಡ ಭಾಷೆ ಬಹುಸಂಖ್ಯಾತ ಜನರಿಗೆ ಅನ್ನದ ಭಾಷೆಯಾಗಿದೆ. ಯಾಕೆಂದರೆ ರಾಜ್ಯದ ಬಹುಪಾಲು ಜನರು ಕನ್ನಡದ ಮೂಲಕವೇ ಅನ್ನವನ್ನು ಗಳಿಸುತ್ತಿರೋದು ಎನ್ನುವುದನ್ನು ಮನಗಾಣಬೇಕಿದೆ. ಕೆಲವೇ ವಿದ್ಯಾವಂತರೆನಿಸಿಕೊಂಡವರಿಗೆ ಮಾತ್ರ ಕನ್ನಡ ಅನ್ನದ ಭಾಷೆಯಲ್ಲ ಎನಿಸುತ್ತದೆ. ಆ ವರ್ಗಕ್ಕೆ ಸೇರಿದ ಬುದ್ದಿಜೀವಿಗಳು ಅದನ್ನೇ ಕನ್ನಡದ ದೊಡ್ಡ ಕೊರತೆ ಎಂಬಂತೆ ಬಿಂಬಿಸಿ ‘ಕನ್ನಡ ಅನ್ನದ ಭಾಷೆಯಾಗಬೇಕು’ ಎಂಬ ಪುಗುಸಟ್ಟೆ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸಿ ತಮ್ಮ ಮನೆಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಿ ವಿದೇಶದಲ್ಲೋ, ಬಹುರಾಷ್ಟ್ರೀಯ ಕಂಪನಿಯಲ್ಲೋ  ಅನ್ನ ಗಿಟ್ಟಿಸೋ ಕೆಲಸ ಮಾಡುತ್ತಿರುತ್ತಾರೆ.

ಅದರಿಂದಾಗಿ ಹಲವರು ಗಟ್ಟಿಬೇರುಗಳನ್ನು ಬೆಳೆಸುತ್ತಾ ತಳಪಾಯ ನಿರ್ಮಿಸಿಕೊಂಡು ಸರಿಯಾದ ಬದುಕು ಕಟ್ಟಿಕೊಳ್ಳುವಲ್ಲಿ, ಮನುಷ್ಯಸಂಬಂಧಗಳನ್ನು ಗ್ರಹಿಸಿಕೊಳ್ಳುತ್ತಾ ಅಳವಡಿಸಿಕೊಳ್ಳುವಲ್ಲಿ, ಜೀವಂತಿಕೆಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗಿ ಎಡವುವುದು, ಜಾರುವುದು, ಬೀಳುವುದು, ಕುಸಿದುಹೋಗುವುದು ಆಗುತ್ತಿರುತ್ತದೆ. ಜೀವ ಇದ್ದರೂ ಜೀವಿಸುತ್ತಿರಲು, ಬದುಕನ್ನು ಆಸ್ವಾದಿಸುತ್ತಾ ಬೆಳೆಸುತ್ತಾ ಹೋಗಲು ಸಾಧ್ಯವಾಗದೇ ತಾವು ಗಳಿಸಿದ ಪದವಿಯನ್ನೋ, ಹಣವನ್ನೋ, ತಾವು ಕಲಿತ ಆಂಗ್ಲಭಾಷೆಯನ್ನೋ, ಅದರ ಉಚ್ಚಾರವನ್ನೋ ಮಹಾ ಸಾಧನೆಯೆಂಬಂತೆ ಬಿಂಬಿಸುತ್ತಾ ಅಲ್ಲೂ ಅಲ್ಲ ಇಲ್ಲೂ ಸಲ್ಲ ಎಂಬಂತೆ ಕಾಲಕಳೆಯುತ್ತಾರೆ.

ಇದನ್ನೆಲ್ಲಾ ಯಾಕೆ ಇಲ್ಲಿ ಹೇಳಿದೆ ಎಂದರೆ ಕುಂದಾಪ್ರ ಭಾಗದಲ್ಲಿನ ಜನರ ಅನ್ನದ ಆಡುಭಾಷೆಯ ಕನ್ನಡ ಪದಗಳ ಸಂಪತ್ತು ಹೇಗಿದೆ ಎಷ್ಟಿದೆ ಎನ್ನೋದು  ‘ಕುಂದಾಪ್ರ ಕನ್ನಡ ನಿಘಂಟು’ ವಿನಂತಹ ಕೃತಿಗಳು ಹೊರಬರುವ ರೀತಿಯ ಇಂತಹ ಮೌಲಿಕ ಕೆಲಸಗಳಾದಾಗಲೇ ಹೊರಜಗತ್ತಿಗೆ ಗೊತ್ತಾಗೋದು.

ಅದೇ ಕೆಲಸ ರಾಜ್ಯದ ಬೇರೆ ಪ್ರಾದೇಶಿಕ ವೈವಿಧ್ಯತೆಯ ಪ್ರದೇಶಗಳಿಂದಲೂ ಆಗಿ ಆ ಶಬ್ದ ಇಲ್ಲವೇ ಪರ್ಯಾಯ ಪದಗಳು  ಬರವಣಿಗೆಯೂ ಸೇರಿದಂತೆ ಕನ್ನಡ ಭಾಷೆಯಲ್ಲಿ ಸಹಜ ಸಾಮಾನ್ಯ ರೀತಿಯಲ್ಲಿ ಅಡಕವಾಗಿಸಬೇಕು.

ಆ ಮೂಲಕ ಯಾವುದೇ ರೀತಿಯ ಹೇರಿಕೆಗಳನ್ನು ತಡೆಯಬೇಕು….

ಅದೇ ವೇಳೆಯಲ್ಲಿ ವಿಜ್ಞಾನ, ತಾಂತ್ರಿಕ ಶಿಕ್ಷಣ ಪಠ್ಯಗಳು ಕನ್ನಡ ಸೇರಿದಂತೆ ಎಲ್ಲಾ ಮಾತೃಭಾಷೆಯಲ್ಲಿ ಸಿಗುವಂತಾಗಬೇಕು. ಕಲಿಕಾ ಮಾಧ್ಯಮವೂ ಮಾತೃಭಾಷೆಯಲ್ಲಾಗಬೇಕು. ಆಗಲೇ ಶಿಕ್ಷಣದ ಗುಣಮಟ್ಟವೂ, ಕಲಿಕಾ ಮಟ್ಟವೂ, ಗ್ರಹಣ ಮಟ್ಟವೂ ಮೇಲು ಹಂತಗಳಿಗೆ ಏರುತ್ತಾ ಹೋಗುತ್ತದೆ.ಅದು ಮಾನವ ಸಂಪನ್ಮೂಲದ ನೈಜ ಅಭಿವೃದ್ದಿಯಾಗುವುದು….ರಾಜ್ಯದ ಹಾಗೂ ಆ ಮೂಲಕ ದೇಶದ ಅಭಿವೃದ್ದಿಯೂ ಹೆಚ್ಚಾಗುತ್ತಾ ಅನನ್ಯತೆ, ಐಕ್ಯತೆ ಹೆಚ್ಚುತ್ತಾ ಸಾಗುತ್ತದೆ…

By-ನಂದಕುಮಾರ್  ಕುಂಬ್ರಿಉಬ್ಬು.

91 96061 65547.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!