• Mon. Apr 29th, 2024

PLACE YOUR AD HERE AT LOWEST PRICE

ಕಾಮಿಡಿ ಕಚಗುಳಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಇದೀಗ ಓಟಿಟಿ ಅಖಾಡ ಪ್ರವೇಶ ಮಾಡಿದೆ. ಜುಲೈ 21ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದ ಚಿತ್ರಕ್ಕೆ ಬೇಡಿಕೆ ಸೃಷ್ಟಿಯಾಗಿತ್ತು. ಹೀಗೆ ಕೋಟ್ಯಂತರ ರೂ. ಕಲೆಕ್ಷನ್ ಮಾಡಿದ್ದ ಹಾಸ್ಟೆಲ್ ಹುಡಗರ ಅಬ್ಬರಕ್ಕೆ ಟಾಲಿವುಡ್ ಅಂಗಳದಲ್ಲಿ ಬೇಡಿಕೆ ಹೆಚ್ಚಾಗಿ ಡಬ್ ಆಗಿತ್ತು. ಈ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದ ಹಾಸ್ಟೆಲ್ ಹುಡುಗರಿಗೆ ಇದೀಗ ಓಟಿಟಿಯಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.

ಅಷ್ಟಕ್ಕೂ ಕನ್ನಡ ಸಿನಿಮಾ ಫ್ಯಾನ್ಸ್ ನಗಿಸಿ, ಎಂಟರ್‌ಟೈನ್‌ಮೆಂಟ್ ನೀಡಿದ್ದ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ದಾಖಲೆ ಮೇಲೆ ದಾಖಲೆ ಬರೆದಿರುವ ಹಾಸ್ಟೆಲ್ ಹುಡುಗರು ZEE5 ಮೂಲಕ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡ ಚಿತ್ರಗಳಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಅದ್ರಲ್ಲೂ ಕೆಜಿಎಫ್ ಮತ್ತು ಕಾಂತಾರ ಸಿನಿಮಾ ನಂತರ ಕನ್ನಡ ಸಿನಿಮಾಗಳ ಖದರ್‌ಗೆ ಬಾಲಿವುಡ್ ಕೂಡ ಶೇಕ್ ಆಗಿದೆ. ಹೀಗಿದ್ದಾಗ ಓಟಿಟಿ ಅಖಾಡದಲ್ಲೂ ಕನ್ನಡ ಸಿನಿಮಾಗಳಿಗೆ ಡಿಮ್ಯಾಂಡ್ ಇದ್ದು, ಹಾಸ್ಟೆಲ್ ಹುಡಗರು ಸದ್ದು ಮಾಡ್ತಿದ್ದಾರೆ.

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಫಲವಾಗಿ ಹಾಸ್ಟೆಲ್ ಹುಡುಗರು ತೆರೆಯ ಮೇಲೆ ಅಬ್ಬರಿಸಿದೆ. ಈ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಈಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಹೆಸರಿನಡಿ ತೆಲುಗು ಭಾಷೆಗೆ ಡಬ್ ಆಗಿ ರಿಲೀಸ್ ಆಗಿ ಸದ್ದು ಮಾಡಿತ್ತು. ಈಗ ZEE5 ಓಟಿಟಿ ಮೂಲಕ ಮತ್ತೊಂದು ದಾಖಲೆ ಮಾಡಲು ಬಂದಿದೆ.


ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಸ್ಯಾಂಡಲ್ ವುಡ್ ಸಪೋರ್ಟ್ ಕೊಟ್ಟಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಗೆ ಚಾಲನೆ ನೀಡಿದ್ದರು. ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ & ರಮ್ಯಾ ಗೆಸ್ಟ್ ಅಪಿಯರೆನ್ಸ್ ಮೂಲಕ ಕಾಣಿಸಿಕೊಂಡಿದ್ದರು. ಚಿತ್ರರಂಗ ಬೆಂಬಲ ಕೊಟ್ಟಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಬೆಳ್ಳಿತೆರೆಯಲ್ಲಿ ಧಮಾಕ ಎಬ್ಬಿಸಿದ್ರು. ಸಿನಿರಸಿಕರನ್ನು ಸಿನಿಮಾ ಥಿಯೇಟರ್ ನತ್ತ ಮುಖ ಮಾಡುವಂತೆ ಮಾಡಿ ಚಪ್ಪಾಳೆ ಪಡೆದಿದ್ದ ಈ ಸಿನಿಮಾ ತೆಲುಗು, ಹೊರ ದೇಶದಲ್ಲಿಯೂ ಭಾರೀ ರೆಸ್ಪಾನ್ಸ್ ಪಡೆದುಕೊಂಡಿತ್ತು.

ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ.ಪಿ, ಅರವಿಂದ್ ಎಸ್ ಕಶ್ಯಪ್ ಸಿನಿಮಾಗೆ ಬಂಡವಾಳ ಹೂಡಿದ್ದರು. ಹಾಗೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ಅಡಿಯಲ್ಲಿ ಪ್ರೆಸೆಂಟ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ & ಅರವಿಂದ್ ಕಶ್ಯಪ್ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಥಿಯೇಟರ್ ಅಂಗಳದಲ್ಲಿ ಮನರಂಜನೆ ರಸದೌತಣ ನೀಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಓಟಿಟಿಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಓಟಿಟಿ ಅಖಾಡದಲ್ಲೂ ಕನ್ನಡ ಸಿನಿಮಾ ಅಬ್ಬರ ಶುರುವಾಗಿದೆ.

ಒಟ್ನಲ್ಲಿ ಕನ್ನಡ ಸಿನಿಮಾಗಳಿಗೆ ಡಿಮ್ಯಾಂಡ್ ಬಲು ಜೋರಾಗಿದೆ. ಇದೀಗ ಓಟಿಟಿ ಅಖಾಡ ಕೂಡ ಕನ್ನಡ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ತೆರೆದು ಕೊಟ್ಟಿದೆ. ಅದ್ರಲ್ಲೂ ಕೆಜಿಎಫ್ ಹಾಗೂ ಕಾಂತಾರ ಬಳಿಕ ಸ್ಯಾಂಡಲ್‌ವುಡ್ ಅಂದ್ರೆ ಕನ್ನಡ ಸಿನಿಮಾ ರಂಗಕ್ಕೆ ಓಟಿಟಿಯಲ್ಲಿ ಕೂಡ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕೋಟಿ ಕೋಟಿ ಲೆಕ್ಕದಲ್ಲಿ ಕನ್ನಡ ಸಿನಿಮಾಗಳನ್ನು ಖರೀದಿ ಮಾಡೋದಕ್ಕೆ ಓಟಿಟಿ ಸಂಸ್ಥೆಗಳು ಮುಂದೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ಸಿನಿಮಾಗಳ ಗೆಲುವಿನ ಓಟ ಇದೇ ರೀತಿ ಮುಂದುವರಿದು, ಪರಭಾಷೆ ಸಿನಿಮಾಗಳ ಮಾರುಕಟ್ಟೆ ಮೀರಿಸಿ ಜಾಗತಿಕವಾಗಿ ಬೆಳೆಯಲಿ ಎಂಬುದೇ ಕನ್ನಡಿಗರ ಆಸೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!