• Wed. Nov 29th, 2023

PLACE YOUR AD HERE AT LOWEST PRICE

ಕೆಜಿಎಫ್: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಆರೋಪಿಗಳನ್ನು ಬಂಧಸಿ  ಸಶಸ್ತ್ರ ಕಾಯ್ದೆ ಅಡಿಯಲ್ಲಿ ನಾಡ ಬಂದೂಕು ವಶಪಡಿಸಿಕೊಂಡಿರುವ ಘಟನೆ ಆಂಡರ್ ಸನ್ ಪೇಟೆ ಸರಹದ್ದಿನಲ್ಲಿನ ನಡೆದಿದೆ.

 ದಿನಾಂಕ:೨೪.೦೯.೨೦೨೩ ರಂದು ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬಾಣಗಿರಿ ಗೊಲ್ಲಹಳ್ಳಿ ಗ್ರಾಮದ ಕೆರೆ ಕಟ್ಟೆಯ ಮೇಲೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಆರೋಪಿಗಳಾದ ಕೆ.ಜಿ.ಎಫ್ ನಗರದ ಮುನಿಸ್ವಾಮಿ, ಮತ್ತು ಆಂದ್ರಪ್ರದೇಶದ  ಕುಪ್ಪಂನ ರಾಹುಲ್ ರನ್ನು ಬಂಧಿಸಲಾಗಿದೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಮಂಜುನಾಥ.ಬಿ, ಎ.ಎಸ್.ಐ ವಿ.ರಮೇಶ್ ಹಾಗೂ ಸಿಬ್ಬಂದಿಯವರಾದ ವೆಂಕಟೇಶ್, ಸುನಿಲ್ ಕುಮಾರ್, ಪರುಶುರಾಮ ಕೌಲಗಿ, ರವಿಕುಮಾರ್ ದಾಳಿಯ ತಂಡದಲ್ಲಿಸ್ದರು.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಅವರು ಬೇಟೆಯಾಡಲು ಅವರೊಂದಿಗೆ ಅಕ್ರಮವಾಗಿ ಇಟ್ಟುಕೊಂಡಿದ್ದ ಒಂದು ನಾಡ ಬಂದೂಕು ಮತ್ತು ಅದಕ್ಕೆ ಸಂಬಂದಿಸಿದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.

Leave a Reply

Your email address will not be published. Required fields are marked *

You missed

error: Content is protected !!