• Sat. Jul 27th, 2024

PLACE YOUR AD HERE AT LOWEST PRICE

ಕೋಲಾರ,ಸೆ.೨೯ : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕೋಲಾರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಅಂಗಡಿ, ಮಳಿಗೆ, ಹೋಟೆಲ್, ಸಿನಿಮಾ ಮಂದಿರ ಗಳು ಓಪನ್ ಸಂಪೂರ್ಣ ಮುಚ್ಚಿಲಾಗಿತ್ತು ಒಟ್ಟಾರೆ ಬಂದ್ ಶಾಂತಿಯುತವಾಗಿ ನಡೆಯಿತು.

ಜತೆಗೆ ಸಾರ್ವಜನಿಕರ ಓಡಾಟ ಎಂದಿನoತೆ ಇತ್ತು. ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಆದರೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಬಳಿ ಹಾಜರಾಗಿದ್ದರು. ಅದರೆ ಸಾರಿಗೆ ಬಸ್ ವ್ಯತ್ಯಯದಿಂದ ತೊಂದರೆ ಉಂಟಾಯಿತು. ವಿವಿಧ ಪರ ಸಂಘಟನೆ ಮುಖಂಡರು ಕರೆ ನೀಡಿದ್ದ ಕರ್ನಾಟಕ ಬಂದ್ ನಲ್ಲಿ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಆಟೋಗಳನ್ನು ನಿಲ್ಲಿಸಿ, ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೂ ದೂರದ ಊರುಗಳಿಗೆ ತೆರಳಲು, ಕಡಿಮೆ ಇದ್ದರೂ ಸಹ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ಗಳ ಕೊರತೆ ಎದ್ದು ಕಾಣುತ್ತಿತ್ತು. ಬಂದ್ಬಿಸಿ ಪ್ರಯಾಣಿಕರಿಗೂ ಸಹ ತಟ್ಟಿತ್ತು. ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ೧,೫೦೦ ಪೊಲೀಸರನ್ನು ನಿಯೋಜಿಸಲಾಗಿದೆ. ೪ ಕೆಎಸ್‌ಆರ್‌ಪಿ ಪಡೆ, ೧೫ ಡಿಎಆರ್ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ತಮಿಳುನಾಡಿನಿಂದ ಯಾವುದೇ ವಾಹನ ಜಿಲ್ಲೆಗೆ ಬರುತ್ತಿಲ್ಲ. ಜಿಲ್ಲೆಯಿಂದಲೂ ವಾಹನ ಆ ಕಡೆ ತೆರಳುತ್ತಿಲ್ಲ. ಪ್ರಗತಿಪರ ಸಂಘಟನೆಗಳು ಒಕ್ಕೂಟದ ಪ್ರತಿನಿಧಿಗಳು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಕೋಲಾರದ ನೀರಾವರಿ ಬೇಡಿಕೆ ಈಡೇರಿಸಲು ಒತ್ತಾಯಿಸಿದರು. ಹಾಲಿನ ಬೂತ್, ಆಸ್ಪತ್ರೆಗಳು, ಮೆಡಿಕಲ್ ಶಾಪ್ ತುರ್ತು ಸೇವೆಗಳು ಹೊರತುಪಡಿಸಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಸರ್ಕಾರಿ ಕಚೇರಿಗಳು ಎಂದಿನAತೆ ಕಾರ್ಯನಿರ್ವಹಿಸಿದವು.

ಕೆಜಿಎಫ್‌ನಲ್ಲೂ ಬಂದ್ ಯಶಸ್ವಿ:

ತಮಿಳು ಪ್ರಾಬಲ್ಯವಿರುವ ಕೆಜಿಎಫ್ ನಗರ ಸಂಪೂರ್ಣ ಬಂದ್ ಆಚರಣೆ ಮಾಡುವ ಮೂಲಕ ಕಾವೇರಿ ಪರವಾದ ಹೋರಾಟವನ್ನು ಯಶಸ್ವಿಗೊಳಿಸಿದರು. ಸುಮಾರು ೨೦ಕ್ಕೆöÊ ಹೆಚ್ಚು ಸಂಘಟನೆಗಳು ಬಂದ್‌ನಲ್ಲಿ ಭಾಗವಹಿಸಿದ್ದವು. ಇನ್ನೂ ಬಂಗಾರಪೇಟೆಯಲ್ಲಿ ಬಂದ್‌ಗೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿತ್ತು. ಬಸ್ ಸಂಚಾರ ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಬಹುತೇಕ ಅರ್ಧದಷ್ಟು ಸಾಮಾನ್ಯವಾಗಿತ್ತು. ಮಾಲೂರು ಪಟ್ಟಣ, ಮುಳಬಾಗಿಲು ಹಾಗೂ ಶ್ರೀನಿವಾಸಪುರದಲ್ಲೂ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದು ಖಂಡಿಸಿ, ಜಯ ಕರ್ನಾಟಕ ಸಂಘಟನೆಯಿ0ದ ಪ್ರತಿಭಟನೆ :

ಕಾವೇರಿ ನೀರಿಗಾಗಿ ಜಿಲ್ಲಾ ಜಯ ಕರ್ನಾಟಕ ವತಿಯಿಂದ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೈಕ್ ರಾಲಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸಂಸದರಿಗೆ ಮನವಿಯನ್ನು ಸಲ್ಲಿಸಿದರು.

ಕಾವೇರಿ ಮತ್ತು ಮಹದಾಯಿ ನೀರು ಹಂಚಿಕೆಯ ವಿಚಾರವಾಗಿ ಹಲವು ದಶಕಗಳಿಂದ ನಮ್ಮ ರಾಜ್ಯದಲ್ಲಿ ಹೋರಾಟ ನಡೆಯುತ್ತಿದ್ದು, ಈವರೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಿಲ್ಲ ಸಮಸ್ಯೆ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಿ ಡಬ್ಲ್ಯೂ ಆರ್ ಸಿ ಯನ್ನು ರಚನೆ ಮಾಡಿದ್ದು ಅಧಿಕಾರಿ ಮಂಡಳಿಯ ಆದೇಶದಂತೆ ನೀರು ಬಿಡುತ್ತಿದ್ದು. ರಾಜ್ಯದಲ್ಲಿ ಮಳೆಯ ಅಭಾವದಿಂದ ಡ್ಯಾಮ್ ನಲ್ಲಿ ನೀರು ಶೇಖರಣೆ ಇಲ್ಲದಿದ್ದರೂ ವಾಸ್ತವ ಅಂಶವನ್ನು ಪರಿಗಣಿಸದೆ ತಮಿಳುನಾಡಿಗೆ ಬೀರು ಬಿಡುತ್ತಿರುವುದು ಖಂಡನೀಯ ಎಂದು ದೂರಿದರು. ಜಯ ಕರ್ನಾಟಕ ರಾಜ್ಯ ಅಧ್ಯಕ್ಷ ಬಿಎನ್ ಜಗದೀಶ್ ಮತ್ತು ರಾಜ್ಯ ಸಮಿತಿಯ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಬಂದ್ ರ‍್ಯಾಲಿಯಲ್ಲಿ ರೈತ ಮುಖಂಡ ಅಬ್ಬಣಿ ಶಿವಪ್ಪ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಬಣಕನಹಳ್ಳಿ ನಟರಾಜ್, ಕನ್ನಡ ಮಿತ್ರ ಮುನಿವೆಂಕಟ, ಕೋ.ನಾ.ಪ್ರಭಾಕರ್, ಹೊಳಲಿ ಪ್ರಕಾಶ್, ಡಾ.ಡಿ.ಕೆ.ರಮೇಶ್, ಚಂಬೆ ರಾಜೇಶ್, ಎಪಿಎಂಸಿ ಪುಟ್ಟರಾಜು, ಕುವೆಂಪುನಗರ ಆನಂದ್, ಕೆ.ನಾರಾಯಣಗೌಡ, ದಲಿತ್ ನಾರಾಯಣಸ್ವಾಮಿ, ಲಾಯರ್ ಸತೀಶ್, ಚೇತನ್‌ಬಾಬು, ನಳಿನಿಗೌಡ, ಜಯ ಕರ್ನಾಟಕ ಸಂಘಟನೆಯ ಕೆ.ತ್ಯಾಗರಾಜ್, ಕೊಂಡರಾಜನ ಹಳ್ಳಿ ವಿ.ಜಗದೀಶ್ , ರಾಮಮೂರ್ತಿ ನಾಯ್ಡು. ವಿ.ಅಮರನಾಥ ಸ್ವಾಮಿ. ಮಂಜುನಾಥ್ ಸಿಂಗ್. ಎಂ.ನAದೀಶ್. ಕೆ.ರಾಜು. ವಿ.ಎನ್.ಶ್ರೀಧರ್ ಬಿ.ಎಸ್.ರಮೇಶ್ ಬಾಬು ವೇಲು ಸಂಗೊAಡಹಳ್ಳಿಯ ಮುನಿಯಪ್ಪ .ಆನಂದ್. ಸುಂದರ ಮೂರ್ತಿ ನಟರಾಜ್. ಚಂದ್ರಶೇಖರ್. ಶಿವಕುಮಾರ್. ಇನ್ನಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!