• Sat. Jul 13th, 2024

PLACE YOUR AD HERE AT LOWEST PRICE

ಜಿಲ್ಲಾಡಳಿತ ವೈಫಲ್ಯ ಖಂಡಿಸಿ ಅ. ೩ ರಂದು ಬಿಜೆಪಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಕೋಲಾರ, ಅ.೦೧ : ಜಿಲ್ಲಾಡಳಿತ ವೈಫಲ್ಯ, ಕ್ಲಾಕ್ ಟವರ್ ತಲ್ವಾರ್ ದ್ವಾರ ಸೇರಿದಂತೆ ಸೆ.೨೫ರಂದು ನಡೆದ ಜನತಾ ದರ್ಶನ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಮೇಲಿನ ಕಾಂಗ್ರೆಸ್ ದೌರ್ಜನ್ಯ ಖಂಡಿಸಿ ಅ.೩ರಂದು ನಗರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ತಿಳಿಸಿದರು.

ನಗರದ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಕಛೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಶ್ರೀನಿವಾಸಪುರ ತಾಲೂಕಿನಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಂಡಿದ್ದು ಅಲ್ಲದೇ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಹಾಗೂ ರೈತರು ಮನವಿ ಕೊಟ್ಟು ಹೊರಬರುವಾಗ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ  ಸಂಸದರನ್ನು ಏಕವಚನದಿಂದ ನಿಂದಿಸಿದ್ದಾರೆ ಅ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಇದ್ದರು ಪೊಲೀಸ್ ಅಧಿಕಾರಿ ಮೂಲಕ ಸಂಸದರನ್ನು ಹೊರಗೆ ಹಾಕಲಾಗಿದೆ ಎಂದು ಆರೋಪಿಸಿದರು.

ಸರಕಾರಿ ಕಾರ್ಯಕ್ರಮದಲ್ಲಿ ಸಂಸದರನ್ನು ಹೊರಹಾಕಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಜೊತೆಗೆ ಕಾಂಗ್ರೆಸ್ ಪಕ್ಷವು ೧೩೫ ಶಾಸಕರ ಬೆಂಬಲವಿದೆಯೆ0ದು ದರ್ಪದಿಂದ ನಡೆದುಕೊಂಡಿದ್ದಾರೆ. ಸಂಸದರು ದಲಿತ ಸಮುದಾಯಕ್ಕೆ ಸೇರಿದ್ದಾರೆಂದು ಈ ರೀತಿ ವರ್ತಿಸಿದ್ದಾರೆ ಜೊತೆಗೆ ಅತಿ ಸೂಕ್ಷ್ಮ ಪ್ರದೇಶವಾದ ಕ್ಲಾಕ್ ಟವರ್ ನಲ್ಲಿ ಮುಸ್ಲಿಂ ಹಬ್ಬದ ದಿನ ತಲ್ವಾರ್ ಖಡ್ಗ ಪ್ರದರ್ಶನ ಮಾಡಿದ್ದು ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂಬುದನ್ನು ನಾವು ಯೋಚಿಸಬೇಕಾಗಿದೆ ಇದಕ್ಕೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ನೇರ ಹೊಣೆಗಾರರು ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದರು.

ಅಕ್ಟೋಬರ್ ೩ ರಂದು ಬೆಳಗ್ಗೆ ನಗರದ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಕಾಲೇಜು ವೃತ್ತ, ಗಾಂಧಿ ಚೌಕದ ಮೂಲಕ ಮೆರವಣಿಗೆ ನಡೆಸಿ ಗಾಂಧಿವನದಲ್ಲಿ ಪ್ರತಿಭಟನೆ ನಡೆಯಲಿದ್ದು ಬಿಜೆಪಿ ರಾಜ್ಯ ಮುಖಂಡರಾದ ಆರ್.ಅಶೋಕ್, ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ಡಾ.ಸಿ.ಎನ್.ಅಶ್ವತ್ಥನಾರಾಯಣ ಪಾಲ್ಗೊಳ್ಳಲಿದ್ದಾರೆ ಬಿಜೆಪಿ ಕಾರ್ಯಕರ್ತರು, ನೊಂದ ರೈತರು, ದಲಿತ ಸಂಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಮೆರವಣಿಗೆಯಲ್ಲಿ ಕತ್ತಿ ವರಸೆ ಮಾಡಿದ್ದರಿಂದ ನನ್ನ ಮೇಲೂ ಪ್ರಕರಣ ದಾಖಲಲಾಗಿದೆ ಕ್ಲಾಕ್ ಟವರ್ ವಿಷಯವನ್ನು ದಿಕ್ಕು ತಪ್ಪಿಸಲು ಈ ಕ್ರಮ ವಹಿಸಿದ್ದಾರೆ ನಾನು ಗರಡಿ ಮನೆಯಲ್ಲಿ ಕಲಿತ ಕತ್ತಿ ವಿದ್ಯೆಯನ್ನು ತೋರಿಸಿದ್ದೇನೆ ಅಷ್ಟೇ ಅದು ಹಿಂದೂ ಧರ್ಮದ ಸಂಪ್ರದಾಯವಾಗಿದೆ ಇದು ಒಂದು ಕಲೆ ಪ್ರದರ್ಶನ ಅಷ್ಟೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದಲ್ಲಿ ಹಿಂದೂ ಮುಖಂಡರನ್ನು ಗುರಿ ಮಾಡುತ್ತಿದ್ದಾರೆ. ಯಾರನ್ನೋ ಮೆಚ್ಚಿಸಲು ನನ್ನ ವಿರುದ್ದ ಎ.ಎಫ್.ಐ.ಆರ್ ದಾಖಲಾಗಿದೆ ನಾನೂ ಯಾರಿಗೂ ಕತ್ತಿ ತೋರಿಸಿಲ್ಲ ವೀರಗಾಸೆಯವರೂ ಕತ್ತಿ ತೋರಿಸುತ್ತಾರೆ ಅವರ ಮೇಲೆಯೂ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಸ್.ಬಿ ಮುನಿವೆಂಕಟಪ್ಪ, ಬಿಜೆಪಿ ನಗರಾಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ, ಮುಖಂಡ ರೋಣೂರು ಚಂದ್ರಶೇಖರ್ ಮುಂತಾದವರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!