PLACE YOUR AD HERE AT LOWEST PRICE
ಕೋಲಾರ: ನಗರದ ಪ್ರವಾಸಿ ಮಂದಿರದ ಮುಂದೆ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ಪ್ರಸಿದ್ಧ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ನೇತೃತ್ವದಲ್ಲಿ ಅಕ್ಟೋಬರ್ 12 ರಂದು ಗುರುವಾರ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡ ಹಾಗೂ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು,
ನಗರದ ತಮ್ಮ ಕಛೇರಿಯಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ನಡೆದ ಗಣೇಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಸಸಂಜೆ ಕಾರ್ಯಕ್ರಮವು ಮಳೆಯಿಂದ ಮುಂದೂಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರೊಡನೆ ಅಜಯ್ ವಾರಿಯಲ್, ಅನಿಲ್, ಐಶ್ವರ್ಯ, ಜಿ ಕನ್ನಡದ ವಿನ್ನರ್ಸ್, ಸೇರಿದಂತೆ ಡ್ಯಾನ್ಸ್ ಕಲಾವಿದರು ಭಾಗವಹಿಸಲಿದ್ದು ದಸರಾ ಹಬ್ಬದ ಮುಂಚಿತವಾಗಿ ಜಿಲ್ಲೆಯ ಜನತೆಗೆ ಸಂಗೀತ ರಸದೌತಣ ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು,
ರಸ ಸಂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಸದ ಎಸ್ ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಶಾಸಕ ಕೊತ್ತೂರು ಮಂಜುನಾಥ್ ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್, ಡಿ.ಸಿ.ಪಿ. ಡಿ.ದೇವರಾಜ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಅಖಂಡ ವಿನಾಯಕ ಮಹಾಸಭಾ ಮುಖಂಡರಾದ ನಾಮಲ್ ಮಂಜು, ಸಾ.ಮಾ ಬಾಬು, ಎಬಿವಿಪಿ ಹರೀಶ್ ಗೋವಿಂದರಾಜು, ಮಹೇಶ್, ರಮೇಶ್, ಸಂಪತ್, ಶಶಿ, ಅಡಿಕೆನಾಗ, ಮಿಥುನ್, ಸುರೇಶ್ ಇದ್ದರು