• Sat. Jul 27th, 2024

PLACE YOUR AD HERE AT LOWEST PRICE

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಧಿಕ್ಕರಿಸಿದ್ದ ಸಿದ್ದರಾಮಯ್ಯರ ನೇತೃತ್ವದ ರಾಜ್ಯ ಸರ್ಕಾರವು, ‘ರಾಜ್ಯ ಶಿಕ್ಷಣ ನೀತಿ’ ರೂಪಿಸಲು ಸಮಿತಿ ರಚಿಸಿ ಅ.11ರಂದು ಆದೇಶ ಹೊರಡಿಸಿದೆ.

ಶಿಕ್ಷಣ ತಜ್ಞ ಹಾಗೂ ಯುಜಿಸಿಯ ಮಾಜಿ ಅಧ್ಯಕ್ಷ ಪ್ರೊ.ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ 15 ಮಂದಿಯನ್ನೊಳಗೊಂಡ ಸಮಿತಿಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಎಂಟು ಮಂದಿ ವಿಷಯ ತಜ್ಞರ ಹೆಸರನ್ನೂ ಕೂಡ ಸರ್ಕಾರ ಪ್ರಕಟಿಸಿದೆ.

ಈಗ ನೇಮಿಸಿರುವ ಸಮಿತಿಯು 2024ರ ಫೆಬ್ರವರಿ 28ರೊಳಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಒಪ್ಪಿಸುವಂತೆ ನಿರ್ದೇಶನ ನೀಡಿದೆ.

15 ಮಂದಿಯ ಸದಸ್ಯರ ಪಟ್ಟಿ ಹೀಗಿದೆ.

  1. ಪ್ರೊ.ಸಂಜಯ್ ಕೌಲ್(ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಾಜಿ ಕಾರ್ಯದರ್ಶಿ, ಕೇಂದ್ರ ಶಾಲಾ ಶಿಕ್ಷಣ)
  2. ಪ್ರೊಫೆಸರ್ ಎಸ್ ಜಾಪೆಟ್(ನಿವೃತ್ತ ಉಪಕುಲಪತಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ)
  3. ಪ್ರೊಫೆಸರ್ ಜೋಗನ್ ಶಂಕರ್(ನಿವೃತ್ತ ಉಪಕುಲಪತಿ, ಕುವೆಂಪು ವಿಶ್ವವಿದ್ಯಾನಿಲಯ)
  4. ಡಾ. ಸುಧೀರ್ ಕೃಷ್ಣಸ್ವಾಮಿ(ಉಪಕುಲಪತಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಬೆಂಗಳೂರು)
  5. ಪ್ರೊಫೆಸರ್ ರಾಜೇಂದ್ರ ಚನ್ನಿ(ನಿವೃತ್ತ ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ))
  6. ಡಾ. ನಟರಾಜ್ ಬೂದಾಳು(ನಿವೃತ್ತ ಪ್ರಾಧ್ಯಾಪಕರು)
  7. ಪ್ರೊಫೆಸರ್ ಸುಧಾಂಶು ಭೂಷಣ್(ವಿಭಾಗ ಮುಖ್ಯಸ್ಥರು, ರಾಷ್ಟ್ರೀಯ ವೃತ್ತಿಪರ ಶಿಕ್ಷಣ, ಯೋಜನೆ ಮತ್ತು ಆಡಳಿತ (NIEPA), ನವದೆಹಲಿ)
  8. ಪ್ರೊಫೆಸರ್ ಪ್ರಣತಿ ಪಾಂಡಾ(ವಿಭಾಗ ಮುಖ್ಯಸ್ಥರು, ರಾಷ್ಟ್ರೀಯ ಔಪಚಾರಿಕವಲ್ಲದ ಶಿಕ್ಷಣ, ಯೋಜನೆ ಮತ್ತು ಆಡಳಿತ (NIEPA), ನವದೆಹಲಿ)
  9. ಡಾ. ಫುರ್ಕಾನ್ ಕಮರ್(ಪ್ರಾಧ್ಯಾಪಕರು, ಜಾಮಿಯಾ ಮಿಲ್ಲೀಯಾ ವಿಶ್ವವಿದ್ಯಾನಿಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್, ನವದೆಹಲಿ)
  10. ಡಾ. ಶರತ್ ಅನಂತಮೂರ್ತಿ(ಪ್ರಾಧ್ಯಾಪಕರು, ಸ್ಕೂಲ್ ಆಫ್ ಫಿಸಿಕ್ಸ್, ಹೈದರಾಬಾದ್ ವಿಶ್ವವಿದ್ಯಾಲಯ)
  1. ಪ್ರೊಫೆಸರ್ ಎ ನಾರಾಯಣ(ಪ್ರಾಧ್ಯಾಪಕರು, ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯ, ಬೆಂಗಳೂರು)
  2. ಡಾ. .ವಿ.ಪಿ. ನಿರಂಜನಾರಾಧ್ಯ(ಶಿಕ್ಷಣ ತಜ್ಞ ಹಾಗೂ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿಯ(ಎನ್‌ಎಲ್‌ಎಸ್‌ಐಯು) ಸಾರ್ವತ್ರೀಕರಣ ಶಿಕ್ಷಣ ವಿಭಾಗದ ಮುಖ್ಯಸ್ಥರು, ಬೆಂಗಳೂರು)
  3. ಡಾ.ಎಂ.ಎಸ್.ತಳವಾರ(ನಿವೃತ್ತ ಪ್ರಾಧ್ಯಾಪಕರು)
  4. ಡಾ.ಸಂತೋಷ್ ನಾಯ್ಕ್.ಆರ್.(ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಕರ್ನಾಟಕ ಮುಕ್ತ ವಿವಿ)
  5. ಡಾ.ವಿನಯ ಒಕ್ಕುಂದ(ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾಂಡೇಲಿ, ಉ.ಕನ್ನಡ)

ಇವರುಗಳಲ್ಲದೇ, ಎಂಟು ಮಂದಿ ವಿಷಯ ತಜ್ಞರ ಹೆಸರನ್ನೂ ಕೂಡ ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದ್ದು, ಸಮಿತಿಯು ಅವರನ್ನು ಸಂದರ್ಭಕ್ಕೆ ತಕ್ಕಂತೆ ಅವರ ಸಲಹೆಗಳನ್ನು ಬಳಸಿಕೊಳ್ಳಲು ಸೂಚನೆ ನೀಡಿದೆ.

ಎಂಟು ಮಂದಿ ವಿಷಯ ತಜ್ಞರು

  1. ಯೋಗೇಂದ್ರ ಯಾದವ್
  2. ಪ್ರೊಫೆಸರ್ ರಹಮತ್ ತರೀಕೆರೆ
  3. ಜಾನಕಿ ನಾಯರ್
  4. ಡಾ.ಎಸ್.ಚಂದ್ರಶೇಖರ ಶೆಟ್ಟಿ
  5. ಸೋನಮ್ ವಾಂಗ್ಚುಕ್
  6. ಪ್ರೊಫೆಸರ್ ವಲೇರಿಯನ್ ರೋಡ್ರಿಗಸ್
  7. ಪ್ರೊಫೆಸರ್ ಸಬೀಹಾ ಭೂಮಿಗೌಡ
  8. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪದನಿಮಿತ್ತ ನಿರ್ದೇಶಕರು(ಹಾಲಿ ಈ ಸ್ಥಾನದಲ್ಲಿ ನಿವೃತ್ತ ಪ್ರೊಫೆಸರ್ ಚಂದ್ರ ಪೂಜಾರಿ ಇದ್ದಾರೆ)

ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ. ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ. ಈ ಸಮಿತಿಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಮತ್ತು ಅವರ ಮನೋವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಲು ಸೂಕ್ತ ಶಿಫಾರಸುಗಳನ್ನು ನೀಡಲಿದೆ ಎಂಬ ಭರವಸೆಯಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು ದೇಶಕ್ಕೆ ಮಾದರಿ ಶಿಕ್ಷಣ ನೀತಿಯಾಗಿ ಹೊರಹೊಮ್ಮಲಿ ಎಂದು ಹಾರೈಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!