• Fri. Mar 1st, 2024

PLACE YOUR AD HERE AT LOWEST PRICE

ಬೆಂಗಳೂರು:ದೆವ್ವದ ಮುಖವಾಡ ಧರಿಸಿ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ರಸ್ತೆಗಳಲ್ಲಿ ದೆವ್ವಗಳ ಮುಖವಾಡ ಧರಿಸಿ ರಸ್ತೆಗಳಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಇವರು ʼಡೆವಿಲ್ಸ್ ಆನ್ ರೋಡ್ʼ ಎಂದು ತಮ್ಮನ್ನ ತಾವು ಕರೆದುಕೊಳ್ಳುತ್ತಿದ್ದರು.

ಬೈಕ್‌ಗಳನ್ನ ವಶಕ್ಕೆ ಪಡೆದ ಪೊಲೀಸರು ಅದರ ಬಿಡಿ ಭಾಗಗಳನ್ನು ತೆಗೆದಿದ್ದಾರೆ. ಈಗ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದ ವೀಲರ್ಸ್‌ಗಳ ವಿರುದ್ಧ 14 ಪ್ರಕರಣ ದಾಖಲಾಗಿದೆ.

ಆರೋಪಿಗಳ ಪ್ರೊಫೈಲ್ ತೆರೆದ ಪೊಲೀಸರು ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸಲು ಸಿದ್ಧತೆ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು, “ನೀವು ದ್ವಿಚಕ್ರ ವಾಹನದ ಒಂದು ಚಕ್ರವನ್ನು ಎತ್ತುವಿರಿ. ನಾವು ನಿಮ್ಮ ದ್ವಿಚಕ್ರ ವಾಹನವನ್ನು 4 ವ್ಹೀಲರ್‌ನಲ್ಲಿ ಟ್ರ್ಯಾಕ್ ಮಾಡುತ್ತೇವೆ. ಉಚಿತ ವ್ಹೀಲರ್‌ಗಳಿಗೆ ನಾವು ಉಚಿತ ಲಿಫ್ಟರ್‌ಗಳು” ಎಂದು ಬರೆದುಕೊಂಡಿದ್ದಾರೆ.

“ದೀಪಾವಳಿ ಹಿಂದಿನ ದಿನ ವ್ಹೀಲಿಂಗ್ ಮಾಡಿ ಅಪಾಯಕ್ಕೆ ಸಿಲುಕಿ ಆರಿ ಹೋಗಬಹುದಾದ ದೀಪಗಳನ್ನು ರಕ್ಷಿಸಿ, ಅವರ ಪೋಷಕರಿಗೆ ಮನೆಯ ನಂದಾ ದೀಪ ಮಾಡಿಕೊಳ್ಳುವಂತೆ ಮಾಡಿ ದೀಪಾವಳಿ ಆಚರಿಸಿದ ನಮ್ಮ ಕಾಮಾಕ್ಷಿಪಾಳ್ಯ ಟ್ರಾಫಿಕ್ ಪಿಎಸ್ ತಂಡಕ್ಕೆ ಅಭಿನಂದನೆಗಳು” ಎಂದು ಬರೆಯಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!