• Fri. Mar 1st, 2024

PLACE YOUR AD HERE AT LOWEST PRICE

ದೀಪಾವಳಿ ಹಬ್ಬದ ಹಿನ್ನೆಲೆ, ಎಲ್ಲೆಡೆ ಸಂಭ್ರಮದಿಂದ ಲಕ್ಷ್ಮೀ ಪೂಜೆ ಮಾಡಲಾಗುತ್ತಿದೆ. ಆದರೆ, ಲಕ್ಷ್ಮೀ ಪೂಜೆ ಮಾಡುವ ವೇಳೆ ದೇವಿಗೆ ಹಾಕಿದ್ದ ವಜ್ರ ಮತ್ತು ಚಿನ್ನಾಭರಣಗಳು ಕಳ್ಳತನವಾಗಿದ್ದು, ಮನೆಯವರು ಕಂಗಾಲಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜವರೇಗೌಡ ನಗರದ ಅಪಾರ್ಟ್‌ಮೆಂಟ್ ನ  ಪ್ರೀತಿ ಎಂಬವರ ಮನೆಯಲ್ಲಿ ಪೂಜೆಗೆ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ.

ಲಕ್ಷ್ಮೀಪೂಜೆಗೆ ಒಂದು ಜೊತೆ ಬಳೆ, ಚಿನ್ನದ ಪೆಂಡೆಂಟ್, ಎರಡು ಜೊತೆ ವಜ್ರದ ಸ್ಟಡ್ಸ್, ಚಿನ್ನದ ಮಾಂಗಲ್ಯ ಸರ, ಎರಡು ಜೊತೆ ಚಿನ್ನದ ಕಿವಿ ಓಲೆ ಚಿನ್ನ ಹಾಗೂ ವಜ್ರದ ಓಲೆಗಳನ್ನು ಇಡಲಾಗಿತ್ತು.

ಮನೆಯವರು ಮನೆಯಿಂದ ಹೊರಗಡೆ ಹೋಗಿ ಬರುವಷ್ಟರಲ್ಲಿ ಚಿನ್ನ ಮತ್ತು ವಜ್ರ ಕಳ್ಳತನವಾಗಿದೆ. ಮನೆಯಲ್ಲಿ ಇದ್ದ ಆಭರಣ ಏಕಾಏಕಿ ಕಳ್ಳತನವಾದ ಕಾರಣ ಮನೆಯ ಮಂದಿಯೆಲ್ಲ ಕಂಗಾಲಾಗಿದ್ದಾರೆ.

ಈ ಸಂಬಂಧ ಆರ್‌ಆರ್‌ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!