ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರದಲ್ಲಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ:ASI ಅಮಾನತ್ತು.
ಮದ್ಯದ ಅಮಲಿನಲ್ಲಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ. ನಾರಾಯಣಸ್ವಾಮಿ ಅವರನ್ನು ಅಮಾನತು ಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶನಿವಾರ, ಕೋಲಾರದ ಬಂಗಾರಪೇಟೆ ವೃತ್ತದಲ್ಲಿದ್ದ ಬಾರ್‌ವೊಂದಕ್ಕೆ ಎಎಸ್‌ಐ ನಾರಾಯಣಸ್ವಾಮಿ ತೆರೆಳಿದ್ದರು. ಈ ವೇಳೆ, ಬಾರ್ ಸಿಬ್ಬಂದಿ ತಮಗೆ ನಮಸ್ಕಾರ ಮಾಡಲಿಲ್ಲವೆಂದು ಗಲಾಟೆ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಎಎಸ್‌ಐ ವಿರುದ್ಧ ಬಾರ್ ಸಿಬ್ಬಂದಿ ದೂರು ನೀಡಿದ್ದಾರೆ. ಅಲ್ಲದೆ, ಬಾರ್ ಅಸೋಷಿಯೇಷನ್ ಕೂಡ ದೂರು ದಾಖಲಿಸಿದೆ. ಹೀಗಾಗಿ, ಎಎಸ್‌ಐ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.