• Thu. May 2nd, 2024

PLACE YOUR AD HERE AT LOWEST PRICE

ಲೂಸ್ ಮಾದ ಯೋಗಿ ನಟನೆಯ ‘ರೋಸಿ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ತಮಿಳು ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಿ ಫಸ್ಟ್ ಲುಕ್ ರಿವೀಲ್ ಆಗಿತ್ತು. ಇದೆಲ್ಲದರ ಮಧ್ಯೆ ನಟ ಯೋಗಿ ಬೆಂಗಳೂರಿನಲ್ಲಿ ತಮಿಳು ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಒಂದ್ಕಾಲದಲ್ಲಿ ಲೂಸ್ ಮಾದ ಯೋಗಿ ಸಿನಿಮಾಗಳಿಗೆ ಭಾರೀ ಕ್ರೇಜ್ ಇತ್ತು. ಆದರೆ ಈಗ ಅಷ್ಟಾಗಿ ಯೋಗಿ ಸಿನಿಮಾಗಳು ಸದ್ದು ಮಾಡ್ತಿಲ್ಲ. ಅವರ 50ನೇ ಸಿನಿಮಾ ‘ರೋಸಿ’ ಬಹಳ ಕುತೂಹಲ ಮೂಡಿಸಿದೆ. ‘ಹೆಡ್‌ಬುಷ್’ ಸಿನಿಮಾ ಮಾಡಿದ್ದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜಾಜಿ ನಗರದ ನವರಂಗ್ ಥಿಯೇಟರ್ ಆವರಣದಲ್ಲಿ ಚಿತ್ರದ ಮುಹೂರ್ತ ನೆರವೇರಿಸಿ ಪೋಸ್ಟರ್ ಅನಾವರಣ ಮಾಡಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು.

‘ರೋಸಿ’ ಸಿನಿಮಾ ಚಿತ್ರೀಕರಣ ಸಾಗುತ್ತಿದ್ದು ಚಿತ್ರದ ಒಂದೊಂದೇ ಪಾತ್ರವನ್ನು ಪರಿಚಯಿಸಲಾಗುತ್ತಿದೆ. ರೋಸಿ ಭಾಯ್ ಆಗಿ ಚಿತ್ರದಲ್ಲಿ ಯೋಗಿ ಅಬ್ಬರಿಸಲಿದ್ದಾರೆ. ಬಳೆ ರೀತಿಯ ಮೂಗತಿ ಧರಿಸಿ, ಸಿಗರೇಟ್‌ ಸೇದುತ್ತಾ ಯೋಗಿ ಕಾಣಿಸಿಕೊಂಡಿದ್ದ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿತ್ತು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಿತ್ತು ಚಿತ್ರತಂಡ.

ಇದೆಲ್ಲದರ ನಡುವೆ ನಟ ಯೋಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ತಮಿಳಿನಲ್ಲಿ ಮಾತನಾಡಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಬೆಂಗಳೂರಿನ ವಿವೇಕ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಿ ಭಾಗವಹಿಸಿದ್ದಾರೆ. ಈ ವೇಳೆ ತಮಿಳಿನಲ್ಲೇ ತಮ್ಮ ‘ರೋಸಿ’ ಸಿನಿಮಾ ಬಗ್ಗೆ ಹೇಳಿದ್ದಾರೆ.

“ಮುಂದಿನ ವರ್ಷ ‘ರೋಸಿ’ ಸಿನಿಮಾ ಬಿಡುಗಡೆಯಾಗುತ್ತದೆ. ಎಂಜಾಯ್ ಮಾಡಿ. ಸಖತ್ತಾಗಿರುತ್ತದೆ. ಎಲ್ಲರಿಗೂ ಒಳ್ಳೆಯ ಟ್ರೀಟ್. ವಿಷ್ಯುವಲ್ ಟ್ರೀಟ್. ಸ್ಯಾಂಡಿ ಮಾಸ್ಟರ್ ಡ್ಯಾನ್ಸ್ ಸೂಪರ್. ನಾನು ಅವರ ದೊಡ್ಡ ಅಭಿಮಾನಿ. ಡ್ಯಾನ್ಸ್ ಮಾಡಲಿಲ್ಲ ಅಂದ್ರೆ ಬಿಡಲ್ವಾ? ಡ್ಯಾನ್ಸ್ ಬಳಿಕ ಆಡೋಣ ಡ್ಯಾನ್ಸ್ ಮಾಸ್ಟರ್” ಎಂದು ತಮಿಳಿನಲ್ಲಿ ಯೋಗಿ ಹೇಳಿದ್ದಾರೆ. ಬಳಿಕ ಕನ್ನಡದಲ್ಲಿ ಮಾತು ಮುಂದುವರೆಸಿದ್ದಾರೆ.

ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಜಾಸ್ತಿಯಾಗುತ್ತಿದೆ. ಇಂತಹ ಸಮಯದಲ್ಲಿ ಕನ್ನಡದ ನಟನೊಬ್ಬ ತಮಿಳಿನಲ್ಲಿ ಮಾತನಾಡಿ ಯಾವ ರೀತಿಯ ಸಂದೇಶ ರವಾನಿಸಿದ್ದಾರೆ? ಬೆಂಗಳೂರಿನಲ್ಲಿ ಇರುವವರಿಗೆ ಕನ್ನಡ ಬರುವುದಿಲ್ಲವಾ? ಯೋಗಿ ಕನ್ನಡದಲ್ಲೇ ಮಾತನಾಡಬೇಕಿತ್ತು. ಅದು ಬಿಟ್ಟು ತಮಿಳು ಭಾಷಿಕರು ಆ ಭಾಗದಲ್ಲಿ ಜಾಸ್ತಿ ಇದ್ದಾರೆ ಎನ್ನುವ ತಮಿಳಿನಲ್ಲಿ ಮಾತನಾಡಿ ಓಲೈಸುವ ಅಗತ್ಯ ಏನಿತ್ತು? “ಇಲ್ಲಿನ ತಮಿಳರಿಗೆ ನೀವು ಕನ್ನಡ ಕಲಿಬೇಡಿ ನಾವೇ ತಮಿಳು ಕಲಿತಿವಿ ಅನ್ನೋ ಸಂದೇಶ ನೀಡಲು ಹೊರಟ್ರಾ ನೀವು..?” ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸೂರಿ ನಿರ್ದೇಶನದ ‘ದುನಿಯಾ’ ಚಿತ್ರದಲ್ಲಿ ಯೋಗಿ ಸಣ್ಣ ಪಾತ್ರ ಮಾಡಿದ್ದರು. ಲೂಸ್‌ ಮಾದ ಆಗಿ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ‘ನಂದ ಲವ್ಸ್ ನಂದಿತಾ’ ಚಿತ್ರದ ಮೂಲಕ ಹೀರೊ ಆಗಿದ್ದರು. ಸದ್ಯ 50 ಸಿನಿಮಾಗಳ ಗಡಿಯಲ್ಲಿದ್ದಾರೆ. ಈ ಹಾದಿಯಲ್ಲಿ ಬಹಳ ಏಳುಬೀಳು ಕಂಡಿದ್ದಾರೆ. ಇದರಿಂದ ಸಾಕಷ್ಟು ಪಾಠ ಕಲಿತಿರೋದಾಗಿಯೂ ಯೋಗಿ ‘ರೋಸಿ’ ಮುಹೂರ್ತ ಸಮಾರಂಭದಲ್ಲಿ ಹೇಳಿದ್ದರು.

‘ಒಂಭತ್ತನೇ ದಿಕ್ಕು’, ‘ಹೆಡ್‌ ಬುಷ್’ ಚಿತ್ರಗಳಲ್ಲಿ ಯೋಗಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ‘ಲಂಕಾಸುರ’, ‘ಆಡಿದ್ದೇ ಆಟ’, ‘ಕಂಸ’, ‘ಬ್ಯಾಚುಲರ್ ಪಾರ್ಟಿ’, ‘ನಾನು ಅದು ಮತ್ತು ಸರೋಜ’, ‘ಹೆಡ್‌ಬುಷ್- 2’, ‘ಸಿದ್ಲಿಂಗು- 2’ ಸಿನಿಮಾಗಳು ಯೋಗಿ ಕೈಯಲ್ಲಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!