• Fri. May 3rd, 2024

PLACE YOUR AD HERE AT LOWEST PRICE

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ

ಕೋಲಾರ,ಏಪ್ರಿಲ್.೨೧ : ಲೋಕಸಭ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕಳೆದ ೫೦ ವರ್ಷಗಳಿಂದ ಈ ಜಿಲ್ಲೆಯ ಬಲಗೈ ಸಮಾಜದೊಳಗಿನ ಒಳಪಂಗಡವಾದ ಬಹುಸಂಖ್ಯಾತರಾದ ಚಿಕ್ಕತಾಳಿಯವರು ಸುಮಾರು ೨.೫ ಲಕ್ಷ್ಯ ಮತದಾರರಿದ್ದು, ಜಿ.ವೈ.ಕೃಷ್ಣನ್ ನಿಂದ ಹಿಡಿದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಕೆ.ಹೆಚ್.ಮುನಿಯಪ್ಪನವರ ತನಕ ಎಲ್ಲರನ್ನು ಬೆಂಬಲಿಸಿದ ಚಿಕ್ಕತಾಳಿ ಸಮುದಾಯವನ್ನು ೨೦೨೪ರ ಚುನಾವಣೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗಣಿಸಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ನಗರದ ಹೊರವಲಯದ ಖಾಸಗೀ ಸಭಾಂಗಣದಲ್ಲಿ ಸಭೆ ಸೇರಿದ್ದ ಅರವ ಭಾಷೆ ಮಾತನಾಡುವ ಬಲಗೈ ಸಮಾಜದ ಮುಖಂಡರು ಬೃಹತ್ ಸಂಖ್ಯೆಯಲ್ಲಿ ಸಭೆ ಸೇರಿ ಚುನಾವಣೆಯಲ್ಲಿ ಸಮಾಜವನ್ನು ಕಡೆಗಣಿಸಿರುವ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರು ಸುಮಾರು ಶೆ.೩೮ರಷ್ಟು ಇದ್ದು, ಅವರಲ್ಲಿ ಶೇ.೫೦ಕ್ಕೂ ಹೆಚ್ಚು ಜನ ಅರವ ಭಾಷೆಯನ್ನು ಮಾತನಾಡುವ ಬಲಗೈ ಸಮುದಾಯದ ಚಿಕ್ಕತಾಳಿಯವರು ಇದ್ದಾರೆ. ಅಂದಾಜು ೩ ಲಕ್ಷ ಮತದಾರರು ಈ ಸಮಾಜದಿಂದ ೭೦೦ಕ್ಕೂ ಅಧಿಕ ಗ್ರಾಮ ಪಂಚಾಯ್ತಿ ಸದಸ್ಯರು ಆಯ್ಕೆಯಾಗಿದ್ದಾರೆ. ಇನ್ನುಳಿದ ಶೇ.೫೦ರಲ್ಲೇ ಇತರೆ ಪರಿಶಿಷ್ಟ ಸಮಾಜದವರಿದ್ದಾರೆ. ಆದರೂ, ಅವಕಾಶಗಳನ್ನು ನೀಡುವಾಗ ಬಹುಸಂಖ್ಯಾತರಾದ ಚಿಕ್ಕತಾಳಿ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಮಾಡಿದ್ದರೂ, ಸ್ವಾಮಿ ನಿಷ್ಟೆಯಿಂದ ಕಾಂಗ್ರೆಸ್ ಬೆಂಬಲಿಸಿದ್ದೆವು. ಇಂದಿಗೂ ನಮ್ಮನ್ನು ಕಡೆಗಣಿಸಿಕೊಂಡು ಬರುವುದು ನೋವಿನ ಸಂಗತಿಯಾಗಿದೆ ಎಂದು ಹಲವು ಮುಖಂಡರು ಅಭಿಪ್ರಾಯಪಟ್ಟರು.

ಇನ್ನೂ ಈಗ ನಡೆಯಬೇಕಿರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರಿಗೆ ಟಿಕೆಟ್ ನೀಡದಿದ್ದಲ್ಲಿ ೫೦ ವರ್ಷಗಳಿಂದ ಪಕ್ಷಕ್ಕಾಗಿ ಬೆವರು ಸುರಿಸಿದ ಅರವ ಭಾಷಿಗರ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದೆವು. ಆದರೂ, ಹೈಕಮಾಂಡ್ ಕೆ.ವಿ.ಗೌತಮ್ ಅವರಿಗೆ ನೀಡಿದೆ. ಟಿಕೆಟ್ ಪಡೆದ ಅಭ್ಯರ್ಥಿ ಗೌತಮ್ ರವರು ಇಲ್ಲಿಯ ತನಕ ಈ ಬಹುಸಂಖ್ಯಾತ ಸಮಾಜವನ್ನು ನಿರ್ಲಕ್ಷಿಸುವುದಾದರೆ ನಮ್ಮ ಬೆಂಬಲವನ್ನು ಯಾರಿಗೆ ನೀಡಬೇಕೆಂದು ಸ್ಪಷ್ಟತೆಯ ಅಗತ್ಯದ ಬಗ್ಗೆ ಮಾತನಾಡಿದ ಮುಖಂಡರು, ಏಪ್ರಿಲ್ ೨೨ರ ತನಕ ಕಾದು ನೋಡುವ ತೀರ್ಮಾನಕ್ಕೆ ಅಂತಿಮವಾಗಿ ಎಲ್ಲರೂ ಒಪ್ಪಿಗೆ ನೀಡಿ ಸಭೆ ಮುಕ್ತಾಯಗೊಳಿಸಿದರು.

ಸಭೆಯಲ್ಲಿ ಸಮುದಾಯ ಮುಖಂಡರಾದ ಡಾ. ಎಂ.ಚoದ್ರಶೇಖರ್, ಪ್ರೊ. ಎಂ.ನಾರಾಯಣ್, ಜೆ.ಶ್ರೀನಿವಾಸ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಖಾದ್ರಿಪುರಬಾಬು, ಐ.ಎನ್.ಟಿ.ಯು.ಸಿ. ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ, ಕಾರ್ ವೆಂಕಟೇಶ್, ಕದಂಬ ಸೋಮಣ್ಣ, ಪಿ.ದೇವಕುಮಾರ್, ಕಾಶಿಪುರ ಮುನಿಯಪ್ಪ, ಮಾರ್ಜೇನಹಳ್ಳಿ ಬಾಬು, ದಲಿತ್ ನಾರಾಯಣಸ್ವಾಮಿ, ಮತ್ತಿಕುಂಟೆ ನಾರಾಯಣಸ್ವಾಮಿ, ಖಾದ್ರಿಪುರ ನಿರಂಜನ್, ನರಸಾಪುರ ಚಂದ್ರು, ಗಾಂಧೀನಗರ ಶ್ರೀರಂಗ ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!