PLACE YOUR AD HERE AT LOWEST PRICE
ಕ್ರಿಕೆಟ್ ವಿಶ್ವಕಪ್ ಸೆಮಿ ಫೈನಲ್ ಆಟದಲ್ಲಿ ದಕ್ಷಿಣ ಆಫ್ರಿಕಾಗೆ ಸೂಲು:ಭಾರತ vs ಆಸ್ಟ್ರೇಲಿಯಾ ಫೈನಲ್.
ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ನ.19ರಂದು ಗುಜರಾತಿನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲಿ ಆಡಲಿವೆ.
ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿದ್ದ ದಕ್ಷಿಣ ಆಫ್ರಿಕಾ ಆಟಗಾರರು ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚು ಹೋರಾಟ ನೀಡಲು ವಿಫಲರಾಗಿ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಐದನೇ ಬಾರಿಯೂ ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ಚೋಕರ್ಸ್ ಪಟ್ಟ ಉಳಿಸಿಕೊಂಡರು.
ಕೋಲ್ಲತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 213 ರನ್‌ಗಳ ಸಾಧರಣ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 8ನೇ ಬಾರಿ ಫೈನಲ್ ತಲುಪಿತು. ನ.19ರಂದು ಗುಜರಾತಿನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಸೆಣಸಲಿದೆ.
ಆಸೀಸ್ ಪರ ಟ್ರಾವಿಸ್ ಹೆಡ್(62), ಸ್ಟೀವನ್ ಸ್ಮಿತ್ (30), ಡೇವಿಡ್ ವಾರ್ನರ್ (29) ಹಾಗೂ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ (28) ಹಾಗೂ 8ನೇ ವಿಕೆಟ್ ಜೊತೆಯಾಟದಲ್ಲಿ ತಾಳ್ಮೆಯಿಂದ 22 ರನ್‌ಗಳ ಆಟವಾಡಿದ ಮಿಚೆಲ್ ಸ್ಟಾರ್ಕ್(16) ಹಾಗೂ ನಾಯಕ ಪ್ಯಾಟ್ ಕಮಿನ್ಸ್(14) ಕೂಡ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾದರು.
ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ 42/2, ಜೆರಾಲ್ಡ್ ಕೋಟ್ಜಿ 47/2 ಕೇಶವ್ ಮಹಾರಾಜ್,,ಏಡನ್ ಮರ್ಕರಂ,ಕಗಿಸೊ ರಬಾಡ ತಲಾ ಒಂದೊಂದು ವಿಕೆಟ್ ಪಡೆದು ಕೊನೆಯವರೆಗೂ ಗೆಲುವಿನ ಆಸೆ ಮೂಡಿಸಿದರೂ ಆಸೀಸ್ ತಂಡವನ್ನು ಆಲೌಟ್ ಮಾಡಲಾಗಲಿಲ್ಲ. ದುರ್ಬಲ ಫೀಲ್ಡಿಂಗ್ ಕೂಡ ಸೋಲಿಗೆ ಕಾರಣವಾಯಿತು. ಹಲವು ಕ್ಯಾಚುಗಳನ್ನು ಕೈಚಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು.
ಆಸ್ಟ್ರೇಲಿಯಾ ಉತ್ತಮ ಬೌಲಿಂಗ್, ವ್ಯರ್ಥವಾದ ಮಿಲ್ಲರ್ ಶತಕ.
ಈ ಮೊದಲು ಟಾಸ್ ಗೆದ್ದ ಹರಿಣ ತಂಡದ ನಾಯಕ ತೆಂಬಾ ಬವುಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಾವು ಮೊದಲು ಬ್ಯಾಟಿಂಗ್ ನಡೆಸಿದ ಬಹುತೇಕ ಪಂದ್ಯಗಳಲ್ಲಿ 300ರ ಗಡಿ ದಾಟಿದ್ದ ಹರಿಣಗಳ ತಂಡ ಇಂದು ಆಸೀಸ್ ಬೌಲರ್‌ಗಳ ದಾಳಿಗೆ 212 ರನ್‌ಗಳಿಗೆ ಮುಗ್ಗರಿಸಿತು.
ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ ಶತಕ ಗಳಿಸಿ ಏಕಾಂಗಿಯಾಗಿ ಹೋರಾಟ ನಡೆಸಿದರು. 24ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಕ್ರೀಸ್ಗೆ ಬಂದ ಮಿಲ್ಲರ್ 48ನೇ ಓವರ್ವರೆಗೂ ಕ್ರೀಸಿನಲ್ಲಿ ನಿಂತು ಅಮೋಘ ಶತಕ ಸಿಡಿಸಿದರು. ಮಿಲ್ಲರ್ ಹಾಗೂ ಕ್ಲಾಸೆನ್ ಬಿಟ್ಟರೆ ಉಳಿದ ಆಟಗಾರರು ಸಂಪೂರ್ಣ ವಿಫಲರಾದರು.
ಕ್ಲಾಸೆನ್ (47) ಜೊತೆಗೆ ಉತ್ತಮ ಆಟವಾಡಿದ ಮಿಲ್ಲರ್, ವಿಕೆಟ್ಗಳು ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದರು. 101 ರನ್ ಗಳಿಸಿದ ಮಿಲ್ಲರ್ 48ನೇ ಓವರ್‌ನಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಔಟಾದರು. ಅವರ 116 ಎಸೆತಗಳ ಆಟದಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳಿದ್ದವು.
ಆಸೀಸ್ ಪರ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ತಲಾ 3 ವಿಕೆಟ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.