• Sat. May 4th, 2024

PLACE YOUR AD HERE AT LOWEST PRICE

ದೇಶವನ್ನು ಆಳುವ ಸಾಮರ್ಥ್ಯ ಇರೋದು ನರೇಂದ್ರ ಮೋದಿಗೆ ಮಾತ್ರ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಮಾಲೂರು, ಏಪ್ರಿಲ್. ೨೦ : ಇಂಡಿಯಾ ಒಕ್ಕೂಟದಲ್ಲಿ ಒಮ್ಮತದ ನಾಯಕನನ್ನು ಗುರುತಿಸಿ ತೋರಿಸಲಿ, ಆದರೆ, ಎನ್.ಡಿ.ಎ. ಮೈತ್ರಿಕೂಟಕ್ಕೆ ಸುಭದ್ರ ಸರ್ಕಾರ ಕೊಟ್ಟಿರುವ ನರೇಂದ್ರ ಮೋದಿ ನಾಯಕರಾಗಿದ್ದಾರೆ, ಭಾರತ ದೇಶವನ್ನು ಆಳುವ ಸಾಮರ್ಥ್ಯ ಇರೋದು ನರೇಂದ್ರ ಮೋದಿಗೆ ಮಾತ್ರ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷ ವರಿಷ್ಠ ಹೆಚ್.ಡಿ.ದೇವೇಗೌಡ ಇಂಡಿಯಾ ಮೈತ್ರಿಕೂಟಕ್ಕೆ ಸವಾಲೆಸದರು.

ಮಾಲೂರು ಪಟ್ಟಣದ ಹೊರವಲಯದಲ್ಲಿರುವ ಆರ್.ಜಿ.ರೆಸಾರ್ಟ್ನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಒಂದು ಬಣಕ್ಕೆ ಯಾರೂ ನಾಯಕರಿಲ್ಲ ಇನ್ನೊಂದು ಬಣಕ್ಕೆ ಸುಭದ್ರ ಸರ್ಕಾರ ಕೊಟ್ಟಿರುವ ಮೋದಿ ಮುಖ್ಯಸ್ಥಯಿದ್ದಾರೆ. ನಿಷ್ಪಕ್ಷಪಾತವಾಗಿ ಇಂಡಿಯಾ ಒಕ್ಕೂಟದಲ್ಲಿ ಒಬ್ಬ ನಾಯಕನಾಗೋದಕ್ಕೆ ಏನು ಮಾಡಿದ್ದಾರೆ. ಅವರು ಒಬ್ಬ ನಾಯಕನನ್ನು ಗುರುತಿಸದರೆ ಆ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ತಿಳಿಸಿದರು.

ಯಾವುದೇ ಸಂದರ್ಭದಲ್ಲಿ ವಿರೋಧ ಪಕ್ಷಗಳು ಎನ್‌ಡಿಎ ವಿರುದ್ಧ ಆಪಾಧನೆ ಮಾಡುವ ಪ್ರಶ್ನೆಯೇ ಇಲ್ಲ. ನಾನು ಕೋಲಾರದಲ್ಲಿ ರಾಹುಲ್ ಗಾಂಧಿ ಭಾಷಣ ಬಗ್ಗೆ ವ್ಯಾಖ್ಯಾನ ಮಾಡಲ್ಲ. ತೀವ್ರ ತರವಾಗಿ ಓವರ್ ಸ್ಪೀಡ್ ಆದ್ರೆ ಕಷ್ಟ ಆಗುತ್ತೆ. ದೇಶದಲ್ಲಿ ಭದ್ರ ಸರ್ಕಾರ ಕೊಡುವ ಶಕ್ತಿಯಿರೋದು ನರೇಂದ್ರ ಮೋದಿ ಬಿಟ್ಟು ಯಾರಿದ್ದಾರೆ. ೯೧ನೇ ವಯಸ್ಸಿನಲ್ಲಿ ಯಾವುದೇ ಆಕಾಂಕ್ಷೆ ಇಲ್ಲದೆ ಸೇರಿದ್ದೇವೆ. ಪಕ್ಕದ ಚೈನಾ, ರಷ್ಯಾ ಏನೂ ಮಾಡಿದ್ದಾರೆ ಯೋಚನೆ ಮಾಡೋಣ. ನಿಮ್ಮ ಮನಸ್ಸಿಗೆ ಏನಾದರೂ ನೋವಾಗಿದ್ದರೆ ಕ್ಷಮಿಸಿ. ಲೋಕಸಭಾ ಎಂಪಿ ಮುನಿಸ್ವಾಮಿ ತಮ್ಮ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದಾರೆ. ನಾನು ಈ ವಯಸ್ಸಲ್ಲಿ ತುಮಕೂರುನಲ್ಲಿ ಸಭೆ, ಚಿಕ್ಕಮಗಳೂರುನಲ್ಲಿ, ಮೈಸೂರುನಲ್ಲಿ ಸಭೆ ಮಾಡಿದ್ದೇನೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನದಲ್ಲಿ ಪ್ರಧಾನಿ ಜೊತೆ ಭಾಗವಹಿಸಿದ್ದೆ.

ರಾಜ್ಯದ ೨೮ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ, ಮೋದಿ ೪೦೦ ಸ್ಥಾನಗಳನ್ನು ಬರೋದಕ್ಕೆ ಸಹಾಯ ಮಾಡುತ್ತೇವೆ. ೪೦೦ ಸ್ಥಾನಗಳ ಗುರಿ ಮುಟ್ಟಲು ರಾಜ್ಯದ ೨೮ ಸ್ಥಾನ ಗೆಲ್ಲಿಸಬೇಕು. ತಮಿಳುನಾಡು ಸ್ಟಾಲಿನ್ ಕನ್ನಡಿಗರಿಗೆ ನೀರು ಕೊಡಲ್ಲ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಕಾವೇರಿ ನಮ್ಮದು ಅಂತ ಸ್ಟಾಲಿನ್ ಹೇಳ್ತಿದ್ದಾರೆ. ೨೮ ಸ್ಥಾನ ಗೆಲ್ಲಿಸಿ ಮಾಲೂರಿಗೆ ಮೇಕೆದಾಟು ಅಥವಾ ಕೃಷ್ಣ ನದಿಯನ್ನು ತರುತ್ತೇವೆ. ಇನ್ನು ೨ ವರ್ಷ ರಾಜ್ಯಸಭಾ ಸದಸ್ಯ ಸ್ಥಾನದಲ್ಲಿ ನಾನು ಇರ್ತೇನೆ. ಮೋದಿ ಅವರಿಗೆ ಕೈ ಹಿಡಿದು ಕೇಳುವ ಶಕ್ತಿ ೨೮ ಸ್ಥಾನ ಗೆದ್ದರೆ ಬರುತ್ತೆ. ೪೦ ಸ್ಥಾನ ಗೆದ್ದು ಕಾಂಗ್ರೆಸ್ ಇಷ್ಟು ದಿನ ಆಟ ಆಡಿದರು. ೨೮ ಲೋಕಸಭಾ ಸದಸ್ಯರನ್ನು ಗೆಲ್ಲಿಸಿ ಮೋದಿ ಬಳಿ ಒಟ್ಟಿಗೆ ಕರೆದುಕೊಂಡು ಹೋಗಿ ಕೇಳ್ತೇನೆ.

ಹೂಡಿ ಮನೆಗೆ ತೆರಳಿದ ಅಪ್ಪಾಜಿ : ಆರ್.ಜಿ.ಕಲ್ಯಾಣಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಎಚ್.ಡಿ.ದೇವೇಗೌಡ ಬಳಿಕ ಅರಳೇರಿ ರಸ್ತೆಯಲ್ಲಿರುವ ಹೂಡಿವಿಜಯ್‌ಕುಮಾರ್ ಮೋದಿ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲ ಕೆರಳಿಸಿತ್ತು. ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಸೇರಿದಂತೆ ಹಲವರ ವಿರೋಧದ ವ್ಮಧ್ಯೆಯೆ ಹೂಡಿ ವಿಜಯ್‌ಕುಮಾರ್ ಮನೆಗೆ ತೆರಳಿ ಬೆಂಬಲ ಕೋರಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಶಾಸಕ ರವಿಕುಮಾರ್, ಸಮೃದ್ಧಿ ಮಂಜುನಾಥ್, ಇಂಚರ ಗೋವಿಂದರಾಜು, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಜಿಪಂ ಮಾಜಿ ಸದಸ್ಯ ಜಿ.ಇ.ರಾಮೇಗೌಡ, ದಳದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಜಿ.ಇ.ರಾಮೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲರೆಡ್ಡಿ, ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಮುಖಂಡ ವಕ್ಕಲೇರಿರಾಮು, ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!