• Fri. May 3rd, 2024

PLACE YOUR AD HERE AT LOWEST PRICE

ಕೋಲಾರ : ಇಂದಿನ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ. ದಲಿತರು ಸಂವಿಧಾನ ಸಂರಕ್ಷಣೆ ಮಾಡಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಅವರಿಗೆ ಮತ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುಧಾಮದಾಸ್ ಕರೆ ನೀಡಿದರು.
ನಗರದ ಪ್ರತಕರ್ತರ ಭವನದಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ “ಸಂವಿಧಾನ ರಕ್ಷಸಿ ಪ್ರಜಾಪ್ರಭುತ್ವ ಉಳಿಸಿ”  ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತರು ಇಂದು ಸಂವಿಧಾನದ ಪ್ರಾಮುಖ್ಯತೆ ಮತ್ತು ಅದರ ಅಳಿವಿನಿಂದ ಆಗಬಹುದಾದ ವಿಷಮ ಪರಿಸ್ಥಿತಿ ಬಗ್ಗೆ ಚಿಂತನೆ ಮಾಡಬೇಕು,ಯೋಚನೆಯನ್ನು ಮಾಡಿ ಮುಂದೆ ಹೋಗಬೇಕಿದೆ ಎಂದು ಹೇಳಿದರು.
 ಸಂಘಟನೆಗಳು ಒಂದು ಕಡೆಯಾದರೆ, ಸಂವಿಧಾನ ರಕ್ಷಣೆ ಇನ್ನೊಂದು ಕಡೆ.  ಸಂವಿಧಾನ ಬದಲಾವಣೆಗೆ ಮನುವಾದಿಗಳು ಸಭೆಗಳನ್ನು ನಡೆಸಿ, ಮಂಕು ಬೂದಿಯನ್ನು ಎರಚುವ ಕಾರ್ಯವಾಗುತ್ತಿದೆ. ದೇಶದ ಸಂವಿಧಾನವನ್ನು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಪಕ್ಷದ ಇತರೆ ಸಂಸದರು ಸಂವಿಧಾನ ಬದಲಾವಣೆ ಹೇಳಿಕೆಗಳನ್ನು ನೀಡಿದರೂ ಸಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ  ಎಂದು ವಿಷಾದಿಸಿದರು.

ದೇಶದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾವು ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಯನ್ನು ಮಾಡುವುದಿಲ್ಲ ಎಂದಿದ್ದರೂ ಸಹ , ಚುನಾವಣೆಯಲ್ಲಿ ಸಮುದಾಯದ ಮತದಾರರು ಬುದ್ಧಿಯನ್ನು ಹೇಳಬೇಕಿದೆ ಎಂದರು. ಇನ್ನೂ ಮನುವಾದಿಗಳ ವಾಟ್ಸ ಆಪ್  ಗ್ರೂಪ್ ಗಳಲ್ಲಿ ಸಂವಿಧಾನದ ವಿಷಯದಲ್ಲಿ ಚರ್ಚೆಯಾಗುತ್ತಿದೆ, ಜತೆಯಲ್ಲಿ ಆರ್ ಎಸ್ ಎಸ್ ಸಂಘಟನೆ ಅವರು ಸಂವಿಧಾನ ಬದಲಾವಣೆಗೆ ಕಾರ್ಯಪ್ರವೃತ್ತಿಯಲ್ಲಿ ಇದೆ ಎಂದು ದೂರಿದರು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್ ರಿಗೆ ದಲಿತ ಸಮುದಾಯದ ಪ್ರತಿಯೊಬ್ಬರು ಮತವನ್ನು ನೀಡಿ ಗೆಲ್ಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ನಾಯಕ ಬಿ.ಗೋಪಾಲ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್. ಮುನಿಯಪ್ಪ ವಿರುದ್ಧ ಮತ ಹಾಕಿದರು. ಗಡಿನಾಡು ಅಭಿವೃದ್ಧಿಗಾಗಿ ಒಂದು ನಿಗಮ ಇದೆ, ಅಲ್ಲಿ ಸಾವಿರಾರು ಕೋಟಿ ಹಣ ಇದೆ. ಆದ್ರೆ ಆ ನಿಗಮದ ಬಗ್ಗೆ ಈ ತನಕ ಸಂಸದರಾಗಿದ್ದ ಮುನಿಸ್ವಾಮಿ ಗೆ ಮಾಹಿತಿಯೇ ಇಲ್ಲ.
ಗೌತಮ್ ಅವರು ಬೆಂಗಳೂರಿನವರು ಅನ್ನೋ ಕಾರಣಕ್ಕೆ ಹೊರಗಿನವರು ಎನ್ನುತ್ತಾರೆ. ಭಾರತ ದೇಶದಲ್ಲಿ 9375 ಜಾತಿಗಳು ಇದೆ. ಬ್ರಾಹ್ಮಣರು, ಮುಸಲ್ಮಾನರು, ದಲಿತರು ಮೂರು ಸಮುದಾಯದವರಿಗೆ ನ್ಯಾಷನಲ್ ಕ್ಯಾರೆಕ್ಟರ್ ಶಿಪ್ ಇದೆ. ನಮಗೆ ರಾಷ್ಟ್ರೀಯ ಮಾನ್ಯತೆ ಇದೆ ಹೇಳಿದರು. 
ಒಂದೊಂದು ಹಳ್ಳಿಯಲ್ಲಿ ಒಂದೊಂದು ರಾಜ್ಯಾಧ್ಯಕ್ಷರು ಇದ್ದಾರೆ. ಜಾತಿ ವಿರುದ್ಧ ಚಳುವಳಿ ಕಟ್ಟಿದ ನಾವು, ಇಂದು ನಮ್ಮಲ್ಲಿ ಜಾತಿ ಯಿಂದ ಗುರುತಿಸಿ ಕೊಳ್ಳುತ್ತಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ದೇಶದ ಸಂವಿಧಾನಕ್ಕೆ ಬಿಜೆಪಿಯಿಂದ ದೊಡ್ಡ ಗಂಡಾಂತರವಿದೆ. ಈ ನಿಟ್ಟಿನಲ್ಲಿ ಸಂವಿಧಾನ ರಕ್ಷಣೆಗೆ ದಲಿತ ಸಮುದಾಯಗಳು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶಕ್ತಿಯಾಗಬೇಕು ಎಂದರು.
ಕಳೆದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾಂಗ್ರೆಸ್ ಪಕ್ಷದ ವೈಯುಕ್ತಿಕ ದ್ವೇಷದ ಕಾರಣದಿಂದಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧ್ಯವಾಗಿದೆ ಎಂದರು. ಈ ಬಾರಿ ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆ ಮತ ಹಾಕಬೇಕು ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, 
ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಮುಖಂಡರಾದ ರವೀಂದ್ರ, ಕೃಷ್ಣಪ್ಪ, ಪ್ರಸನ್ನ ಕುಮಾರ್, ಸೂಲಿಕುಂಟೆ ರಮೇಶ್, ಸುನಿಲ್  ಕುಮಾರ್, ರೋಷನ್ ಮುಲ್ಲಾ,‌ ಜೀವಿಕ ರತ್ನಮ್ಮ ಇದ್ದರು. ಎಸ್.ಎಂ.ವೆಂಕಟೇಶ್,ರೋಜೇರ್ನಹಳ್ಳಿ ವೆಂಕಟರಮಣ, ಮುದುವತ್ತಿ ಕೇಶವ, ಮುನಿ ಚೌಡಪ್ಪ ‌ಮುಂತಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!