• Wed. May 22nd, 2024

PLACE YOUR AD HERE AT LOWEST PRICE

ದೇಶದಲ್ಲಿ ೨೫ ಶ್ರೀಮಂತ ಬಂಡವಾಳ ಶಾಹಿಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಪೊರೇಟ್ ಕಂಪನಿಗಳ ೧೬ ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ನರೇಗಾ ಯೋಜನೆಯಡಿ ೨೫ ವರ್ಷಗಳಲ್ಲಿ ಮಾಡಬಹುದಾದ ಕಾಮಗಾರಿಗಳಷ್ಟು ಹಣವನ್ನು ಈ ಶ್ರೀಮಂತರಿಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದ ಮಾಲೂರು ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗೇಟ್ ಬಳಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨.೦ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ., ಜಾತಿ ಗಣತಿ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೆ ಎಲ್ಲಾ ಸ್ತರದ ಉದ್ಯೋಗದಲ್ಲಿ ಅವಕಾಶಗಳು ಸೇರಿದಂತೆ ೫ ಗ್ಯಾರಂಟಿಗಳನ್ನು ನೀಡುವ ಮೂಲಕ ದೇಶದ ರಾಜಕಾರಣದ ಮೇಲೆ ಹೊಸ ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿ ಹಾಡಲಾಗುವುದು ಎಂದು ಹೇಳಿದರು.

ಈ ದೇಶದಲ್ಲಿ ಕೋಟ್ಯಾಂತರ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಈ ದೇಶದ ರೈತರ ಸಾಲವನ್ನು ಮನ್ನಾ ಮಾಡಲು ಕೇಳಿದಾಗ ಮೋದಿ ಬಾಯಿಂದ ಒಂದೇ ಒಂದು ಮಾತು ಹೊರಡಲಿಲ್ಲ. ಆದರೆ, ೨೫ ಜನ ಶ್ರೀಮಂತರ ೧೬ ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿಬಿಟ್ಟರು. ಇಂದು ಭಾರತದ ಪರಿಸ್ಥಿತಿ ೨೨ ಜನ ಶ್ರೀಮಂತರ ಹತ್ತಿರ ದೇಶದ ೭೨ ಕೋಟಿ ಜನರ ಆಸ್ತಿ ಇದೆ. ಇದು ಮೋದಿ ರೈತರಿಗೆ ಮಾಡಿದ ಅನ್ಯಾಯ ಎಂದರು.
ಇಂದು ಅದಾನಿ ಮಗನಿಗೆ ಅವರು ಊಹೆ ಮಾಡಿದ್ದನ್ನು ಪಡೆಯುವ ಶಕ್ತಿ ಇದೆ. ಅದಾನಿ ಯಾವುದೇ ಭೂಮಿ ಕೇಳಿದರೂ, ತಕ್ಷಣ ಕಡು ಬಡ ರೈತನ ಭೂಮಿಯನ್ನೂ ಸಹ ಮುಲಾಜಿಲ್ಲದೆ ಮೋದಿ ಕಿತ್ತು ಕೊಡುತ್ತಾರೆ. ಮುಂಬೈ ವಿಮಾನ ನಿಲ್ದಾಣ ಕೇಳಿದರೂ ಸಿಬಿಐ, ಈಡಿ, ಐಟಿ ಮೊದಲಾದ ತನಿಖಾ ಸಂಸ್ಥೆಗಳನ್ನು ಬಳಸಿ ಅದನ್ನೂ ಅದಾನಿಗೆ ಕೊಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

ನಾನು ಉದ್ಯಮಗಳು, ಕಾರ್ಖಾನೆಗಳು ಇರಬಾರದು ಎಂದು ಹೇಳುತ್ತಿಲ್ಲ. ಅವರಿಗೂ ಪ್ರೋತ್ಸಾಹ ನೀಡಬೇಕು ಆದರೆ, ಬಹುಸಂಖ್ಯಾತ ಜನರ ಹಿತಾಸಕ್ತಿಯನ್ನು ಸಹ ಗಮನದಲ್ಲಿಡಬೇಕು. ನಮ್ಮ ಈ ಮಾತುಗಳು ಮಾದ್ಯಮಗಳಲ್ಲಿ ನೋಡಲು ಸಾಧ್ಯವಿಲ್ಲ. ಮಾದ್ಯಮಗಳಲ್ಲಿ ಮೋದಿ, ಕ್ರಿಕೆಟ್ ಆಟಗಾರರು, ಸಿನಿಮಾ ನಟ-ನಟಿಯರು ಮಾತ್ರ ಕಾಣುತ್ತಾರೆ. ಆದುದ್ದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! :

ದೇಶದ ಸಾವಿರಾರು ಪ್ರತಿಷ್ಠಿತ ಮುಖ್ಯವಾಹಿನಿ ಮಾದ್ಯಮಗಳ ಸಂಪಾದಕರು, ಕಾರ್ಪೋರೇಟ್ ಕಂಪನಿಗಳ ಸಿಇಒಗಳು, ಸರ್ಕಾರದ ರಾಷ್ಟç,ರಾಜ್ಯ ಮಟ್ಟದ ಅತ್ಯುನ್ನತ ಐಎಎಸ್ ಹುದ್ದೆಗಳಲ್ಲಿ ಈ ದೇಶದ ಶೇ.೯೦ರಷ್ಟರ ಜನಸಂಖ್ಯೆಯ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಭಾಗವಹಿಸುವಿಕೆ ಕಾಣುತ್ತಿಲ್ಲ. ಅವರೆಲ್ಲಾ ತಳಮಟ್ಟದಲ್ಲಿ ದುಡಿಯುವ ರೈತರಾಗಿ, ಕೃಷಿಕಾರ್ಮಿಕರಾಗಿ, ಕಾರ್ಖಾನೆ ಕಾರ್ಮಿಕರಾಗಿ, ಹಮಾಲಿಗಳಾಗಿ, ಕೂಲಿಕಾರರಾಗಿ, ಖಾಸಗೀ ಸಂಸ್ಥೆಗಳ, ಅರೆ ಸರ್ಕಾರಿ ಸಂಸ್ಥೆಗಳ ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದಾರೆ. ಶೇ.೯೦ರಷ್ಟು ಜನರ ಭಾಗವಹಿಸುವಿಕೆ ಇಲ್ಲದ ಮಾದ್ಯಮ ಇವರ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ. ಅದೇ ರೀತಿ ಕಾರ್ಪೋರೇಟ್ ವಲಯದಲ್ಲೂ ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇದನ್ನು ಸರಿ ಮಾಡಬೇಕಾದರೆ ದೇಶದ ಸಾಮಾಜಿಕ ಆರ್ಥಿಕ ಚಿತ್ರವನ್ನು ತೋರಿಸುವ ಜಾತಿವಾರು ಜನಗಣತಿ ಹಾಗೂ ಅವರ ಆರ್ಥಿಕ ಸಮೀಕ್ಷೆಯ ಮೂಲಕ ದೇಶದ ಎಕ್ಸರೇ ಹಿಡಿದು ದೇಶದ ಜನತೆಯ ಮುಂದೆ ಇಟ್ಟಾಗ ಮಾತ್ರ ಹೊಸ ಕಾಂತ್ರಿಕಾರಿ ಬೆಳವಣಿಗೆಗೆ ನಾಂದಿಯಾಗಲಿದೆ ಎಂದರು.

ಅಜ್ಜಿ ಜೊತೆ ಕೋಲಾರಕ್ಕೆ ಬಂದ ನೆನಪು ಮೆಲುಕು ಹಾಕಿದ ರಾಹುಲ್ ಗಾಂಧಿ:

ನಾನು ಚಿಕ್ಕವನಿದ್ದಾಗ ಕೋಲಾರ ಗೋಲ್ಡ್ ಫೀಲ್ಡ್ಗೆ ನನ್ನ ಅಜ್ಜಿ ಇಂದಿರಾಗಾ0ಧಿ ಅವರ ಜೊತೆ ಬಂದಿದ್ದೆ. ಸುರಂಗದ ಒಳಗೆ ಹೋಗಿ ಅಲ್ಲಿ ಕಾರ್ಮಿಕರನ್ನು ಮಾತನಾಡಿಸಿದ್ದು ನೆನಪಿದೆ. ಅಲ್ಲಿ ಚಿನ್ನದ ಇಟ್ಟಿಗೆಯನ್ನು ನೋಡಿ ಕೋಲಾರ ಎಷ್ಟು ಸಂಪತ್ಭರಿತವಾಗಿದೆ ಎಂದು ತಿಳಿಯಿತು ಎಂದು ೧೯೮೦ರಲ್ಲಿ ಬಿಜಿಎಂಲ್ ಸಂಸ್ಥೆಯ ಶತಮಾನೋತ್ಸವಕ್ಕೆ ಆಗಮಿಸಿದ ದಿನಗಳನ್ನು ಮೆಲುಕು ಹಾಕಿದರು.

೨೦೨೪ರ ಲೋಕಸಭಾ ಚುನಾವಣೆ ಗೆದ್ದರೆ ಕಾಂಗ್ರೆಸ್ ಗ್ಯಾರಂಟಿಗಳು :
೧. ಪ್ರತಿ ಕುಟುಂಬದ ಓರ್ವ ಮಹಿಳೆಗೆ ತಿಂಗಳಿಗೆ ರೂ. ೮೫೦೦/- ರಂತೆ ವಾರ್ಷಿಕ ಒಂದು ಲಕ್ಷ ನೀಡಲಾಗುವುದು.
೨. ದೇಶಾದ್ಯಂತ ಜಾತಿ ಗಣತಿ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲಾಗುವುದು.
೩. ಯಾವುದೇ ಬೇದ,ತಾರತಮ್ಯಗಳಿಲ್ಲದೆ ಎಲ್ಲಾ ಸಮುದಾಯಗಳಿಗೂ ಎಲ್ಲ ಹಂತಗಳ ಉದ್ಯೋಗದಲ್ಲಿ ಪಾಲುದಾರಿಕೆ ನೀಡಲಾಗುವುದು.
೪. ಯುವಕರಿಗೆ ಕೌಶಲ್ಯ ಭರಿತ ಅಪ್ರೆಂಟೀಸ್ ತರಬೇತಿ ಹಾಗೂ ತರಬೇತಿ ಅವಧಿಯಲ್ಲಿ ಪ್ರತಿ ಯುವಕನಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಶಿಷ್ಯವೇತನ ನೀಡಲಾಗುವುದು.
೫. ರೈತರ ಸಾಲ ಮನ್ನಾ ಮಾಡಲಾಗುವುದು.

ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್, ಕೊತ್ತೂರು ಮಂಜುನಾಥ್, ಶರತ್ ಬಚ್ಚೇಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಮಾಜಿ ಸಭಾಪತಿ ವಿ.ಆರ್ . ಸುದರ್ಶನ್, ಮಹಿಳಾ ಅಧ್ಯಕ್ಷೆ ರತ್ನಮ್ಮ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ ,ವಸಂತ ವಸಂತ ಕವಿತಾ, ಉಪಸ್ಥಿತರಿದ್ದರು.

೨೦೨೪ರ ಲೋಕಸಭಾ ಚುನಾವಣೆ ಬಹಳ ಮಹತ್ವದ ಚುನಾವಣೆಯಾಗಿದೆ. ಏಕೆಂದರೆ, ಈ ಚುನಾವಣೆಯಲ್ಲಿ ನೀವು-ನಾವು ಸೇರಿ ಬಿಜೆಪಿಯನ್ನು ಸೋಲಿಸಿದರೆ ಮಾತ್ರ ಇದರ ಮಹತ್ವ ತಿಳಿಯಲಿದೆ. ಮೋದಿ ಎಲ್ಲಾ ಕಡೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ, ಅವರ ಭಾಷಣ ಅರ್ಧಕ್ಕಿಂತ ಹೆಚ್ಚು ಸಮಯ ಕಾಂಗ್ರೆಸ್ ವಿರುದ್ಧ ಮಾತನಾಡುವುದೇ ಆಗಿದೆ, ಅವರು, ದೇಶಕ್ಕೆ ಏನು ಮಾಡಿದ್ದಾರೆ ಎನ್ನುವುದು ಹೇಳುತ್ತಿಲ್ಲ. ಜನ ಮೋದಿಯನ್ನು ಕೇಳಬೇಕು. ನಮ್ಮ ರಾಜ್ಯಕ್ಕೆ ಬರ ಪರಿಹಾರ ಎಷ್ಟು ನೀಡಿದ್ದೀರಿ, ಕರ್ನಾಟಕಕ್ಕೆ ಎಷ್ಟು ಅನುದಾನ ನೀಡಿದ್ದೀರಿ, ನಮ್ಮ ತೆರಿಗೆ ಪಾಲು ನೀಡಲಿಲ್ಲ ಯಾಕೆ. ೨೦೧೪-೧೫ರಲ್ಲಿ ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ ಭರವಸೆ ವರ್ಷಕ್ಕೆ ೨ ಕೋಟಿ ಉದ್ಯೋಗದಂತೆ ೧೦ ವರ್ಷಕ್ಕೆ ೨೦ ಕೋಟಿ ಉದ್ಯೋಗ ಯಾಕೆ ಕೊಟ್ಟಿಲ್ಲ. ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ ೧೫ ಲಕ್ಷ ಯಾಕೆ ಕೊಟ್ಟಿಲ್ಲ ಎಂದು ಜನ ಕೇಳಬೇಕು.

ಮೋದಿಗೆ ಸುಳ್ಳು ಹೇಳುವುದೇ ಕಸುಬು, ಅವರೊಬ್ಬ ಸುಳ್ಳಿನ ಸರದಾರ, ಕರ್ನಾಟಕದಲ್ಲಿ ಗ್ಯಾರಂಟೀ ಯೋಜನೆಗಳಿಗೆ ಬೆಚ್ಚಿ ಬಿದ್ದಿರುವ ಮೋದಿ ಇದಿಗ ಗ್ಯಾರಂಟೀ ಬೆನ್ನಿಗೆ ಬಿದ್ದು, ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಶಬ್ದವನ್ನು ಕಾಂಗ್ರೆಸ್‌ನಿAದ ಕದ್ದುಕೊಂಡಿದ್ದಾರೆ. ಇಂದು ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಅನಿಲ ಬೆಲೆ ಸಾವಿರ ಮುಟ್ಟಿದೆ. ನಿರುದ್ಯೋಗ ಬೆಳೆಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಆದ್ದರಿಂದ ಯುವಕರಿಗೆ ಉದ್ಯೋಗ ಕೊಡುವ ಪಕ್ಷಕ್ಕೆ ಮತ ಕೊಡಿ, ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವ ಪಕ್ಷಕ್ಕೆ ಮತ ಕೊಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಪಕ್ಷಕ್ಕೆ ಮತ ನೀಡಿ ಮಹತ್ವದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿ.

– ಮಲ್ಲಿಕಾರ್ಜುನ ಖರ್ಗೆ, ಎ.ಐ.ಸಿ.ಸಿ. ಅಧ್ಯಕ್ಷರು,

ಬಾಕ್ಸ್ ಸುದ್ದಿ ೨ : ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬೀತಿಯಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಹಿಂದೆ ಜೆಡಿಎಸ್ ಎಂದೂ ಸಹ ಮೈತ್ರಿ ಮಾಡಿಕೊಂಡಿರಲಿಲ್ಲ, ಇದೀಗ ಸೋಲಿನ ಬೀತಿಗೆ ಮೈತ್ರಿ ಮಾಡಿಕೊಂಡಿವೆ. ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ ಪಕ್ಷ ಇಂದು ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಸೇರಿಕೊಂಡಿರುವ ಕಾರಣ, ಈ ಮೈತ್ರಿ ಅಪವಿತ್ರ ಮೈತ್ರಿಯಾಗಿದೆ. ೨೦೧೯ರ ಚುನಾವಣೆಯಲ್ಲಿ ಬಿಜೆಪಿ ವಿರುದ್ದವಾಗಿದ್ದ ದೇವೇಗೌಡರು ಇಂದು ಮೋದಿ ಜೊತೆ ಕೈಜೋಡಿಸಿದ್ದಾರೆ. ಮೋದಿಯನ್ನು ಹೊಗಳುತ್ತಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ೫ ವರ್ಷ ಅಧಿಕಾರ ನಡೆಸುತ್ತದೆ. ಎಲ್ಲಾ ಗ್ಯಾರಂಟೀಗಳು ಸಹ ಮುಂದುವರೆಯುತ್ತದೆ. ಕೋಲಾರದಲ್ಲಿ ಇಷ್ಟೊಂದು ಜನ ಸೇರಿರೋದು ನೋಡಿದ್ರೆ ರಾಜ್ಯದಲ್ಲಿ ೨೮ಕ್ಕೆ ೨೮ ಸ್ಥಾನಗಳು ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ವಿಶ್ವಾಸ ಬಂದಿದೆ. ಕನಿಷ್ಟ ೨೦ ಸ್ಥಾನಗಳನ್ನಾದರೂ ಗೆದ್ದೇ ಗೆಲ್ತೇವೆ.

— ಸಿದ್ದರಾಮಯ್ಯ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ.

 

Related Post

ಹತ್ತು ದಿನಗಳೊಳಗೆ ಎಪಿಎಂಸಿ ಅಧಿಕಾರಿಗಳ,ದಲ್ಲಾಳರ ಹಾಗೂ ರೈತರ ಸಭೆಯನ್ನು ನಡೆಸಿ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ : ವಿವಿಧ ಜನಪರ ಸಂಘಟನೆಗಳಿoದ ಆಗ್ರಹ
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ

Leave a Reply

Your email address will not be published. Required fields are marked *

You missed

error: Content is protected !!