• Tue. Apr 30th, 2024

PLACE YOUR AD HERE AT LOWEST PRICE

ರಾಜಕೀಯ ಪಕ್ಷಗಳು ಬಲಗೈ ಸಮುದಾಯಕ್ಕೆ ಅನ್ಯಾಯ ಮುಖಂಡರ ಆಕ್ರೋಶ,

ಕೋಲಾರ: ಜಿಲ್ಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ರೇಣುಕಾ ಯಲ್ಲಮ್ಮ ಬಳಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿವೆ ಎಂದು ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನಗರ ಹೊರವಲಯದ ಕಲ್ಯಾಣ ಮಂಟಪದಲ್ಲಿ ‌ಮಂಗಳವಾರ ನಡೆದ ‌ಬಲಗೈ ಸಮುದಾಯದ ರೇಣುಕಾ ಯಲ್ಲಮ್ಮದವರ ಸಭೆಯಲ್ಲಿ ಮಾತನಾಡಿದ ಮುಖಂಡರು ಅನ್ಯಾಯವಾಗಿದೆ ಅದು ಮುಂದೆ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಕೋಲಾರ ಮೀಸಲು ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಭೆಯಲ್ಲಿ ಘೋಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ‌ ಸದಸ್ಯ ರಾಮಚಂದ್ರಪ್ಪ ಮಾತನಾಡಿ ಈ ಬಾರಿ ಕೋಲಾರ ಕ್ಷೇತ್ರದ ಲೋಕಸಭೆ ಟಿಕೆಟ್ ಅನ್ನು ಬಲಗೈ ಸಮುದಾಯಕ್ಕೆ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಬಳಿ ಕೇಳಿದ್ದೆವು. 1952ರಿಂದ ಈ ಕ್ಷೇತ್ರದಲ್ಲಿ ಬಲಗೈ ಸಮುದಾಯದವರಿಗೆ ಟಿಕೆಟ್ ಸಿಕ್ಕಿಲ್ಲ ಯಾವುದೇ ಸ್ಥಾನಮಾನ ‌ನೀಡಿಲ್ಲ ಚಿಕ್ಕತಾಳಿ‌ ಸಮುದಾಯದವರನ್ನು ಗುರುತಿಸುವ ಕೆಲಸ ಮಾಡಿಲ್ಲ. ನಮ್ಮ ಸಮುದಾಯವು ಕ್ಷೇತ್ರದಲ್ಲಿ 3.75 ಲಕ್ಷದಷ್ಟು ಮತಗಳಿವೆ ಟಿಕೆಟ್ ಕೊಡದೆ ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿ ಬಾರಿ ಬೆಂಬಲಿಸಿದ್ದೇವೆ ಆದರೂ ಈ ಬಾರಿ ನಮಗೆ ಮೋಸ ಮಾಡಿದೆ ಎಂದು ಆರೋಪಿಸಿದರು‌.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡ ಮಾರ್ಜೇನಹಳ್ಳಿ ಬಾಬು ಮಾತನಾಡಿ, ನಮ್ಮ ಸಮುದಾಯಕ್ಕೆ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ ಅವಕಾಶ ಕೊಡುತ್ತಿಲ್ಲ ಹೀಗಾಗಿ, ಎಲ್ಲರೂ ಒಟ್ಟಾಗಬೇಕು. ಕೋಲಾರ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಮತಗಳು ಹೆಚ್ಚು ಇವೆ ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ ಕ್ಷೇತ್ರದಲ್ಲಿ ನಮ್ಮ ಸಮುದಾಯದ ನಿರ್ಣಾಯಕ ಪಾತ್ರವಿದೆ. ನಮಗೂ ರಾಜಕೀಯ ಅವಕಾಶ ಸಿಗಬೇಕು ಎಂದು ಹೇಳಿದರು.

ಈ ಬಾರಿಯ ಚುನಾವಣೆಯಲ್ಲೂ ಕೋಲಾರ ಕ್ಷೇತ್ರದಲ್ಲಿ ಬಲಗೈ ಸಮುದಾಯದವರಿಗೆ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಕೇಳಿದೆವು. ಯಾರೂ ಟಿಕೆಟ್ ಕೊಟ್ಟಿಲ್ಲ. ಆದರೆ,‌ ಈ ಸಭೆಯಲ್ಲಿ ಯಾರನ್ನು ಬೆಂಬಲಿಸಬೇಕೆಂದು ರಾಜಕೀಯ ನಿರ್ಣಯ ಕೈಗೊಂಡಿಲ್ಲ ಸದ್ಯದಲ್ಲೇ ನಿರ್ಧಾರ ಪ್ರಕಟಿಸಲಿದ್ದೇವೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಮಲ್ಲೇಕುಪ್ಪ ಅಂಬರೀಷ್ ಮಾತನಾಡಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಸಮುದಾಯವನ್ನು ಗುರುತಿಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮೊದಲ ಸಮುದಾಯವರು ಒಗ್ಗಟ್ಟು ಪ್ರದರ್ಶಿಸಬೇಕು‌, ಒಂದೆಡೆ ಸೇರಿ ಚರ್ಚಿಸಬೇಕು ಎಂದು ಮನವಿ ಮಾಡಿದರು.

ರತ್ನಮ್ಮ ಮಾತನಾಡಿ ಸಮುದಾಯದವರು ಒಂದೆಡೆ ಸೇರಿ ತಿಂಗಳಿಗೊಮ್ಮೆ ಸಭೆ ಮಾಡಬೇಕು ಚಿಕ್ಕತಾಳಿಯವರು ಎಲ್ಲಾ ಬಡವರು. ಒಗ್ಗಾಟ್ಟದರೆ ಮಾತ್ರ ಸಮುದಾಯದ ಬೇಡಿಕೆಗಳು ಈಡೇರಿಸಿಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡ ಹೂವಸನಹಳ್ಳಿ ರಾಜಪ್ಪ ಮಾತನಾಡಿ ಮೊದಲ ಬಾರಿ ಇಷ್ಟು ಸಂಖ್ಯೆಯಲ್ಲಿ ಸಮುದಾಯದ ಜನ ಸೇರಿದ್ದಾರೆ‌. ನಮ್ಮ ಸಮುದಾಯಕ್ಕೆ ಟಿಕೆಟ್ ನೀಡುವುದಾಗಿ ಹೇಳಿ ಕಾಂಗ್ರೆಸ್ ಪಕ್ಷವು ಸೇರಿದಂತೆ ಕೆ.ಎಚ್.ಮುನಿಯಪ್ಪ ಕೂಡ ಈ ಬಾರಿ ಮೋಸ ಮಾಡಿದರು. ನಮ್ಮನ್ನು ರಾಜಕೀಯವಾಗಿ ನಿರ್ಲಕ್ಷ್ಯ ಮಾಡಿದರೆ ಗೆಲ್ಲುವವರನ್ನು ಸೋಲಿಸುತ್ತೇವೆ ಎಂದು ಎಚ್ಚರಿಕೆ‌ ನೀಡಿದರು‌.

ಸಮುದಾಯದ ಮುಖಂಡರಾದ ಕೆ.ಜಯದೇವ, ಡಾ.ಚಂದ್ರಶೇಖರ್, ಡಿಪಿಎಸ್ ಮುನಿರಾಜು, ಚಂದ್ರಪ್ಪ, ದಲಿತ್ ನಾರಾಯಣಸ್ವಾಮಿ, ಮಾಲೂರು ದಾಸಣ್ಣ, ಕಾರ್ಗಿಲ್ ವೆಂಕಟೇಶ್, ನಾರಾಯಣಸ್ವಾಮಿ, ಸೋಮಣ್ಣ, ದೇವರಾಜ್, ಆವಣಿ ಕೃಷ್ಣಪ್ಪ, ಜಾಗೃತ ಸೇವಾ ಸಮಿತಿ ರಾಜು ಮುಂತಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!