• Wed. May 22nd, 2024

PLACE YOUR AD HERE AT LOWEST PRICE

ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ-ಎಲ್.ಎನ್.ಮುಕು0ದರಾಜ್
ಕೋಲಾರ,ಏ.೨೩: ತಳಸಮುದಾಯವರು ಇತಿಹಾಸವನ್ನು ಮರೆತು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತವಾಗಿದೆ ಎಂದು ಎಲ್.ಎನ್.ಮುಕುಂದರಾಜ್ ಬೇಸರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸಮುದಾಯ ಕೆ.ಜಿ.ಎಫ್. ಮತ್ತು ಕೋಲಾರ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೩ನೇ ಜಯಂತಿ ಅಂಗವಾಗಿ ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಶೋಧ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದ ಐವತ್ತು ವರ್ಷಗಳ ನಡೆ ಸಾಂಸ್ಕೃತಿಕ ಕಟ್ಟುವಿಕೆ ಆಗಿದೆ. ಹೊಸ ಆಲೋಚನೆಗಳ ನಾಟಕಗಳು ಹೊರಹೊಮ್ಮಿದವು. ಸಿಜಿಕೆ, ನಾಗೇಶ್ ಅಂಥವರು ಇದರ ನಡೆಯನ್ನು ಗಟ್ಟಿಗೊಳಿಸಿದರು. ನಾವು ಮಾತನಾಡುತ್ತಿದ್ದೇವೆ ಎಂದರೆ ಅದು ಅಂಬೇಡ್ಕರ್ ಅವರ ಸಂವಿಧಾನದ ಸ್ವತಂತ್ರ. ಮಹಿಳೆಯರಿಗೆ ಅದ್ಭುತವಾದ ಸ್ವಾತಂತ್ರö್ಯ ನೀಡಿದೆ. ಸಾವಿರಾರು ವರ್ಷಗಳು ಅಕ್ಷರ ಇಲ್ಲದೆ ನಲುಗಿಹೋಗಿದ್ದ ಮಹಿಳೆಯರಿಗೆ ಸಂವಿಧಾನ ಹಕ್ಕುಗಳನ್ನು ನೀಡಿದೆ. ಸಾವಿತ್ರಿ ಬಾಪುಲೆ ಅಂತವರು ಅಕ್ಷರ ಕಲಿಸಲು ಹೋದಾಗ ಮೇಲ್ಜಾತಿಯವರು ಅವಮಾನ ಮಾಡಿದವರು ಇಂದು ಮಾಂಗಲ್ಯ ಬಗ್ಗೆ ಮಾತನಾಡುತ್ತ ಇದ್ದಾರೆ. ಇದೇ ಮೇಲ್ಜಾತಿಯ ಕುದ್ಮುಲ್ ರಂಗರಾವ್ ಕೆಳಜಾತಿಯವರಿಗೆ, ವಿಧವೆಯರಿಗೆ, ಹಿಂದುಳಿದವರಿಗೆ ಶಿಕ್ಷಣ ನೀಡಿ ಬಲಗೊಳಿಸಿದವರು. ತಲಕಾಡು ರಂಗೇಗೌಡರು ಶೋಷಿತರ ಪರವಾಗಿ ನಿಂತವರು. ಇಂದು ಹಿಂದುಳಿದ ಜನಾಂಗ ತಮ್ಮ ಇತಿಹಾಸವನ್ನು ಮರೆತಿದ್ದಾರೆ. ದಿಕ್ಕು ತಪ್ಪಿ ನಡೆಯುತ್ತಿದ್ದಾರೆ. ಯಾರದೂ ಮಿದುಳಿಗೆ ಇವರೆಲ್ಲ ಮೋಡಿಯಾಗುತ್ತಿದ್ದಾರೆ ಎಂದರು.
ದೇಶದ ಸಂಸ್ಕೃತಿಯು ತಳಸಮುದಾಯದವರಾದ ವಾಲ್ಮೀಕಿ, ಕಾಳಿದಾಸ, ಕನಕದಾಸ ಮುಂತಾದವರು ಕಟ್ಟಿದವರು. ಬುದ್ದನ ಬೌದ್ದಧರ್ಮವನ್ನು ಮನುಧರ್ಮದವರು ನಮ್ಮ ದೇಶದಿಂದ ಓಡಿಸಲು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.ಅAಬೇಡ್ಕರ್ ಅವರು ಬುದ್ದನನ್ನು ಮರುಸ್ಥಾಪನೆ ಮಾಡಿದರು.ಹನ್ನೆರಡನೇ ಶತಮಾನದ ಬಸವಣ್ಣ ಸಮಾನತೆಗಾಗಿ ಹೋರಾಟಮಾಡಿದವರು. ಆದರೆ ಲಿಂಗಾಯತ ಜನ ಬಸವಣ್ಣನವರ ಮೂಲ ಆಶಯಗಳನ್ನು ಮರೆತು ನಡೆಯತ್ತಿದ್ದಾರೆ. ಚೀನಾದ ಯಾತ್ರಿಕ ಮೆಗಸ್ತಾನಿಸ್ ಆಯಾಕಾಲದ ಬದುಕನ್ನು ದಾಖಲಿಸಿದ್ದಾರೆ. ದಲಿತರು ಯಾವತ್ತು ತಮ್ಮ ಕೋಪವನ್ನು ಪ್ರದರ್ಶನ ಮಾಡದೆ ನೋವಿನಲ್ಲೆ ಬದುಕನ್ನು ತಳ್ಳುತ್ತಾ ಬಂದಿದ್ದಾರೆ. ತಳಸಮುದಾಯವರು ಇತಿಹಾಸವನ್ನು ಮರೆತು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತವಾಗಿದೆ.ಸಮುದಾಯದ ಆಶಯಗಳು ಇಂದಿಗೂ ಗಟ್ಟಿಯಾಗಿ ನಡೆಯುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ನಾವು ಸಾಂಸ್ಕೃತಿಕವಾಗಿ ಕಟ್ಟುವ ಕೆಲಸವನ್ನು ಪ್ರತಿಶೋಧವಾಗಿ ಕಟ್ಟಬೇಕಾಗಿದೆ ಎಂದರು.
ಸಮುದಾಯ ರಾಜ್ಯಾಧ್ಯಕ್ಷ ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳು ಟ್ರೆಲರ್ ಎಂದಿದ್ದಾರೆ. ದೇಶದ ಸರ್ಕಾರಿ ಸಂಸ್ಥೆಗಳು ಖಾಸಗಿಯಾಗಿ ಮಾಡುತ್ತಿರುವದ ಟ್ರೀಲರ್. ದೇಶವನ್ನು ಬಂಡವಾಳಶಾಹಿಗಳ ಕೈಗೆ ನೀಡಿ ತಳಸಮುದಾಯದವರನ್ನು ಬೀದಿಗೆ ತರುವುದೆ ಇವರ ನಿಲುವಾಗಿದೆ. ತಳಸಮುದಾಯದವರು ಮೈಮರೆಯಬೇಡಿ ಎಚ್ಚರವಾಗಿರಿ ಎಂದರು.
ಸಮುದಾಯ ರವೀಂದ್ರನಾಥ ಸಿರಿವರ ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಜ್ಯದ ೧೪ ಕಡೆಗಳಲ್ಲಿ ಡಾ.ಅಂಬೇಡ್ಕರ್ ಅವರ ಜನ್ಮ ದಿನದ ನೆನಪಿಗೆ ಸಂವಿಧಾನದ ಉಳಿವಿಗಾಗಿ ಸಾಂಸ್ಕೃತಿಕ ಶೋಧ ಕಾರ್ಯಕ್ರಮ ಮೂಲಕ ಸಂವಿಧಾನ ಉಳಿಸಿ ಆಂದೋಲನ ಮಾಡುತ್ತಿದ್ದೇವೆ. ಪ್ರಧಾನಿ ಅವರು ಸಂವಿಧಾನದ ಬದಲಾವಣೆಗಾಗಿ ಹೊರಟು ಈಗ ಅಂಬೇಡ್ಕರ್ ಅವರು ಬಂದರು ಸಹ ಸಂವಿಧಾನದ ಬದಲಾವಣೆ ಸಾಧ್ಯವಿಲ್ಲ ಎಂದು ಘೋಷಣೆ ಮಾಡುತ್ತಿರುವುದು ವ್ಯಂಗ್ಯವಾಗಿದೆ. ನಮ್ಮ ಆಂದೋಲನದ ಮೂಲ ಉದ್ದೇಶ ಸಂವಿಧಾನವನ್ನು ಉಳಿಸುವುದೆ ಆಗಿದೆ. ದೇಶದಲ್ಲಿ ಕೋವಿಡ್ ಲೆಕ್ಕಗಳು ಬಚ್ಚಿಡಲಾಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಇಂದು ರಾಜ್ಯಗಳ ಪಾಲಿಗೆ ಶೂನ್ಯ ಆಗಿದೆ. ಸುಪ್ರೀಂಕೋರ್ಟ್ ರಾಜ್ಯಗಳ ಪಾಲಿಗೆ ನ್ಯಾಯ ನೀಡಲು ಮುಂದಾಗಿರುವುದು ಸಂವಿಧಾನವನ್ನು ಎತ್ತಿ ಹಿಡಿಯುವಂತಾಗಿದೆ ಎಂದರು. 
ಈ ಸಂದರ್ಭದಲ್ಲಿ ಸಮುದಾಯ ಅಚ್ಯುತ್, ಮಾನವ ಬಂಧುತ್ವ ವೇದಿಕೆ ಸುಮತಿ ಇದ್ದರು.

Related Post

ಹತ್ತು ದಿನಗಳೊಳಗೆ ಎಪಿಎಂಸಿ ಅಧಿಕಾರಿಗಳ,ದಲ್ಲಾಳರ ಹಾಗೂ ರೈತರ ಸಭೆಯನ್ನು ನಡೆಸಿ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ : ವಿವಿಧ ಜನಪರ ಸಂಘಟನೆಗಳಿoದ ಆಗ್ರಹ
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ

Leave a Reply

Your email address will not be published. Required fields are marked *

You missed

error: Content is protected !!