• Tue. Apr 30th, 2024

PLACE YOUR AD HERE AT LOWEST PRICE

ಕೋಲಾರ. ನವೆಂ¨ರ್.೧೭ : ಪ್ರಸಕ್ತ ಸಾಲಿನಲ್ಲಿ ಕೋಲಾರ ಪೊಲೀಸ್ ಜಿಲ್ಲೆಯಲ್ಲಿ ಒಟ್ಟು ೩೭ ಕೊಲೆ ಪ್ರಕರಣಗಳು ದಾಖಲಾಗಿದ್ದು, ೩೬ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ, ಗಾಂಜಾ ಅಥವಾ ಡ್ರಗ್ಸ್ ಸೇವಿಸಿ ಯಾವುದೇ ಕೊಲೆ ನಡೆದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ್ ತಿಳಿಸಿದರು.

ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೩ ತಿಂಗಳಲ್ಲಿ ೩ ಕೊಲೆ ಪ್ರಕರಣಗಳು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದವು, ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಇಲಾಖೆ ಯಶಸ್ವೀಯಾಗಿದೆ. ಉಳಿದಂತೆ ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಇಲ್ಲಿಯವರೆಗಿನ ಸರಾಸರಿ ಗಮನಿಸಿದಾಗ ಪ್ರತಿವರ್ಷ ೨೮ ರಿಂದ ೨೯ ಕೊಲೆ ಪ್ರಕರಣಗಳು ದಾಖಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು ೯ ಪ್ರಕರಣಗಳು ಹೆಚ್ಚುವರಿಯಾಗಿ ದಾಖಲಾಗಿದೆ. ಅವುಗಳಲ್ಲಿ ಹೊರ ಜಿಲ್ಲೆಯವರು ಕೊಲೆ ಮಾಡಿ ಮೃತ ದೇಹವನ್ನು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಬಿಸಾಡಿ ಹೋಗಿದ್ದರೂ ಅವುಗಳನ್ನೂ ಸಹ ಬೇದಿಸುವ ಮೂಲಕ ತಪ್ಪಿತಸ್ತರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿದ್ದು, ಅದರಿ ಪ್ರಕರಣಗಳಿಂದ ಸಂಖ್ಯೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣಗಳಲ್ಲಿ ೯ ಕೌಟುಂಬಿಕ ಕಲಹ ಹಾಗೂ ವೈಯಕ್ತಿಕ ದ್ವೇಷಗಳ ಕಾರಣಕ್ಕಾಗಿ ನಡೆದಿದೆ. ೭ ಪ್ರೀತಿ ಹಾಗೂ ಅಕ್ರಮ ಸಂಬ0ಧ ಹಿನ್ನಲೆಯದ್ದು, ೭ ತಂದೆ-ತಾಯಿ ಅವರಿಂದಲೇ ಕೊಲೆಯಾದವರು, ೪ ಪೂರ್ವ ನಿಯೋಜಿತ, ೩ ಭೂಮಿ ಮತ್ತು ಹಣಕಾಸು ಹಿನ್ನಲೆ, ೨ ಗಂಡ ಹೆಂಡತಿ ಜಗಳ ಹಿನ್ನಲೆ, ೨ ಲೈಂಗಿಕ ಅತ್ಯಾಚಾರ ಹಿನ್ನಲೆ , ೧ ಕಾರಣ ಗೊತ್ತಿಲ್ಲದ್ದು, ೧ ಅಚಾತುರ್ಯ ಮತ್ತು ೧ ನ್ಯಾಯಾಲಯ ಉಲ್ಲೇಖಿಸಿದ ಪ್ರಕರಣ ಸೇರಿ ಒಟ್ಟು ೩೭ ಪ್ರಕರಣ ದಾಖಲಾಗಿದೆ. ಒಂದೇ ಒಂದು ಕೊಲೆಯೂ ಸಹ ಗಾಂಜಾ ಸೇವನೆ ಅಥವಾ ಮಾಧಕ ವಸ್ತು ಸೇವನೆ ಅಥವಾ ಗ್ಯಾಂಗ್ ವಾರ್ ಆಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ಅಪರಾಧ ಪ್ರಕರಣಗಳಲ್ಲಿ ೨೭ ಅಪ್ರಾಪ್ತರು, ಈ ಸಾಲಿನಲ್ಲಿ ೪೭ ಪೋಕ್ಸೋ ಪ್ರಕರಣಗಳು ದಾಖಲು :
ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸುಮಾರು ೨೭ ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕರನ್ನು ಬಾಲ ಮಂದಿರದಲ್ಲಿ ಸೇರಿಸಲಾಗಿದೆ. ಸುಮಾರು ೪೭ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

೭ ತಿಂಗಳಲ್ಲಿ ೭ ಸಾವಿರ ಪ್ರಕರಣಗಳ ತನಿಖೆಗಳು ಪೂರ್ಣ :
ಈ ಹಿಂದೆ ತನಿಖಾ ಹಂತದಲ್ಲಿದ್ದ ಸುಮಾರು ೯ ಸಾವಿರ ಪ್ರಕರಣಗಳಲ್ಲಿ ೭ ಸಾವಿರ ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಗಿದೆ. ಇನ್ನೂ ೨೦೦೫ ಪ್ರಕರಣಗಳು ಮಾತ್ರ ಬಾಕಿ ಇದ್ದು, ಶೀಘ್ರವೇ ತನಿಖೆಗಳನ್ನು ಚುರುಕುಗೊಳಿಸಲಾಗುವುದು ಎಂದರು.

೯೯ ರೈತರಿಗೆ ೫೦೦ ಕೋಟಿ ಪರಿಹಾರ :
ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್‌ಗೆ ಭೂಮಿ ಕೊಟ್ಟ ರೈತರು ಹಾಗೂ ಸರ್ಕಾರದ ಮದ್ಯೆ ಇದ್ದ ತಕರಾರುಗಳಿಂದಾಗಿ ಅನೇಕ ಆತ್ಮಹತ್ಯೆ ಯತ್ನಗಳನ್ನು ತಡೆದು ಉಭಯತರ ಮದ್ಯೆ ಮಾತುಕತೆಗೆ ಅನುಕೂಲ ಮಾಡಿಕೊಡುವ ಮೂಲಕ ಸುಮಾರು ೯೯ ರೈತರಿಗೆ ೫೦೦ ಕೋಟಿ ಪರಿಹಾರ ಹಣವನ್ನು ವರ್ಗಾಯಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಹಕಾರಿಯಾಗಿ ಪ್ರಮುಖ ಪಾತ್ರ ವಹಿಸಿದೆ.

ಲೋಕ ಸ್ಪಂದನೆಗೆ ಉತ್ತಮ ಪ್ರತಿಕ್ರಿಯೆ :
ಇಲಾಖೆಯ ಕಾರ್ಯ ವೈಖರಿ ಕುರಿತಂತೆ ನಡೆಸುವ ಲೋಕ ಸ್ಪಂದನೆ ಸಮೀಕ್ಷೆಯಲ್ಲಿ ೬೯೬೭ ಸ್ಕ್ಯಾನ್ ನಲ್ಲಿ ಶೇ. ೯೦ರಷ್ಟು ಉತ್ತಮ ಪ್ರತಿಕ್ರಿಯೆ ನೀಡಿರುವುದು ಸಮಾದಾನಕರವಾಗಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಇಲಾಖೆಯ ಸಿಬ್ಬಂದಿಯಲ್ಲಿ ಉತ್ತಮ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ೩೯೫ ಬಾರಿ ಕವಾಯತು ನಡೆಸಲಾಗಿದೆ. ೪೯೮ ರೌಡಿ ಶೀಟರ್ ಗಳಿಂದ ಬಾಂಡ್ ಬರೆಸಿಕೊಂಡಿದ್ದು, ೫೮ ಜನರು ಹಲವಾರು ವರ್ಷಗಳಿಂದ ಶಿಸ್ತಿನಿಂದ ಉತ್ತಮ ನಡವಳಿಕೆಯನ್ನು ಹೊಂದಿರುವ ಹಿನ್ನಲೆಯಲ್ಲಿ ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನೂ ಹೊಸದಾಗಿ ೧೧೦ ರೌಡಿ ಶೀಟರ್‌ಗಳ ಫೈಲ್ ತೆರೆಯಲಾಗಿದೆ ಎಂದು ಹೇಳಿದರು.

ಇಲ್ಲಿಯವರೆಗೆ ೪೭ ಗಾಂಜಾ ಪ್ರಕರಣಗಳನ್ನು ದಾಖಲು ಮಾಡಿದ್ದು, ಸುಮಾರು ೨ ಕೋಟಿ ೩ ಲಕ್ಷ ೭೯ ಸಾವಿರ ಬೆಲೆ ಬಾಳುವ ೪೮೫ ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ೧೬೭ ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ೨೯ ಮಂದಿಯನ್ನು ಬಂಧಿಸಲಾಗಿದೆ.

ಸಾರ್ವಜನಿಕರ ಸಹಕಾರ ಅತ್ಯಗತ್ಯ :
ಕೋಲಾರ ಪೊಲೀಸ್ ಜಿಲ್ಲೆಯಲ್ಲಿ ಒಟ್ಟು ೪ ತಾಲ್ಲೂಕುಗಳಲ್ಲಿ ೧೭ ಪೊಲೀಸ್ ಠಾಣೆಗಳಿದ್ದು, ಅವುಗಳಲ್ಲಿ ೬೫೬ ನಾಗರೀಕ ಪೊಲೀಸರು ಹಾಗೂ ೨೯೫ ಮೀಸಲು ಪೊಲೀಸರು ಇದ್ದಾರೆ. ಒಟ್ಟಾರೆ ಜನಸಂಖ್ಯೆಗೆ ಅಂದಾಜಿಸಿದರೆ ಪ್ರತಿ ೧೨೦೦ ಜನರಿಗೆ ಒಬ್ಬ ಪೇದೆ ಕಾರ್ಯನಿರ್ವಹಿಸಬೇಕಿದೆ. ಸಾರ್ವಜನಿಕರು ಹಾಗೂ ಇಲಾಖೆ ಪರಸ್ಪರ ಸಹಕಾರದೊಂದಿಗೆ ಸಾಮೂಹಿಕ ಹೊಂದಾಣಿಕೆಯಲ್ಲಿ ಕೆಲಸ ಮಾಡಬೇಕಿದೆ. ಇದಕ್ಕೆ ಸಾರ್ವಜನಿಕರು ಸ್ಪಂಧಿಸಬೇಕಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ.ಬಾಸ್ಕರ್, ಡಿವೈಎಸ್ಪಿ ಮಲ್ಲೇಶ್, ನಂದಕುಮಾರ್, ಡಿಎಆರ್ ಕಮಾಂಡೆಂಟ್ ರಘು, ಗ್ರಾಮಾಂತರ ಠಾಣೆ ಪಿಎಸ್ಐಗಳಾದ ಲೋಕೇಶ್ , ವಸಂತ್ ಮತ್ತಿತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!