• Sat. Jul 27th, 2024

PLACE YOUR AD HERE AT LOWEST PRICE

ಎಡಗೈ ಬಲಗೈ ಎಂದು ಒಡುಕು ಮೂಡಿಸುತ್ತಿರುವವರ ಮೇಲೆ ಆಯೋಗ ಕ್ರಮ ಜರುಗಿಸಲು ಒತ್ತಾಯ.

ಕೋಲಾರ:ಸಾಮಾಜಿಕ ಜಾಲತಾಣದಲ್ಲಿ ಎಡಗೈ ಬಲಗೈ ಎಂದು ಸಹೋದರತ್ವವನ್ನು ಹಾಗೂ ಅಸ್ಪಶ್ಯರಲ್ಲಿ ಒಡುಕು ಮೂಡಿಸುತ್ತಿರುವ ಮಾಜಿ ಸ್ಪೀಕರ್ ಕೆ  ಆರ್ ರಮೇಶ್ ಕುಮಾರ್ ಹಾಗೂ ಕೋಲಾರ ಶಾಸಕ ಕೊತ್ತೂರು ಮಂಜುನಾಥ ವಿರುದ್ಧ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಸುಮೊಟೊ ದೂರು ದಾಖಲಿಸುವಂತೆ ಕೆ ಡಿ ಎಸ್ ಎಸ್ ಒತ್ತಾಯಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಸಂಘಟನೆ ಒಬ್ಬ ಶಾಸಕನಾದವನು ವಿಧಾನಸಭಾ ಅಧ್ಯಕ್ಷರ ಬಳಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ನಾನು ಯಾವುದೇ ರೀತಿಯ ರಾಗದ್ವೇಷಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಪ್ರಮಾಣ ಮಾಡುತ್ತಾನೆ ಆದರೆ ಕೋಲಾರ ಶಾಸಕರಾದ ಕೊತ್ತೂರ್ ಮಂಜುನಾಥ್ ಅವರು ಒಂದು ವಾರದಿಂದ ಬಲಗೈಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಅಪಪ್ರಚಾರ ಮಾಡುತ್ತಿದ್ದಾರೆ.

ಇದಕ್ಕೆ ಬೆಂಬಲವಾಗಿ ವಿಧಾನಸಭಾ ಮಾಜಿ ಅಧ್ಯಕ್ಷರಾದ ಕೆ ಆರ್ ರಮೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಸ್ಪೃಶ್ಯರ ಮಧ್ಯೆ ಜಗಳವನ್ನುಂಟು ಮಾಡುವ ರೀತಿಯಲ್ಲಿ ಪತ್ರಿಕಾ ಹೇಳಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಹೇಳಿರುವುದನ್ನ ಕೂಡಲೆ ಪೋಲಿಸ್ ಇಲಾಖೆ ಸಾಮಾಜಿಕ ಜಾಲತಾಣ ನಿಗಾ ಘಟಕ ವತಿಯಿಂದ ಸುಮೊಟೊ ಕೆಸು ದಾಖಲೆಸುವಂತೆ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್ ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ನಜೀರ್ ಅಹ್ಮದ್ ಮತ್ತು ಅನಿಲ್ ಕುಮಾರ್ ಅವರು ಮಾಲೂರು ಶಾಸಕ ನಂಜೇಗೌಡ ಒಳಗೊಂಡಂತೆ ಕೂಡಲೇ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಕೋಲಾರ್ ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ ಒತ್ತಾಯಿಸಿದ್ದಾರೆ. ರಾಜೀನಾಮೆಯನ್ನು ಸ್ವಾಗತಿಸಿರುವ ಅವರು  ಚುನಾವಣೆ ಎದುರಿಸಲು ಒತ್ತಾಯಿಸಿದ್ದಾರೆ.

ಕೋಲಾರ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ರಾಜಕೀಯ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ತಾತ್ಕಾಲಿಕವಾಗಿ ಹುಟ್ಟಾಗುತ್ತಿರುವ ಉಪಜಾತಿಗಳ ವಿಚಾರವನ್ನು ತಲೆಕೆಡಿಸಿಕೊಳ್ಳದೆ ರಾಜಕೀಯ ತೀರ್ಮಾನಗಳು ಏನೇ ಆದರೂ ನಾವೆಲ್ಲ ಸಹೋದರ ಭಾವನೆಯಿಂದ ಇಂಥ ವಿಚಾರಗಳಿಗೆ ಕಿವಿಗೊಡದೆ ಸಹಬಾಳ್ವೆ ನಡೆಸೋಣ ಎಂದು ಅವರು  ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!