• Mon. Apr 29th, 2024

PLACE YOUR AD HERE AT LOWEST PRICE

ಕೋಲಾರ:ಕೋಮುವಾದಿ ಕೂಟವಾಗಿರುವ ಕೋಲಾರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಜ್ಯಾತ್ಯಾತೀತತೆ ಮತ್ತು ಸಂವಿಧಾನವನ್ನು  ಉಳಿಸುವ ಕೆಲಸ ಮಾಡಲು ದಲಿತರು ಹಿಂದುಳಿದವರು ಮುಂದಾಗಬೇಕು ಎಂದು ದಲಿತ ವಿಮೋಚನೆಯ ಮಾನವ ಹಕ್ಕು ವೇದಿಕೆ ಕರ್ನಾಟಕದ ರಾಜ್ಯ ಸಂಚಾಕ ಬಸವರಾಜ್ ಕೌತಾಳ್ ಹೇಳಿದರು.

ಅವರು ನಗರದ ನಚಿಕೇತ ನಿಲಯದ ಆವರಣದಲ್ಲಿರುವ ಬುದ್ದ ಪ್ರಾರ್ಥನಾ ಮಂದಿರದಲ್ಲಿ ಪರಿಶಿಷ್ಟ ಜಾತಿ ಜನರ ಸಭೆಯಲ್ಲಿ ಮಾತನಾಡುತ್ತಾ ದೇಶದ ಸಂವಿಧಾನಕ್ಕೆ ಗಂಡಾಂತರ ಬಂದಿರುವ ಈ ವೇಳೆ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಸಂವಿಧನಾ ವಿರೋಧಿಗಳಾದ ಕೋಮುವಾದಿಗಳನ್ನು ಸೋಲಿಸಲು ಮುಖಂಡರು ಮತದಾರರಿಗೆ ತಿಳುವಳಿಕೆ ನೀಡಬೇಕು ಎಂದರು.

ಇಲ್ಲಿನ ಕೆಲವು ದಲಿತ ಮುಂಖಂಡರು ಈ ಹಿಂದೆ ಕೋಮುವಾದಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ ಪರಿಣಾಮ ಜಿಲ್ಲೆಯ ದಲಿತ ಚಳುವಳಿಗೆ ಕಳಂಕ ಉಂಟಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ಸಂವಿಧಾನವನ್ನು ನಾಶಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕೆಂದರೆ ಈ ಬಾರಿ ಕೇಂದ್ರದಲ್ಲಿ ಕೋಮುವಾದಿ ಕೂಟವಾದ ಎನ್.ಡಿ.ಎ ಅಧಿಕಾರಕ್ಕೆ ಬರದಂತೆ ಎಚ್ಚರ ವಹಿಸಬೇಕಿದೆ ಎಂದರು.

ಕೋಲಾರ ಜಿಲ್ಲೆಯು ಸೈದ್ಯಾಂತಿಕವಾಗಿ ಮತ್ತು ಚಾರಿತ್ರಿಕವಾಗಿ ಚಳುವಳಿಗಳ ಜಿಲ್ಲೆ ಎಂದು ಹೆಸರು ಪಡೆದಿದೆ. ಹೀಗಿರವಾಗ ಕಳೆದ 2019ರ ಲೋಕಾಸಭಾ ಚುನಾವಣೆಯಲ್ಲಿ ತನ್ನ ಸೈದ್ಯಾಂತಿಕತೆಯ ಅಸ್ತಿತ್ವವನ್ನು ಕಳೆದುಕೋಂಡ ರೀತಿ ಕೆಲ ದಲಿತ ನಾಯಕರು ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕನಿಷ್ಠ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಾದರೂ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕಿದೆ. ಆ ಮೂಲಕ ಅಸ್ಪೃಷ್ಯರು ಮತ್ತು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಐಕ್ಯಮಾಡಿಕೊಂಡು ಕೋಮುವಾದಿ ಎನ್.ಡಿ.ಎ ಕೂಟವನ್ನು ಸೋಲಿಸುವ ಜವಾಬ್ದಾರಿಯನ್ನು ನಾಯಕರು ತೆಗೆದುಕೊಂಡು ಕೆಲಸ ಮಾಡುವ ಮೂಲಕ ತಮ್ಮಗಳ ತಪ್ಪನ್ನು ತಿದ್ದಿಕೊಳ್ಲಬೇಕಿದೆ ಎಂದರು.

ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಒಂದೇ ತಾಯಿ ಮಕ್ಕಳಂತೆ ಬಾಳುತ್ತಿರುವ ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಒಡೆಯುವ ಕೆಲಸ ನಡೆಯುತ್ತಿರುವುದು ದುರಂತದ ಸಂಗತಿಯಾಗಿದೆ. ಇದಕ್ಕೆ ಮುಖಂಡರು ಅವಕಾಶ ನೀಡಬಾರದು. ಈ ಬಗ್ಗೆ ರಾಜ್ಯಾದ್ಯಂತ ಸಭೆಗಳನ್ನು ನಡೆಸಸಿ ತಿಳುವಳಿಕೆಯನ್ನು ನೀಡಲಾಗುತ್ತಿದೆ. ಜೊತೆಗೆ ಕೋಮುವಾದಿಗಳ ಹುನ್ನಾರಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಅಂಬಣ್ಣ ಅರೋಲಿಕರ್, ಹೂವರಸನಹಳ್ಳಿ ರಾಜಪ್ಪ, ಹಾರೋಹಳ್ಳಿ ರವಿ, ಲಕ್ಷ್ಮಮ್ಮ,  ರಾಮಪ್ಪ, ವೇಣು, ಕಲಾವಿದ ಮಾರುತಿ ಪ್ರಸಾದ್, ಸುಬ್ರಮಣಿ, ಮಾದಿ ದಂಡೋರದ ಹಾಲೇರಿ ಮುನಿರಾಜು, ಹೆಚ್.ಎನ್.ನಾರಾಯಣಸ್ವಾಮಿ, ವೆಂಕಟೇಶಪ್ಪ, ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!