• Wed. May 22nd, 2024

PLACE YOUR AD HERE AT LOWEST PRICE

ಕೋಲಾರ, ಏಪ್ರಿಲ್.15 : ದೇಶದಲ್ಲಿ ಜಾತಿ, ಧರ್ಮಗಳ ಮಧ್ಯೆ ಗಲಾಟೆ ಮಾಡಿ ದೇವರ ಹೆಸರಿನಲ್ಲಿ ಜನಗಳನ್ನು ಯಾಮಾರಿಸಿದ್ದು ಅಲ್ಲದೆ ಸಂವಿಧಾನಕ್ಕೆ ಧಕ್ಕೆ ಉಂಟುಮಾಡಲು ಹೊರಟಿರುವ ಎನ್.ಡಿ.ಎ.ಮೈತ್ರಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸಂವಿಧಾನ ರಕ್ಷಣೆಗೆ ಬದ್ದವಾಗಿರುವ ಕಾಂಗ್ರೆಸ್ ಪಕ್ಷದ ಕೆ.ವಿ ಗೌತಮ್ ಅವರನ್ನು ಬೆಂಬಲಿಸಲಿದೆ ಎಂದು ಕದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಹತ್ತು ವರ್ಷಗಳ ಮೋದಿ ಸರಕಾರ ಮತ್ತು ರಾಜ್ಯದ ಹಿಂದಿನ ಬಿಜೆಪಿ ನೇತೃತ್ವದ ಸರಕಾರಗಳು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ನಿಂತಿದ್ದು ಸಾಮಾನ್ಯ ಜನರನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಮಾಡಿದ್ದಾರೆ ಇದರ ಪರಿಣಾಮವಾಗಿ ಕಳೆದ 2023 ರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕದಸಂಸ ತೀರ್ಮಾನವನ್ನು ಕೈಗೊಂಡು ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲಾಗಿದೆ ಅದೇ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸಂಘಟನೆಯ ಮುಖಂಡರು ಕಾರ್ಯಕರ್ತರು ಶ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಅನೇಕ ಆಶ್ವಾಸನೆಗಳನ್ನು ನೀಡಿದ್ದರು ಪ್ರಮುಖವಾಗಿ ಅಚ್ಛೇದಿನ್ ಹೆಸರಿನಲ್ಲಿ ಮತ ಪಡೆದ ಬಿಜೆಪಿಯವರು ಪ್ರತಿಯೊಬ್ಬರಿಗೂ 15 ಲಕ್ಷ ಖಾತೆಗೆ ಹಾಕುತ್ತೇವೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್ ಬೆಲೆ ಇಳಿಸುತ್ತೇವೆ ಎಂದು ಹೇಳಿ ದಿನನಿತ್ಯ ಏರಿಕೆ ಮಾಡಿದರು ಜಿಎಸ್ಟಿಯಲ್ಲಿ ರಾಜ್ಯಕ್ಕೆ ಬರಬೇಕಾದ ಹಣ ನೀಡದೇ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಯುವಕರಿಗೆ ಪ್ರತಿ ವರ್ಷವೂ2 ಕೋಟಿ ಉದ್ಯೋಗ ಎಂದು ಆಸೆ ಹುಟ್ಟಿಸಿ ಅನ್ಯಾಯ ಮಾಡಿದರು ಎಂದು ಆರೋಪಿಸಿದರು.
ಕಳೆದ 10 ವರ್ಷಗಳಲ್ಲಿ ಮೋದಿ ಮತ್ತು ಧರ್ಮದ ಅಮಲನ್ನು ತುಂಬಿಸಿ ಸಮಸ್ಯೆಗಳನ್ನು ಬದಿಗೊತ್ತಿದ್ದಾರೆ ಇದೀಗ ಸಂಸದರು, ಸಚಿವರು ಸಂವಿಧಾನ ಬದಲಾವಣೆ ಮಾತಾಡಿದ್ದಾರೆ ಮುಂದೆ ಏನಾದರೂ 400 ಸ್ಥಾನಗಳು ಬಂದರೆ ಸಂವಿಧಾನ ಬದಲಾವಣೆ ಖಚಿತ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ. 
ಈ ಎಲ್ಲ ಅಂಶಗಳನ್ನು ಮನಗಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡಬೇಕು ಬಿಜೆಪಿಯ ಸಮಾವೇಶದಲ್ಲಿ ದಲಿತ ಸಂಘಟನೆಗಳು ಭಾಗವಹಿಸಿದ್ದು ಕೆಲವರು ಕೃಪಾ ಪೋಷಕ ನಾಟಕ ಮಂಡಳಿಯ ಏಜೆಂಟರು ಅಲ್ಲಿದ್ದಾರೆ ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.
ಬಿಜೆಪಿಯವರು ದೇಶ ಭಕ್ತಿಯ ಬಗ್ಗೆ ಮಾತನಾಡುತ್ತಾರೆ, ದಲಿತರು ಆದಿ ದ್ರಾವಿಡರು ಈ ದೇಶದ ಮೂಲ ನಿವಾಸಿಗಳು, ನಮಗೆ ದೇಶಭಕ್ತಿಯ ಬಗ್ಗೆ ದೇಶಕ್ಕೆ ವಲಸೆ ಬಂದ ಆರ್ಯರಿಂದ ಕಲಿಯುವ ಅವಶ್ಯಕತೆಯಿಲ್ಲ, ಮೊದಲು ನಾವು ಭಾರತೀಯರು ಎಂಬ ನಂಬಿಕೆಯ ದೇಶಭಕ್ತಿಯ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಈಗಾಗಲೇ ತಿಳಿಸಿದ್ದಾರೆ ಎಂದರು. 
ಈ ಪತ್ರಿಕಾಗೋಷ್ಠಿಯಲ್ಲಿ ಕದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್,  ವಿಜಯನರಸಿಂಹ, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ,  ಬೆಂಗಳೂರು ವಿಭಾಗದ ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಗೋವಿಂದರಾಜು, ವೆಂಕಟೇಶ್ ಮುಂತಾದವರು ಇದ್ದರು

Related Post

ಹತ್ತು ದಿನಗಳೊಳಗೆ ಎಪಿಎಂಸಿ ಅಧಿಕಾರಿಗಳ,ದಲ್ಲಾಳರ ಹಾಗೂ ರೈತರ ಸಭೆಯನ್ನು ನಡೆಸಿ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ : ವಿವಿಧ ಜನಪರ ಸಂಘಟನೆಗಳಿoದ ಆಗ್ರಹ
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ

Leave a Reply

Your email address will not be published. Required fields are marked *

You missed

error: Content is protected !!