• Fri. Oct 18th, 2024

PLACE YOUR AD HERE AT LOWEST PRICE

ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಕೋಲಾರ: ನಗರದ ವಾಲ್ಮೀಕಿ ವೃತ್ತದಲ್ಲಿರುವ ವಾಲ್ಮೀಕಿ ಸಮುದಾಯದ ಭವನದಲ್ಲಿ ಆದಿ ಕವಿ, ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಸಮುದಾಯದ ಮುಖಂಡರು ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹಿರಿಯ ಮುಖಂಡ ನರಸಿಂಹಯ್ಯ, ಜೀವನದಿಂದ ಸಾಮಾನ್ಯ ವ್ಯಕ್ತಿಯೊಬ್ಬ ಉತ್ತಮ ವ್ಯಕ್ತಿಯಾಗಿ ಬದಲಾಗಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿ ಉದಾಹರಣೆ. ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿಯೂ ಅವರು ಭಾರತದಲ್ಲಿ ಇಂತಹ ಜಾಗ ಇಂತಹಲ್ಲಿಯೇ ಇದೆ ಎಂದು ಕಾವ್ಯದಲ್ಲಿ ಹೆಸರಿಸಿದ್ದಾರೆ. ಮಹರ್ಷಿ ವಾಲ್ಮೀಕಿಯವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮತೆ, ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಮುಖಂಡ ಕುವೆಂಪು ನಗರ ಆನಂದ್ ಮಾತನಾಡಿ, ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಕೃತಿಯನ್ನು ರಚಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ನಮ್ಮ ಆಚಾರ ವಿಚಾರ, ಸಂಸ್ಕೃತಿ, ನಡೆ ನುಡಿಗಳು ರಾಮಾಯಣದಲ್ಲಿದೆ ಎಂದರು.
 ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ಕೆಎಸ್‌ಆರ್‌ಟಿಸಿ ಮುನಿಯಪ್ಪ, ಕೋದಂಡಪ್ಪ, ನಾಗರಾಜು, ನವೀನ್, ತಿಮ್ಮರಾಯಪ್ಪ, ರಾಜಣ್ಣ, ರವಿ ಮತ್ತಿತರರು ಹಾಜರಿದ್ದರು.

Related Post

ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್
ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳಲು ಗುತ್ತಿಗೆದಾರರಿಗೆ ನೈತಿಕತೆ ಇಲ್ಲ – ಎಂ.ಎಸ್.ನಾರಾಯಣಸ್ವಾಮಿ

Leave a Reply

Your email address will not be published. Required fields are marked *

You missed

error: Content is protected !!