• Fri. Oct 18th, 2024

PLACE YOUR AD HERE AT LOWEST PRICE

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳಲು ಗುತ್ತಿಗೆದಾರರಿಗೆ ನೈತಿಕತೆ ಇಲ್ಲ – ಎಂ.ಎಸ್.ನಾರಾಯಣಸ್ವಾಮಿ

ಕೋಲಾರ,ಅ,೧೫: ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರ ರಾಜಿನಾಮೆಯನ್ನು ಕೇಳಿರುವವರು ಕಾಂಗ್ರೆಸ್ ಕಾರ್ಯಕರ್ತರೇ ಅಲ್ಲ ಅವರೆಲ್ಲಾ ಗುತ್ತಿಗೆದಾರರು ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ರಾಜಿನಾಮೆ ಕೇಳುವಂತ ಯಾವ ನೈತಿಕತೆಯೂ ಇಲ್ಲ ಎಂದು ಕರ್ನಾಟಕ ದಲಿತ ರಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ನಾರಾಯಣಸ್ವಾಮಿ ಪ್ರತಿಪಾದಿಸಿದರು,

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸೆ,೨೮ರಂದು ನಡೆದ ಕಾಂಗ್ರೆಸ್  ಸಭೆಯಲ್ಲಿ ಜಿಲ್ಲಾಧ್ಯಕ್ಷರ ಕತ್ತು ಹಿಡಿದು ದಬ್ಬಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಅವರು ಗುತ್ತಿಗೆದಾರರು ಅವರಿಗೂ ಕಾಂಗ್ರೆಸ್ ಸಭೆಗೂ ಸಂಬoಧವಿಲ್ಲ ಅಂಥವರನೆಲ್ಲಾ ಉದ್ದೇಶ ಪೂರ್ವಕವಾಗಿ ಸಭೆಗೆ ಕರೆಸಿ ಜಿಲ್ಲಾಧ್ಯಕರನ್ನು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಪಮಾನ ಮಾಡಿದ್ದಾರೆ. ಹಿಂದುಳಿದ ವರ್ಗದವರು ಜಿಲ್ಲಾಧ್ಯಕ್ಷರಾಗಿರುವುದನ್ನು ಸಹಿಸಲಾಗದೆ ದ್ವೇಷದ ರಾಜಕಾರಣ ಮಾಡಲು ಕಾಣದ ಕೈಗಳ ಕುತಂತ್ರವಾಗಿದೆ ಎಂದು ಆರೋಪಿಸಿದರು,

ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ ಅವರು ಮಾಲೂರಿನ ಪುರಸಭೆಯಲ್ಲಿ ೩ ಬಾರಿ ಅಧ್ಯಕ್ಷರಾಗಿ ಆಡಳಿತ ನಡೆಸಿದರು, ಹಲವಾರು ನಿಮಗಮ ಮಂಡಳಿಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಇರುವ ಹಿನ್ನಲೆಯಲ್ಲಿ ರಮೇಶಕುಮಾರ್ ಹಾಗೂ ಕೆ.ಹೆಚ್.ಮುನಿಯಪ್ಪ ಎರಡು ಕಡೆಯವರ ಒಮ್ಮತ ಅಭ್ಯರ್ಥಿಯಾಗಿ ಜಿಲ್ಲಾಧ್ಯಕ್ಷರನ್ನಾಗಿ ಲಕ್ಷ್ಮಿನಾರಾಯಣ ಅವರನ್ನು ಆಯ್ಕೆ ಮಾಡಿದ್ದರು. ಪಕ್ಷದಲ್ಲಿ ಯಾವುದೇ ಪಕ್ಷಪಾತ ಇಲ್ಲದೆ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಇವರ ಏಳ್ಗೆಯನ್ನು ಸಹಿಸದ ಕೆಲವರು ಪೂರ್ವ ಯೋಜಿತವಾಗಿ ಸಭೆಯಲ್ಲಿ ಗಲಭೆಯನ್ನು ಹುಟ್ಟು ಹಾಕಿದರು ಎಂದು ದೂರಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿ, ಶಾಸಕ ಕೊತ್ತೂರು ಮಂಜುನಾಥ್ ಅವರು ತಮ್ಮ ಹಿಂಬಾಲಕರಿoದ ಹಾದಿ ತಪ್ಪುತ್ತಿದ್ದಾರೆ, ಇಂಥಹ ಪ್ರಕರಣಗಳಿಂದ ಶಾಸಕರಿಗೆ ಕೆಟ್ಟ ಹೆಸರು ಬರುವಂತಾಗಿದೆ. ಹಲವಾರು ಭಾರಿ ಮುಜುಗರ ಸಂದರ್ಭಗಳನ್ನು ಎದುರಿಸುವಂತಾಗಿದೆ. ಇಂಥವರನ್ನು ದೂರ ಇಡುವುದು ಉತ್ತಮ, ಶಾಸಕರ ಬಗ್ಗೆ ನಮಗೆ ಅಪಾರ ಗೌರವವಿದೆ. ದಲಿತರು ಹಾಗೂ ಆಲ್ಪಸಂಖ್ಯಾತ ವರ್ಗದವರಿಂದ ಅವರು ಶಾಸಕರಾಗಿದ್ದಾರೆ. ಗುತ್ತಿಗೆದಾರರು ಜಿಲ್ಲಾಧ್ಯಕ್ಷರನ್ನು ರಾಜಿನಾಮೆ ಕೇಳುವಂತ ಹಕ್ಕು ಅವರಿಗಿಲ್ಲ, ಜಿಲ್ಲಾಧ್ಯಕ್ಷರನ್ನು ಪ್ರಶ್ನಿಸುವ ಹಕ್ಕು ಕೆ,ಪಿ.ಸಿ.ಸಿ.ಗೆ ಮಾತ್ರ ಇದೆ ಎಂದು ಹೇಳಿದರು.

ಉರಟಿ ಆಗ್ರಹಾರದ ಚೌಡರೆಡ್ಡಿ ಈ ಹಿಂದೆ ವರ್ತೂರು ಪ್ರಕಾಶ್ ಹಿಂಬಾಲಕನಾಗಿದ್ದು ಹಲವಾರು ಗುತ್ತಿಗೆಗಳನ್ನು ಪಡೆದು ಲೂಟಿ ಮಾಡಿದಂತವರು, ಗೆದ್ದೆತ್ತಿನ ಬಾಲ ಹಿಡಿಯುವವರನ್ನು ಹಿಂದಿಟ್ಟು ಕೊಂಡು ಶಾಸಕ ಕೊತ್ತೂರು ಮಂಜುನಾಥ್‌ರವರು ರಾಜಕೀಯ ಮಾಡಿದರೆ ಮಾನ ಮಾರ್ಯದೆ ಇರುವುದಿಲ್ಲ. ಅವರು ಸರ್ಕಾರಿ ಗುತ್ತಿಗೆ ಪಡೆಯಲು ಶಾಸಕರ ಹಿಂದೆ ಬಿದ್ದಿದ್ದಾರೆ ಎಂದು ಕಿಡಿಕಾರಿದರು,

ಇದೇ ಚೌಡರೆಡ್ಡಿ ದಲಿತ ಜಾತಿಯನ್ನು ನಿಂದನೆ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಇದೇ ಅವರಿಗೆ ಕೊನೆಯ ಎಚ್ಚರಿಕೆ ಅಗಿದೆ. ದಲಿತರ ತಂಟೆಗೆ ಬಂದರೆ ಮುಂದಿನ ದಿನದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ, ಯಾವುದೇ ಕಾರಣಕ್ಕೂ ಅಹಿಂದ ವರ್ಗದವರಿಗೆ ಅನ್ಯಾಯವಾಗಬಾರದು ಎಂದು ಆಗ್ರಹ ಪಡೆಸಿದರು,

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ರಕ್ಷಣ ಸಮಿತಿ ಜಿಲ್ಲಾಧ್ಯಕ್ಷ ಕಲ್ಕೆರೆ ವಿಜಯಕುಮಾರ್, ಪದಾಧಿಕಾರಿಗಳಾದ ಎನ್,ಕೆ. ವೆಂಕಟೇಶ್,ಚoದ್ರಪ್ಪ, ಮುನಿರಾಜು, ರೇಣುಕಾ ಟಿಪ್ಪು ಸೆಕ್ಯೂಲರ್ ಸೇನೆ ಅಧ್ಯಕ್ಷ ಅಸೀಪ್, ಸೀಯುಲ್ಲಾ ಉಪಸ್ಥಿತರಿದ್ದರು

Related Post

ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್
ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ

Leave a Reply

Your email address will not be published. Required fields are marked *

You missed

error: Content is protected !!