PLACE YOUR AD HERE AT LOWEST PRICE
ಕೆಜಿಎಫ್:ಕರಗದ ತವರೂರು ಬೇತಮಂಗಲದಲ್ಲಿ ಶ್ರೀ ದ್ರೌಪತಂಭ ಧರ್ಮರಾಯ ಸ್ವಾಮಿಯ 113ನೇ ವರ್ಷದ ಕರಗ ಮಹೋತ್ಸವ ಹಾಗೂ ವಿಜೇಂದ್ರ ಸ್ವಾಮಿಯ ಪುಪ್ಪ ಪಲ್ಲಕ್ಕಿ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ಆದ್ದೂರಿಯಾಗಿ ನಡೆಯಿತು.
ಗ್ರಾಮದ ಪಾಲಾರ್ ಕೆರೆಯ ದಡದಲ್ಲಿ ನೆಲೆಸಿರುವ ಶ್ರೀ ವಿಜೇಂದ್ರ ಸ್ವಾಮಿಯ ಬ್ರಹ್ಮರಥೋತ್ಸವದ ಪ್ರಯುಕ್ತ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು.ವಿಜೇಂದ್ರ ಸ್ವಾಮಿಯ ಜಾತ್ರ ಮಹೋತ್ಸವ ಸುಮಾರು 12 ದಿನಗಳಿಂದ ನಿತ್ಯ ಪಲ್ಲಕ್ಕಿಗಳು ಹಾಗೂ ಪೂಜಾ ಕೈಕಾರ್ಯಗಳೊಂದಿಗೆ ಯಶಸ್ವಿಯಾಗಿ ನಡೆಯಿತು.
ಶ್ರೀ ದೌಪತಂಭ ಧರ್ಮರಾಯ ಸ್ವಾಮಿಯ 113ನೇ ಕರಗ ಮಹೋತ್ಸವ ಆಚರಣೆಗೆ ಭರ್ಜರಿಯಾಗಿ ಸಿದ್ದತೆ ಮಾಡಲಾಗಿತು, ಪುಪ್ಪ ಪಲ್ಲಕ್ಕಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಕರಗ ಆಚರಣೆಗೆ ತಯಾರಿ ನಡೆಸುತ್ತಿದ್ದಂತೆ ಮಳೆಯ ಆರ್ಭಟದಿಂದ ಕರಗವನ್ನು ರಾತ್ರಿ 2 ಗಂಟೆ ಸುಮಾರಿಗೆ ಕರಗ ಪೂಜಾರಿ ಬೇತಮಂಗಲ ಕೃಷ್ಣಮೂರ್ತಿ ಕರಗವನ್ನು ಹೊತ್ತು ಹೊರ ಬರುತ್ತಿದ್ದಂತೆ ಭಕ್ತರಿಂದ ಗೋವಿಂದ ನಾಮ ಹೇಳುವ ಮೂಲಕ ಕರಗಕ್ಕೆ ಭಕ್ತರು ಸ್ವಾಗತಿಸಿದರು.
ಕರಗ ಪೂಜಾರಿ ಕೃಷ್ಣಮೂರ್ತಿ ಕರಗವನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ ಭಕ್ತರಿಂದ ಪೂಜೆ ಸ್ವೀಕರಿಸಿದರು, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ತಮತೆ ಹಾಗೂ ವಾಧ್ಯಗಳ ಶಬ್ಧಕ್ಕೆ ಕರಗ ನೃತ್ಯ ಮಾಡುವ ಮೂಲಕ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿತ್ತು.ವಿಜೇಂದ್ರಸ್ವಾಮಿ ಬ್ರಹ್ಮರಥೋತ್ಸದ ಪ್ರಯುಕ್ತ ಗ್ರಾಮದ 9 ದೇಗುಲಗಳ ದೇವರುಗಳನ್ನು ಪುಪ್ಪ, ಬೆಳ್ಳಿ ಪಲ್ಲಕ್ಕಿಯ ಮೂಲಕ ಮೆರವಣಿಗೆ ನಡೆಸಿ ಸಾರ್ವಜನಿಕರಿಂದ ಪೂಜೆ ಸ್ವೀಕರಿಸಿದರು.