• Wed. Sep 18th, 2024

PLACE YOUR AD HERE AT LOWEST PRICE

ಕೆಜಿಎಫ್: ಬೇತಮಂಗಲ ಹೋಬಳಿ ಗುಟ್ಟಹಳ್ಳಿಯಲ್ಲಿ ಹುಲ್ಕೂರು ಗ್ರಾಪಂನ ವಿವಿಧ ಗ್ರಾಮಗಳ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಹುಲ್ಕೂರು ಗ್ರಾಪಂನ ಹಂಗಳ ಗ್ರಾಮದ ಗ್ರಾಪಂ ಸದಸ್ಯರಾದ ರಮೇಶ್, ಸುಧಾರಾಣಿ, ಗ್ರಾಪಂ ಮಾಜಿ ಉಪಾಧ್ಯಕ್ಷ ವೇಣು ಸೇರಿದಂತೆ ಸ್ಥಳೀಯ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾತನಾಡಿ, ತಾಲ್ಲೂಕಿನ ಜನತೆ ನನಗೆ 2018ರಲ್ಲಿ ಅಶೀರ್ವಾದ ಮಾಡಿದ ಮೇಲೆ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇಲ್ಲದಿದ್ದರು,ಬಿಜೆಪಿ ಸರಕಾರದ ಮೇಲೆ ಒತ್ತಡ ಹಾಕಿ ಕೋಟ್ಯಾಂತರ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಕೆಜಿಎಫ್ ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಿ ಸಾವಿರಾರೂ ಮಂದಿಗೆ ಉದ್ಯೋಗ ನೀಡಬೇಕೆಂಬ ಹಿತದೃಷ್ಠಿಯಿಂದ ಸಕಾರದ ಮೇಲೆ ಒತ್ತಡ ಹಾಕಿ ಬಿಜಿಎಂಎಲ್‍ಗೆ ಸೇರಿದ 1 ಸಾವಿರ ಎಕರೆ ಭೂ ಪ್ರದೇಶವನ್ನು ರಾಜ್ಯ ಸರಕಾರದ ಅಧಿನಕ್ಕೆ ಪಡೆಯಲಾಗಿದೆ, ಅಲ್ಲಿ ಶೀಘ್ರದಲ್ಲಿಯೇ ಕೈಗಾರಿಕೆಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಲ್ಲೂಕಿನಲ್ಲಿ 5 ವರ್ಷಗಳಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಅನೇಕರು ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ದುರ್ಗಾಪ್ರಸಾದ್, ಗ್ರಾಪಂ ಅಧ್ಯಕ್ಷೆ ವೆಂಕಟಮ್ಮ, ಉಪಾಧ್ಯಕ್ಷ ಸೋಮಶೇಖರ್ ರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಕಾರಿ ಪ್ರಸನ್ನ, ಕಮ್ಮಸಂದ್ರ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ನಿವೃತ್ತ ದೈಹಿಕ ಶಿಕ್ಷಕ ವೆಂಕಟರವಣ, ನಲ್ಲೂರು ಶಂಕರ್, ಸುರೇಂದ್ರ ಗೌಡ, ಓಬಿಸಿ ಮುನಿಸ್ವಾಮಿ, ನಂಜುಂಡ ಗೌಡ, ಕೃಷ್ಣೇಗೌಡ, ಮಂಜುನಾಥ್, ಕೃಷ್ಣಾರೆಡ್ಡಿ, ವಿನುಕಾರ್ತಿಕ್, ಪದ್ಮನಾಭ ರೆಡ್ಡಿ, ಮುರಳಿ, ಬಾಬು, ವೆಂಕಟೇಶ್, ಶ್ಯಾಮಲಮ್ಮ, ವಿಕ್ಕಿರೆಡ್ಡಿ, ವೀರಭದ್ರ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!