• Thu. May 16th, 2024

PLACE YOUR AD HERE AT LOWEST PRICE

ಕೆಜಿಎಫ್:ಕರಗದ ತವರೂರು ಬೇತಮಂಗಲದಲ್ಲಿ ಶ್ರೀ ದ್ರೌಪತಂಭ ಧರ್ಮರಾಯ ಸ್ವಾಮಿಯ 113ನೇ ವರ್ಷದ ಕರಗ ಮಹೋತ್ಸವ ಹಾಗೂ ವಿಜೇಂದ್ರ ಸ್ವಾಮಿಯ ಪುಪ್ಪ ಪಲ್ಲಕ್ಕಿ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ಆದ್ದೂರಿಯಾಗಿ ನಡೆಯಿತು.

ಗ್ರಾಮದ ಪಾಲಾರ್ ಕೆರೆಯ ದಡದಲ್ಲಿ ನೆಲೆಸಿರುವ ಶ್ರೀ ವಿಜೇಂದ್ರ ಸ್ವಾಮಿಯ ಬ್ರಹ್ಮರಥೋತ್ಸವದ ಪ್ರಯುಕ್ತ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು.ವಿಜೇಂದ್ರ ಸ್ವಾಮಿಯ ಜಾತ್ರ ಮಹೋತ್ಸವ ಸುಮಾರು 12 ದಿನಗಳಿಂದ ನಿತ್ಯ ಪಲ್ಲಕ್ಕಿಗಳು ಹಾಗೂ ಪೂಜಾ ಕೈಕಾರ್ಯಗಳೊಂದಿಗೆ ಯಶಸ್ವಿಯಾಗಿ ನಡೆಯಿತು.

ಶ್ರೀ ದೌಪತಂಭ ಧರ್ಮರಾಯ ಸ್ವಾಮಿಯ 113ನೇ ಕರಗ ಮಹೋತ್ಸವ ಆಚರಣೆಗೆ ಭರ್ಜರಿಯಾಗಿ ಸಿದ್ದತೆ ಮಾಡಲಾಗಿತು, ಪುಪ್ಪ ಪಲ್ಲಕ್ಕಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಕರಗ ಆಚರಣೆಗೆ ತಯಾರಿ ನಡೆಸುತ್ತಿದ್ದಂತೆ ಮಳೆಯ ಆರ್ಭಟದಿಂದ ಕರಗವನ್ನು ರಾತ್ರಿ 2 ಗಂಟೆ ಸುಮಾರಿಗೆ ಕರಗ ಪೂಜಾರಿ ಬೇತಮಂಗಲ ಕೃಷ್ಣಮೂರ್ತಿ ಕರಗವನ್ನು ಹೊತ್ತು ಹೊರ ಬರುತ್ತಿದ್ದಂತೆ ಭಕ್ತರಿಂದ ಗೋವಿಂದ ನಾಮ ಹೇಳುವ ಮೂಲಕ ಕರಗಕ್ಕೆ ಭಕ್ತರು ಸ್ವಾಗತಿಸಿದರು.

ಕರಗ ಪೂಜಾರಿ ಕೃಷ್ಣಮೂರ್ತಿ ಕರಗವನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ ಭಕ್ತರಿಂದ ಪೂಜೆ ಸ್ವೀಕರಿಸಿದರು, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ತಮತೆ ಹಾಗೂ ವಾಧ್ಯಗಳ ಶಬ್ಧಕ್ಕೆ ಕರಗ ನೃತ್ಯ ಮಾಡುವ ಮೂಲಕ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿತ್ತು.ವಿಜೇಂದ್ರಸ್ವಾಮಿ ಬ್ರಹ್ಮರಥೋತ್ಸದ ಪ್ರಯುಕ್ತ ಗ್ರಾಮದ 9 ದೇಗುಲಗಳ ದೇವರುಗಳನ್ನು ಪುಪ್ಪ, ಬೆಳ್ಳಿ ಪಲ್ಲಕ್ಕಿಯ ಮೂಲಕ ಮೆರವಣಿಗೆ ನಡೆಸಿ ಸಾರ್ವಜನಿಕರಿಂದ ಪೂಜೆ ಸ್ವೀಕರಿಸಿದರು.

ಕರಗ ಮಹೋತ್ಸವ ಹಿನ್ನಲೆ ಕ್ಷೇತ್ರದ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹಾಗೂ ಮಾಜಿ ಶಾಸಕ  ವೈ.ಸಂಪಂಗಿ ಅವರಿಂದ ಮನರಂಜನೆಯ (ಆರ್ಕೆಸ್ಟ್ರ್)  ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಅಯೋಜನೆ ಮಾಡಲಾಗಿತು.
ಬೇತಮಂಗಲ ಜಾತ್ರೆಗೆ ಶಾಸಕಿ ರೂಪಕಲಾ  ಶಶಿಧರ್, ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಟಿಕೆಟ್  ಆಕಾಂಕ್ಷಿ ವಿ.ಮೋಹನ್ ಕೃಷ್ಣ, ದೇಗುಲಗಳ  ಕನ್ವಿನರ್ ಅ.ಮು.ಲಕ್ಷ್ಮೀನಾರಾಯಣ್, ಜಿಪಂ ಮಾಜಿ  ಸದಸ್ಯೆ ನಿರ್ಮಾಲ ಅಮರೇಶ್, ಕೋಟಿಲಿಂಗೇಶ್ವರ  ಸ್ವಾಮಿಯ ಪುತ್ರ ಶಿವಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!