• Fri. Oct 18th, 2024

ಸಿದ್ದರಾಮಯ್ಯ ಆಗಮನಕ್ಕೆ ಕೋಲಾರ ಜಿಲ್ಲಾ ಕುರುಬರ ಸಂಘ ಸ್ವಾಗತ : ಜೆ.ಕೆ.ಜಯರಾಂ

PLACE YOUR AD HERE AT LOWEST PRICE

ಮಾಜಿ ಮುಖ್ಯ ಮಂತ್ರಿಗಳು ಹಾಗೂ ಕುರುಬ ಸಮಾಜದ ರಾಜ್ಯ ಮುಖಂಡರಾದ ಸಿದ್ದರಾಮಯ್ಯನವರು ಕೋಲಾರ ವಿಧಾನ ಸಭಾಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದ್ದು ಜಿಲ್ಲಾ ಕುರುಬರ ಸಂಘ ಸ್ವಾಗತಿಸುತ್ತದೆಯೆಂದು ಕೋಲಾರ ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ತಿಳಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಾ,ಇದೇ ತಿಂಗಳ 9 ರ ಸೋಮವಾರ ಕೋಲಾರಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದು, ತಾವು ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಲಿದ್ದಾರೆ. ಘೋಷಣೆ ಮಾಡಿದ ಮರುದಿನದಿಂದ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಹೇಗಿದೆ ಎಂದು ತೋರಿಸುತ್ತೇವೆ ಎಂದರು.

ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಅವರು ಅಧಿಕಾರದಲ್ಲಿದ್ದಾಗ 170 ಕೋಟಿ ಅನುದಾನ ನೀಡಿದ್ದಾರೆ. ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಏನೂ ನೀಡಿಲ್ಲ,ನಾನು ಕನಕ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದು ವರ್ತೂರು ಪ್ರಕಾಶ್‌ ಹೇಳಿಕೆ ನೀಡಿರುವುದು  ಶುದ್ದ ಸುಳ್ಳು, ಹಿಂದೆ ಸಿದ್ದರಾಮಯ್ಯ ನವರು ಮುಖ್ಯ ಮಂತ್ರಿಗಳಾಗಿದ್ದಾಗ ಕೋಲಾರದ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ಬಿಡುಗಡೆ ಮಾಡಿದ್ದರೂ ದಾಖಲೆಗಳ ಕೊರತೆಯಿಂದ ಹಣ ಬಿಡುಗಡೆಗೆ ತೊಂದರೆ ಆಯಿತು. ಅದೇ ಅನುದಾನ ಈಗ ಮತ್ತೆ ಸರ್ಕಾರ ಬಿಡುಗಡೆ ಮಾಡಿದೆ. ವರ್ತೂರ್ ಪ್ರಕಾಶ್ ರವರು ಶಾಸಕರಾಗಿದ್ದಾಗ ಏಕೆ ಅನುದಾನ ಬಿಡುಗಡೆ ಮಾಡಿಸಲಿಲ್ಲವೆಂದು ಟೀಕಿಸಿದರು.

ನರೇಂದ್ರ ಮೋದಿಯವರು ನಮ್ಮ ನಾಯಕರು ಎಂದು ಹೇಳುತ್ತಿರುವ ಮಾಜಿ ಸಚಿವ ವರ್ತೂರ್ ಪ್ರಕಾಶ್ ರವರು ಸಿದ್ದರಾಮಯ್ಯ ನವರ ಹೆಸರು ಹೇಳಿಕೊಂಡು ಕೋಲಾರಕ್ಕೆ ಆಗಮಿಸಿ ಅವರ ಆಶೀರ್ವಾದದಿಂದಲೇ ಕೋಲಾರದಲ್ಲಿ ಶಾಸಕರಾಗಿದ್ದು ಎಂಬುದನ್ನು ಮರೆಯಬಾರದೆಂದರು.

ಕುರುಬ ಸಮಾಜ ಸಿದ್ದರಾಮಯ್ಯನರು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ತುದಿಗಾಲದಲ್ಲಿ ಕಾಯುತ್ತಿದ್ದು, ಸಮುದಾಯದ ಎಲ್ಲರೂ ಒಗ್ಗೂಡಿ ಪ್ರತೀ ಹಳ್ಳಿ ಹಳ್ಳಿಗೂ ಹೋಗಿ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇವೆ. ಅವರು ಗೆಲ್ಕುವುದರಲ್ಲಿ ಸಂಶಯವೇ ಇಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರು ಗೈರು ಹಾಜರಾದ ಹಿನ್ನಲೆಯಲ್ಲಿ, ಕುರುಬರ ಸಂಘದಲ್ಲಿ ಭಿನ್ನಾಭಿಪ್ರಾಯ ಹಾಗೂ ಗುಂಪುಗಳಿವೆಯೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸಂಘದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಜಿಲ್ಲಾ ಕುರುಬ ಸಂಘದ ಅಧ್ಯಕ್ಷರು ಅವರ ವ್ಯಯಕ್ತಿಕವಾಗಿ  ವರ್ತೂರ್ ಪ್ರಕಾಶ್ ಜೊತೆಗೆ ಇರಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ತ್ಯಾಗರಾಜ್,ಖಜಾಂಚಿ ಜಂಬಾಪುರ ವೆಂಕಟರಾಮ್,ಮುಖಂಡರುಗಳಾದ ಕುರಿಗಳ ರಮೇಶ್, ಗೋವಿಂದರಾಜು, ರಾಜೇಶ್ ಉಪಸ್ಥಿತರಿದ್ದರು.

 

ಇದನ್ನೂ ಓದಿ: ಬೇತಮಂಗಲದಲ್ಲಿ ಆಭರಣ ಕಳವಾಗಿದೆ ಎಂದು ದೂರು ನೀಡಿದ ಮಹಿಳೆಯೇ ಕಳ್ಳಿ

Related Post

ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್
ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ

Leave a Reply

Your email address will not be published. Required fields are marked *

You missed

error: Content is protected !!