PLACE YOUR AD HERE AT LOWEST PRICE
ಮಾಲೂರು:ಮಕ್ಕಳ ಹಕ್ಕುಗಳ ಅನುಷ್ಟಾನ, ಮಕ್ಕಳ ಸಂರಕ್ಷಣೆ ಮತ್ತು ಅವರ ಅಭಿವೃದ್ಧಿಗೆ ಒಂದು ರಾಷ್ಟ್ರೀಯ ಕಾರ್ಯಕ್ರಮವೆ ಮಕ್ಕಳ ಗ್ರಾಮಸಭೆಯಾಗಿದೆ ಎಂದು ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಸ್.ಅರ್.ಯಲ್ಲಪ್ಪ ತಿಳಿಸಿದರು
ಅವರು ಟೇಕಲ್ ಹೋಬಳಿಯ ಕೆ.ಜಿ.ಹಳ್ಳಿ ಗ್ರಾ.ಪಂ.ಅವರಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು..ಸಭೆಯಲ್ಲಿ ಹಲವಾರು ಶಾಲೆಗಳಿಂದ ಬಂದಿದ್ದ ಮಕ್ಕಳು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ.
ಅದಕ್ಕೆ ಅನುಗುಣವಾಗಿ ಕೆ.ಜಿ.ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೋಣೆ ಕಟ್ಟಲು, ಆಟದ ಮೈದಾನ, ಕಸ ಹಾಕಲು ಕಸದ ಬುಟ್ಟಿಗಳನ್ನು ಹಾಗೂ ಟೇಕಲ್ ಸರ್ಕಾರಿ ಪ್ರೌಢಶಾಲೆಯ ಸುತ್ತಲು ಬಂಡೆಗಲ್ಲುಗಳ ಮಧ್ಯೆ ಗಿಡಗಂಟೆಗಳ ಬೆಳೆದು ಅದನ್ನು ಸ್ವಚ್ಚತೆ ಮಾಡಲಾಗುವುದು ಮತ್ತು ಶಾಲೆಯ ಶೌಚಾಲಯ ಸ್ವಚ್ಛತೆ ಮಾಡಿಸುವುದಾಗಿ ತಿಳಿಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಮಮತಶಶಿಧರ ಮಾತನಾಡಿ ಮಕ್ಕಳು ತಮ್ಮ ಯಾವುದೇ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರೆ ಅದಕ್ಕೆ ತಕ್ಕ ಪರಿಹಾರ ಕಲ್ಪಿಸಲಾಗುವುದು. ನಿಮ್ಮ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿಯೇ ಈ ಮಕ್ಕಳ ಗ್ರಾಮಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ಈ ವೇಳೆ ಮಕ್ಕಳಿಗೆ ಪಂಚಾಯಿತಿ ವತಿಯಿಂದ ನೋಟ್ ಪುಸ್ತಕ ಹಾಗೂ ಪೆನ್ನು, ಸಿಹಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಎನ್.ಅರ್, ಕಾರ್ಯದರ್ಶಿ ಎಂ.ಸವಿತಾ, ನೋಡಲ್ ಅಧಿಕಾರಿ ಪಶುವೈದ್ಯ ರು ಡಾ: ಅರುಣ್ ಕುಮಾರ್, ಗ್ರಾಮಪಂಚಾಯಿತಿ ಸದಸ್ಯರಾದ ವೇದಾವತಿ, ಎಂ.ಮುರುಗೇಶ, ಅರುಣಮ್ಮ, ಮಂಜುಳಾ, ಶ್ರೀನಿವಾಸ, ಸರಸ್ವತಮ್ಮ, ಅನಿತಾ, ಶ್ವೇತಾ, ಸೋಮಶೇಖರ್, ನರಸಿಂಹ ಮೂರ್ತಿ, ವೆಂಕಟೇಶಪ್ಪ, ವಿಜಯಕುಮಾರ್, ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಕೆ.ವೆಂಕಟೇಶ್, ಶಶಿಧರ್, ಜಲಗಾರರು, ಗ್ರಾಮಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.