PLACE YOUR AD HERE AT LOWEST PRICE
ಬಂಗಾರಪೇಟೆ:ಮಕ್ಕಳ ದಿನಾಚರಣೆ ಕೇವಲ ಸ್ಮರಣಾರ್ಥ ಅಥವಾ ಬಹುಮಾನ ವಿತರಣೆಗೆ ಸೀಮಿತವಲ್ಲ ಬದಲಾಗಿ ಮಗುವಿನೊಳಗೆ ಸುಪ್ತವಾಗಿ ಅಡಗಿರುವ ಸಾಮರ್ಥ್ಯ ಮತ್ತು ಕೌಶಲ್ಯ ಅಭಿವ್ಯಕ್ತಿಗೆ ದೊರೆತ ವೇದಿಕೆಯಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಅಭಿಪ್ರಾಯದರು.
ಅವರು ತಾಲೂಕಿನ ಕಾಮಸಮುದ್ರ ಗ್ರಾಮದ ಕೆ.ಸಿ.ಆರ್. ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು.
ವಿದ್ಯಾರ್ಥಿಗಳು ಪುಸ್ತಕದಿಂದ ಪಡೆಯುವ ಜ್ಞಾನದ ಜೊತೆಗೆ ಪೋಷಕರ ಅನುಭವಗಳಿಂದ ನೀಡುವ ಅರಿವನ್ನೂ ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಉತ್ತಮ ಸುಸಂಸ್ಕೃತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಪತ್ರಕರ್ತರು ಜಾತಿ ಧರ್ಮ ಸಂಕೋಲೆಗಳಿಂದ ಹೊರಬಂದು ದೂರ ದೃಷ್ಟಿಯ ಆಲೋಚನೆಗಳೊಂದಿಗೆ ಸೌಲಭ್ಯಗಳಿಂದ ವಂಚಿತರಾದ ಕಟ್ಟ ಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿ ಆ ಮೂಲಕ ಸಮಾಜವನ್ನು ತಿದ್ದಲು ಐಕ್ಯತೆಯೊಂದಿಗೆ ಶ್ರಮಿಸುವಂತಹಾಗಬೇಕು.
ತಾಲೂಕು ನಿಕಟಪೂರ್ವ ಅಧ್ಯಕ್ಷ ಕೆ ಚಂದ್ರಾರೆಡ್ಡಿ ಮಾತನಾಡಿ, ಅಧ್ಯಕ್ಷ ಎಂ ಸಿ ಮಂಜುನಾಥ್ ರ ನೇತೃತ್ವದಲ್ಲಿ ಪತ್ರಕರ್ತರ ಸಂಘ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಯಶಸ್ಸಿನ ಪಯಣದತ್ತ ಸಾಗುತ್ತಿದೆ. ಸಮಾಜದ ಒಳಿತಿಗೆ ಪತ್ರಕರ್ತರ ಸೇವೆ ಮಹತ್ವಪೂರ್ಣದ್ದಾಗಿದೆ.
ಇಂದಿಗೂ ಸಹ ತಾಲೂಕಿನಲ್ಲಿ ಪತ್ರಕರ್ತರ ಭವನ ನಿರ್ಮಾಣವಾಗದೇ ಇರುವುದು ವಿಷಾದನೀಯ. ಆದ್ದರಿಂದ ನನ್ನ ಸ್ವಂತ ಬಡಾವಣೆಯಲ್ಲಿ 12 ಲಕ್ಷ ಬೆಲೆಬಾಳುವ 2100 ಚದರ ಅಡಿ ನಿವೇಶನವನ್ನು 5 ಲಕ್ಷ ರೂಗಳಿಗೆ ಭವನ ನಿರ್ಮಾಣಕ್ಕೆ ನೀಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ ಎಸ್ ಗಣೇಶ್ ಮಾತನಾಡಿ, ಬಂಗಾರಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲೆಯಲ್ಲೇ ಆತ್ಯಂತ ಕ್ರಿಯಾಶೀಲವಾದ ಸಂಘವಾಗಿದ್ದು, ಸಂಗದ ಅಧ್ಯಕ್ಷ ಎಂ.ಸಿ.ಮಂಜುನಾಥ್ ಮತ್ತು ತಂಡವು ಅಭಿನಂದನಾರ್ಹವಾಗಿದೆ.
ಕೋಲಾರ ಜಿಲ್ಲಾ ಮಟ್ಟದಲ್ಲಿ ಈ ರೀತಿಯ ಮಕ್ಕಳ ದಿನಾಚರನೆ ನಡೆಸಲು ನಾನು ಮತ್ತು ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಅನೇಕ ಬಾರಿ ಪ್ರಯತ್ನಿಸಿದ್ದು, ಇಂದಿಗೂ ಅದು ಸಾಕಾರಗೊಂಡಿಲ್ಲ. ಬಂಗಾರಪೇಟೆಯಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮಗಳು ಉತ್ತಮರೀತಿಯಲ್ಲಿ ನಡೆಯುತ್ತಿವೆ.
ನಮ್ಮ ದಿನನಿತ್ಯದ ಕೆಲಸ ಕಾರ್ಯಗಳ ನಡುವೆ ಆಗಾಗ ಕುಟುಂಬ ಸಮೇತರಾಗಿ ಒಂದು ಕಡೆ ಸೇರಿ ಆಟವಾಡುವುದು ಊಟ ಮಾಡುವುದು ಮತ್ತು ಕಾರ್ಯಕ್ರಮಗಳನ್ನು ಮಾಡುವುದು ಹೆಚ್ಚು ಹೆಚ್ಚು ನಡೆಯಬೇಕು. ಆಗ ಮಾತ್ರ ಪತ್ರಕರ್ತರ ಒಗ್ಗಟ್ಟು ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.
ಬಂಗಾರಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಚಂದ್ರಾರೆಡ್ಡಿರವರು ಉತ್ತಮ ಕೆಲಸ ಮಾಡಿದ್ದರು ಮತ್ತು ಅನೇಕ ವರ್ಷಗಳಿಂದ ಪತ್ರಕಕರ್ತರ ಸಂಘದ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಿತ್ತಾ ಬಂರುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ.
ಬಂಗಾರಪೇಟೆ ಸಂಘದಲ್ಲಿನ ಕ್ರಯಾಶೀಲ ಚಟುವಟಿಕೆಗಳು ಮುಂದುವರೆಯಬೇಕು ಎಂದು ಸಲಹೆ ನೀಡಿದ ಅವರು ಸಂಘಕ್ಕೆ ಒಂದು ಕಟ್ಟಡವನ್ನು ಆದಷ್ಟು ಬೇಗ ಮಾಡಿಕೊಂಡು ಅಲ್ಲಿ ಚಟುವಟಿಕೆಗಳನ್ನು ಮಾಡಿದರೆ ಇನ್ನಷ್ಟು ಉತ್ತಮವಾಗಿರುತ್ತದೆ ಎಂದು ಹೇಳಿದರು.
ತಾಲ್ಲೂಕು ಅಧ್ಯಕ್ಷ ಎಂ.ಸಿ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ರಾಮಮೂರ್ತಿ, ಎಚ್.ಎಲ್.ನಾಗರಾಜ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷ ಪುನೀತ್, ಖಜಾಂಚಿ ಏಸಾನುಲ್ಲಾ, ಕಾರ್ಯದರ್ಶಿ ಕುಮ್ಮಿ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಬಿ.ಟಿ.ಆನಂದ್ ಕುಮಾರ್, ಸದಸ್ಯರಾದ ಕುಮರೇಶ್, ಮಹೇಶ್, ಸಂತೋಷ್ ಸಚಿನ್, ಸೂಲಿಕುಂಟೆ ನಾಗರಾಜ್, ಮುರುಳಿಮೋಹನ್ ಸಂಪಾದಕಾರ ಎಚ್.ಎಲ್.ಸುರೇಶ್, ಕಲಾವತಿ, ಚಾನ್ ಪಾಷಾ, ಪತ್ರಕರ್ತರಾದ ಎಚ್ ಎಲ್ ಆನಂದ್, ಸುರೇಶ್ ನಾಯ್ಡು, ನಾರಾಯಣಾಚಾರಿ ಇತರರು ಉಪಸ್ಥಿತರಿದ್ದರು.