• Fri. Oct 18th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕು ಕೃಷಿಕ ಸಮಾಜದ ನಿರ್ಧೇಶಕರಾಗಿ ಈ ಮೊದಲು  ಆಯ್ಕೆಯಾಗಿದ್ದ ಕೆ.ಚಂದ್ರಾರೆಡ್ಡಿರವರನ್ನು ಕೋಲಾರ ಜಿಲ್ಲಾ ಕೃಷಿಕ ಸಮಾಜದ ನಿರ್ಧೇಶಕ ಸ್ಥಾನಕ್ಕಾಗಿ ಬಂಗಾರಪೇಟೆ ಕ್ಷೇತ್ರದಿಂದ ಆಯ್ಕೆ ಮಾಡಿಕೊಂಡಿರುವುಕ್ಕಾಗಿ ಕೆ.ಸಿ.ಆರ್ ಕಛೇರಿಯಲ್ಲಿ ಮುಖಂಡರು ಮತ್ತು ಸ್ನೇಹಿತರವತಿಯಿಂದ ಸನ್ಮಾನಿಸಲಾಯಿತು.

ಕೃಷಿಕ ಸಮಾಜದ ಜಿಲ್ಲಾ ಉಪಾದ್ಯಕ್ಷ ಹಾಗೂ ಬಂಗಾರಪೇಟೆ ತಾಲ್ಲೂಕು ಅದ್ಯಕ್ಷರಾದ ದಿನ್ನೆಕೊತ್ತೂರು ರಾಜಾರೆಡ್ಡಿ ಮಾತನಾಡಿ, ಕೆ.ಚಂದ್ರಾರೆಡ್ಡಿರವರು ಕೃಷಿಕ ಸಮಾಜದ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿ  ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯಾ ಮಟ್ಟದ ನಿರ್ಧೇಶಕರಾಗಿ ಸೇವೆ ಮಾಡುವ ಅವಕಾಶವನ್ನು ಭಗವಂತ ಕಲ್ಪಿಸಲಿ ಎಂದು ಹಾರೈಸಿದರು.

ಸಮಾಜ ಸೇವೆಯ ಜೊತೆಜೊತೆಗೆ ವ್ಯವಸಾಯ ರಂಗದಲ್ಲಿ ತೊಡಗಿಸಿಕೊಂಡುರುವ ಕೆ.ಚಂದ್ರಾರೆಡ್ಡಿ ಜಿಲ್ಲೆಯಲ್ಲಿ ಪ್ರಗತಿಪರ ರೈತರಾಗಿದ್ದಾರೆ. ರೈತನ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ನೋಡಿರುವ ಇವರು ಕೃಷಿಕ ಸಮಾಜದಲ್ಲಿ ಸ್ಥಾನ ಪಡೆಯುತ್ತಿರುವುದರಿಂದ ತಾಲ್ಲೂಕಿನ ಮತ್ತು ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂದರು.

ಜೊತೆಗೆ ಇವರು ಕರ್ನಾಟಕ ರಾಜ್ಯ ಬೀಜ ನಿಗಮದ ಶೇರುದಾರರಾಗಿದ್ದು, ಬೀಜೋತ್ಪಾದನೆ ಕಾರ್ಯಕ್ರಮದಡಿ ತೊಗರಿ ಬೀಜೋತ್ಪಾದನೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿಸ್ತೀರ್ಣದಲ್ಲಿ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಬೀಜೋತ್ಪಾದನೆ ಕ್ಷೇತ್ರದಲ್ಲಿಯೂ ಸಹ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದರಲ್ಲಿ ಸಂದೇಹನಿಲ್ಲ ಎಂದರು.

ಕೆ.ಚಂದ್ರಾರೆಡ್ಡಿಯವರು ಜಿಲ್ಲೆಯ ರೈತರ ದ್ವನಿಯಾಗಬೇಕು ಎಂದು ಸಲಹೆ ನೀಡಿದರಲ್ಲದೆ ರಾಜ್ಯ ಮಟ್ಟದಲ್ಲಿ ರೈತರ ಸೇವೆ ಮಾಡುವ ಮೂಲಕ ಹೆಚ್ಚು ಉನ್ನತ ಸ್ಥಾನಗಳನ್ನು ಪಡೆದು ವ್ಯವಸಾಯರಂಗದಲ್ಲಿರುವ ರೈತರಿಗೆ ಸದಾ ಬೆಂಬವಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಾದಮಂಗಲ ಶ್ರೀನಿವಾಸಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾದ್ಯಕ್ಷ ಪಿ.ಅಮರೇಶ್, ಬಿಜೆಪಿ ಜಿಲ್ಲಾ ಉಪಾದ್ಯಕ್ಷರಾದ ಬಿ.ಹೊಸರಾಯಪ್ಪ, ಜಿಲ್ಲಾ ಎಸ್.ಸಿ ಮೋರ್ಚಾ ಅದ್ಯಕ್ಷರು ಮತ್ತು ಪುರಸಭೆ ಸದಸ್ಯರಾದ ಕಪಾಲಿ ಶಂಕರ್, ಪುರಸಭೆ ಸದಸ್ಯ ವಿ.ವಸಂತರೆಡ್ಡಿ, ಜಿಲ್ಲಾ ಯುವ ಮೋರ್ಚ ಮುಖಂಡ ಬಿಂದು ಮಾಧವ, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಾಪುರ ಕೃಷ್ಣಮೂರ್ತಿ, ಮಂಜುನಾಥ್, ನಾರಾಯಣಸ್ವಾಮಿ, ನಗರ ಬಿಜೆಪಿ ಅದ್ಯಕ್ಷ ಬಿ.ಪಿ.ಮಹೇಶ್, ಕರವೇ ಚಲಪತಿ, ಮುಖಂಡರಾದ ಅಮರೇಶ್, ಸುಕುಮಾರನ್, ವಿನೋದ್ ಕುಮಾರ್ ಸಿ, ಸದಾಶಿವ, ನಾಗೇಂದ್ರ, ನವೀನ್(ಗುಂಡ), ಮಧು ಮೊದಲಾದವರಿದ್ದರು.

Related Post

ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್
ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ

Leave a Reply

Your email address will not be published. Required fields are marked *

You missed

error: Content is protected !!