• Sat. Jul 13th, 2024

ರಾಮಸಾಗರದಲ್ಲಿ ಬಿಜೆಪಿಯಿಂದ ಭೂತ್ ವಿಜಯ ಕಾರ್ಯಕ್ರಮ.

PLACE YOUR AD HERE AT LOWEST PRICE

 

ಬೂತ ವಿಜಯ ಅಭಿಯಾನದ ಅಂಗವಾಗಿ ಕೆ  ಜಿ ಎಫ್  ವಿಧಾನಸಭಾ ಕ್ಷೇತ್ರದ ಗ್ರಾಮಾಂತರ  ರಾಮಸಾಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಾಗರ, ಕೂಳೂರು,ನೆರ್ನಹಲ್ಲಿ,ಬೂಡದಿಮಿಟ್ಟ, ಸರ್ವರೆಡ್ಡಿಹಳ್ಳಿ,  ಕದರೀಪುರ, ಮಹಾದೇವಪುರ, ವಡ್ಡರಹಳ್ಳಿ, ಗ್ರಾಮಗಳಲ್ಲಿ ಬೂತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ  ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್ ನಾಯ್ಡು ಮಾತನಾಡಿ, ಬಿಜೆಪಿ ಪಕ್ಷದ ನೇತೃತ್ವದಲ್ಲಿ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿ ನೀಡುತ್ತಿದ್ದು ದೇಶದ ಮುನ್ನಡೆಗೆ ನಾಂದಿ ಹಾಡುತ್ತಿದ್ದಾರೆ.

ದೇಶದ ಭದ್ರತೆ ಮತ್ತು ಅಖಂಡತೆಗಾಗಿ ಹಾಗೂ ದೇಶದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಗಾಗಿ  ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದು ಇವರ ಆಡಳಿತವನ್ನು ದೇಶದ ಜನರೇ ಅಲ್ಲದೆ ವಿದೇಶಗಳ ಜನ ಸಾಮಾನ್ಯರು ಮತ್ತು ಸರ್ಕಾರಗಳು ಮೆಚ್ಚಿಕೊಳ್ಳುತ್ತಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಭೂತ್ ಮಟ್ಟದ ಸಮಿತಿಯ ಅದ್ಯಕ್ಷರು ಸದಸ್ಯರು ಹಾಗೂ ಪಕ್ಷದ ವಿವಿಧ ಹುದ್ದೆಗಳಲ್ಲಿರುವವರು ಮತದಾರರಿಗೆ ಸದಾ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ನೀಡಿ ಅವರನ್ನು ಬಿಜೆಪಿಗೆ ಮತ ನೀಡುವಂತೆ ಮತ್ತು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆರ್.ಹೇಮಾರೆಡ್ಡಿ,  ರಾಜ್ಯದಿಂದ ಕೆ ಜಿ ಎಫ್ ಕ್ಷೇತ್ರಕ್ಕೆ ವಿಸ್ತಾರಕರಾಗಿ ಬಂದಿರುವ ಲೋಹಿತ್ ನಾಯ್ಡು, ಜಿಲ್ಲಾ ಯುವ ಸಮಾಜ ಸೇವಕರು ವಿ. ಮೋಹನ್ ಕೃಷ್ಣ ಮೊದಲಲಾದವರು ಮಾತನಾಡಿದರು.

 

ಉಪಾಧ್ಯಕ್ಷ ಸುಧಾಕರ್, ರಾಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಮುರಳಿ, ಬೂಚೇಪಲ್ಲಿ ಕೃಷ್ಣಮೂರ್ತಿ ಮತ್ತು ಎಲ್ಲಾ ಭೂತ್ ಗಳ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಹಾಜರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!