• Sat. Jul 13th, 2024

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೩ಕ್ಕೆ ಚಾಲನೆ

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಚಾಲನೆ ನೀಡಿದರು.

ಶುಕ್ರವಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೩ ಸಚಿವ ಮುನಿರತ್ನ ಉದ್ಘಾಟಿಸಿದರು.

ಮೇಳದಲ್ಲಿ ಹೂ ಮತ್ತು ತರಕಾರಿಗಳಿಂದ ಅಲಂಕರಿಸಲಾದ ಕಲಾಕೃತಿಗಳು, ದೇವರಾಧನೆ ಕುರಿತ ಮರಳಿನ ಕಲಾಕೃತಿ, ಹಳ್ಳಿ ಸೊಗಡಿನ ಮಾದರಿ ಮನೆಗಳು, ವಿದೇಶಿ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ, ಪುಷ್ಪ ರಂಗೋಲಿ, ಪುಷ್ಪಾಲಂಕೃತ ಗಣೇಶ, ಜಿರಾಫೆ ಹಾಗೂ ಸಂಗೀತ ವಾದ್ಯಗಳು, ಸಿರಿಧಾನ್ಯಗಳ ಮಳಿಗೆಗಳು, ಔಷಧಿಗಳ ಸಸ್ಯಗಳು, ಸುಗಂಧ ದ್ರವ್ಯ ಸಸಿಗಳು ಇನ್ನೂ ಮುಂತಾದ ಆಕರ್ಷಣೆಗಳನ್ನು ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಪ್ರಗತಿ ಪರ ರೈತರನ್ನು ಸನ್ಮಾನಿಸಲಾಯಿತು. ಮಾನ್ಯ ಉಸ್ತುವಾರಿ ಸಚಿವರು ಹಾಗೂ ಕೋಲಾರ ಲೋಕಸಭಾ ಸಂಸದರು ಮೇಳವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಇದನ್ನೂ ಓದಿ : ನುಡಿದಂತೆ ನಡೆದುಕೊಂಡಿದ್ದೇನೆ : ಎಸ್.ಪಿ.ಡಿ.ದೇವರಾಜ್

Leave a Reply

Your email address will not be published. Required fields are marked *

You missed

error: Content is protected !!