• Fri. May 3rd, 2024

ನುಡಿದಂತೆ ನಡೆದುಕೊಂಡಿದ್ದೇನೆ : ಎಸ್.ಪಿ.ಡಿ.ದೇವರಾಜ್

ByNAMMA SUDDI

Jan 13, 2023

PLACE YOUR AD HERE AT LOWEST PRICE

ನಾನು ಜಿಲ್ಲೆಗೆ ಬಂದು ಕರ್ತವ್ಯಕ್ಕೆ ಹಾಜರಾದ ದಿನ ತಿಳಿಸಿದಂತೆ ಇಲ್ಲಿಂದ ವರ್ಗಾವಣೆ ಆದ ದಿನದವರೆಗೆ ನುಡಿದಂತೆ ನಡೆದುಕೊಂಡಿದ್ದೇನೆಂದು ನಿರ್ಗಮಿತ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದರು.
ಕೋಲಾರ ಜಿಲ್ಲೆಯಿಂದ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಎಸ್.ಪಿ‌.ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಕುಶಲೋಪಕಾರಿಯಾಗಿ ಮಾತನಾಡುತ್ತಾ, ಎಲ್ಲರ ಸಹಕಾರದೊಂದಿಗೆ ನನಗೆ ಸಿಕ್ಕ ಒಂದು ವರ್ಷದಲ್ಲಿ ನನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ ಸಿಕ್ಕಿದೆಯೆಂದರು.
ನನ್ನ ಜನ್ಮಭೂಮಿ ಮತ್ತು ಕರ್ಮ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ಅದೃಷ್ಟ ನನಗೆ ಸಿಕ್ಕಿದೆ ನನ್ನ ಕೆಲಸಕ್ಕೆ,ಇಲಾಖೆಗೆ ಚುತಿಬಾರದಂತೆ ನಡೆದು ಕೊಂಡಿದ್ದೇನೆ.ಆದರೂ ನಾನು ಕೋಲಾರಕ್ಕೆ ಆಗಮಿಸಿದಾಗ ಇಲ್ಲಿನ ಅವ್ಯವಸ್ಥೆಗಳನ್ನು ಕಂಡು ಬೇಸರ ಆಯಿತಾದರೂ ಏನಾದರೂ ಬದಲಾವಣೆ ತರಬೇಕೆಂದು ಇಲಾಖೆಯ ಕರ್ತವ್ಯದೊಂದಿಗೆ ನನ್ನ ಕೈಲಾದ ಕೆಲವು ಕೆಲಸಗಳನ್ನು ಮಾಡುವ  ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಅವರು ತಿಳಿಸಿದರು.
ಪ್ರಮುಖವಾಗಿ ಜನರ ಬಹು ದಿನಗಳ ಬೇಡಿಕೆಯಂತೆ ಸೂಕ್ಷ್ಮ ಪ್ರದೇಶವಾದ ಕ್ಲಾಕ್ ಟವರ್ ನಲ್ಲಿ ರಾಷ್ಟ್ರ ಧ್ವಜವನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಮತ್ತು ಇಲಾಖೆಯ ಸಹಕಾರದಿಂದ ಜಿಲ್ಲಾಧಿಕಾರಿಗಳೊಂದಿಗೆ   ಹಾರಿಸಿದ್ದ ಕ್ಷಣ ಇಂದಿಗೂ ಹೆಮ್ಮೆಯ ವಿಷಯವಾಗಿದ್ದು,ಇದರ ಬಗ್ಗೆ ವಿಧಾನ ಸೌಧದಲ್ಲಿ ಗೃಹ ಸಚಿವರು, ಹಾಗೂ ಶಾಸಕ ರಮೇಶ್ ಕುಮಾರ್ ಶ್ಲಾಘಿಸಿರುವುದು ನನ್ನು ಕೆಲಸದ ಬಗ್ಗೆ ಗೌರವ ಹೆಚ್ಚಾಗಿದೆಯೆಂದರು. ನಗರದ ಜನತೆಯಲ್ಲಿ ಸಾಂಸ್ಕೃತಿಕ ಅಭಿರುಚಿ ಬೆಳೆಸಲು ಯುಗಾದಿ ಹಬ್ಬದ ದಿನ ಯುಗಾದಿ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾ ಆಡಳಿತ ಮತ್ತು ಹಲವು ಸ್ನೇಹಿತರೊಂದಿಗೆ ಆಚರಣೆಯು ದೇವಲೋಕವನ್ನು ಸೃಷ್ಟಿಸಿದ ಅನುಭವ ಆಯಿತೆಂದರು.
ಇಲಾಖೆಯ ಹಲವು ಠಾಣೆಗಳಲ್ಲಿ ಬೇರೂರಿದ್ದ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ಠಾಣೆಗಳ ಸುಧಾರಣೆ ಮಾಡಲಾಯಿತು.ಹಲವು ಕಂಪನಿಗಳ ಸಿ.ಎಸ್.ಆರ್.ನಿಧಿಯಿಂದ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುಕೂಲ ಆಯಿತು.ಇಲಾಖೆಯ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಅಗತ್ಯವಾದ ಸುಸಜ್ಜಿತ ಕಟ್ಟಡಗಳ ಅವಶ್ಯಕತೆ ಇರುವುದನ್ನು ಮನಗಂಡು ಸಂಸದರ ನಿಧಿ ಹಾಗೂ ಇಲಾಖೆಯ ಅನುದಾನ ಬಳಸಿಕೊಂಡು ಠಾಣೆಗಳ ನವೀಕರಣ, ನೂತನ ಕಟ್ಟಡಗಳ ನಿರ್ಮಾಣದೊಂದಿಗೆ ಪೋಲಿಸ್ ಸಮುದಾಯ ಭವನವನ್ನು ನಿರ್ಮಾಣ ಮಾಡಿದ ತೃಪ್ತಿ ನನಗೆ ಇದೆಯೆಂದು ವಿವರಿಸಿದರು.
ಇವುಗಳ ಜೊತೆಗೆ ನಗರದ ಸಂಚಾರಿ ವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳನ್ನು ತಡೆಯಲು ವಿಸ್ಟ್ರಾನ್ ಕಂಪನಿಯ ಹಾಗೂ ಕಿಯೋನಿಕ್ಸ್  ಸಹಕಾರದೊಂದಿಗೆ ನಗರದಲ್ಲಿ ಸಿ.ಸಿ.ಟಿವಿ ಗಳ ಅಳವಡಿಕೆಯೊಂದಿಗೆ ಸಂಚಾರಿ ಠಾಣೆಯಲ್ಲಿ ಹಾಗೂ ಅಧೀಕ್ಷಕರ ಕಚೇರಿಯಲ್ಲಿ ಲೈವ್ ಸ್ರೀಮಿಂಗ್ವ್ ವ್ಯವಸ್ಥೆ ಅಳವಡಿಸಲಾಗಿದೆ. ಪತ್ರಕರ್ತರ ಸಲಹೆ ಮೇರೆಗೆ ರೈತರಿಗೆ ಅನುಕೂಲ ಆಗಲೆಂದು ಆಧುನಿಕ ಕೃಷಿ ಮತ್ತು ಲಾಭದಾಯಕ ಬೆಳೆಗಳ ಬಗ್ಗೆ ಸಂವಾದ ಮತ್ತು ಮಾಹಿತಿ ಹಂಚಿಕೊಂಡಿದ್ದರಿಂದ ಬಹಳಷ್ಟು ರೈತರಿಗೆ ಅನುಕೂಲ ಪಡೆಯುವಂತಾಯಿತೆಂದರು.
ನಮ್ಮ ಜಿಲ್ಲೆಯ ಹೊಸ ಪ್ರತಿಭೆಗಳ ಅನ್ವೇಷಣೆಗೆ ಸಹಕಾರ ಆಗಲೆಂದು ನಮ್ಮ ಊರಿನ ಬಳಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ನೆಡಯುತ್ತಿದ್ದು ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಹಾಗೂ ನಮ್ಮ ತಂದೆ ತಾಯಿಯವರ ಹೆಸರಲ್ಲಿ ಟ್ರಸ್ಟ್ ಮಾಡಿ ಐ.ಎ.ಎಸ್,ಐ.ಪಿ.ಎಸ್ ತರಬೇತಿ ಪಡೆಯಲು ಕೋಚಿಂಗ್ ಸೆಂಟರ್ ತೆರೆಯಲಾಗಿದೆಯೆಂದು ವಿವರಿಸಿದರು.
ಪತ್ರಕರ್ತರ ಜಿಲ್ಲೆಯಲ್ಲಿ ಇನ್ನೂ ಏನಾಗ ಬೇಕಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಕೇಂದ್ರದಲ್ಲಿ ಪೋಲಿಸ್ ವಿಶ್ರಾಂತಿ ಗೃಹದ ಅವಶ್ಯಕತೆ ಇದ್ದು ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಪತ್ರಕರ್ತರ ಜನಪ್ರತಿನಿಧಿಗಳ,ದಲಿತ ಸಂಘಟನೆಗಳ ಹಾಗೂ ರೈತ ಮತ್ತು ಕನ್ನಡ ಪರ ಸಂಘಟನೆಗಳ ಸಹಕಾರ ನೀಡಿದ್ದು ,ಸಹಕಾರ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!