• Sun. May 5th, 2024

ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಮಡಿವಾಳ ಮಹಿಳಾ ಕಬ್ಬಡಿ ತಂಡ

PLACE YOUR AD HERE AT LOWEST PRICE

 

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಮಾಲೂರು ತಾಲ್ಲೂಕಿನ ಮಡಿವಾಳ ಪಂಚಾಯತಿಯ ಮಹಿಳೆಯರು ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಮಡಿವಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕಬ್ಬಡಿಯಲ್ಲಿ ತಾಲೂಕು ಮಟ್ಟದಲ್ಲಿ ಗೆದ್ದು ಜಿಲ್ಲಾಮಟ್ಟಕ್ಕೆ ಪ್ರವೇಶಿಸಿ, ಅಲ್ಲಿಯೂ ಗ್ರಾಮೀಣ ಕೂಟದಲ್ಲಿ ಉತ್ತಮ ಪ್ರತಿಭೆಯನ್ನು ತೋರಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಮಡಿವಾಳ ಗ್ರಾಮ ಪಂಚಾಯತಿಯ ಐಶ್ವರ್ಯ, ಸಾರಿಕಾ, ಸೋನಿಯಾ, ನಿರೂಪ, ಐಶ್ವರ್ಯ,ಪಲ್ಲವಿ, ಪ್ರಿಯಾಂಕಾ, ಕಾವ್ಯ, ಸೌಂದರ್ಯ, ಸಿಂಧು, ಸುಷ್ಮಾ, ಮೋನಿಷಾ, ಇವರಿಗೆ ಗ್ರಾಮಸ್ಥರು ಅಭಿನಂದನೆಗಳು ಸಲ್ಲಿಸಿದ್ದಾರೆ.

ಈ ಪಂದ್ಯಾವಳಿಗಳಲ್ಲಿ ವಿಜೇತರದವರಿಗೆ ಸುನಿಲ್ ಕುಮಾರ್ ಹೊಸಮನಿ ಕಾರ್ಯದರ್ಶಿಗಳು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಶ್ರೀಮತಿ ಕೆ.ಶಶಿಕಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೋಲಾರ ಜಿಲ್ಲೆ. ಇವರು ಪ್ರಶಸ್ತಿ ಪ್ರಧಾನ ಮಾಡಿದರು.

ಮಾಲೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ 1.ಕಬಡ್ಡಿ(ಮಹಿಳೆ)ಮಡಿವಾಳ ಗ್ರಾ.ಪಂ ಪ್ರಥಮ 2.ಕಬ್ಬಡಿ(ಪುರುಷ) ಡಿ.ಎನ್. ದೊಡ್ಡಿ ಪ್ರಥಮ 3.ವಾಲಿಬಾಲ್ ಶಿವಾರಪಟ್ಟನ ಗ್ರಾ.ಪಂ ಪ್ರಥಮ 4. ಎತ್ತಿನಗಾಡಿ ಓಟ ಲಕ್ಕೂರು ಗ್ರಾ.ಪಂ ಪ್ರಥಮ 5. ಕುಸ್ತಿ ಶಿವಾರಪಟ್ಟಣ ಗ್ರಾ.ಪಂ ಪ್ರಥಮ ಸ್ಥಾನ ಪಡೆದುಕೊಂಡಿವೆ.

ಪ್ರಶಸ್ತಿ ಪಡೆದವರಲ್ಲಿ ಮುನಿರಾಜು ಎನ್ ಕಾರ್ಯನಿರ್ವಾಹಕಾರಿ ತಾಲೂಕ್ ಪಂಚಾಯಿತಿ ಮಾಲೂರು, ದೀಪಾ.ಎಂ.ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಡಿವಾಳ, ಶ್ರೀ ಪ್ರಸನ್ನ ಕುಮಾರ್ ಎಂ.ಎನ್.ತಾಲ್ಲೂಕು ಪಂಚಾಯಿತಿ, ನೊಸಗೆರೆ ಗ್ರಾಮ ಪಂಚಾಯಿತಿ. ಇವರ ಜೊತೆಗೆ ಗ್ರಾಮಸ್ಥರಾದ ಅಶ್ವಥ್ ಮಡಿವಾಳ, ಕೃಷ್ಣ ಶ್ರೀನಿವಾಸ, ಕೃಷ್ಣಣ್ಣ ಹಾಗೂ ಇತರರು ಇದ್ದರು.

ಮಾಲೂರು ತಾಲೂಕು ಮಟ್ಟದಿಂದ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಸ್ಪರ್ಧಿಸಿದ ಆರು ತಂಡಗಳು ಪ್ರಥಮ ಸ್ಥಾನ ಪಡೆದು ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿವೆ.

 

ಇದನ್ನೂ ಓದಿ : ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್‌ಗೆ ಸರ್ಕಾರಿ ನೌಕರರ ಗೌರವ ಬೀಳ್ಕೊಡುಗೆ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!