• Wed. Nov 29th, 2023

ಓಂಶಕ್ತಿ ಚಲಪತಿಯಿಂದ ಮೇಲ್‌ ಮರವತ್ತೂರಿಗೆ ಬಸ್‌ ಸೌಲಭ್ಯ

PLACE YOUR AD HERE AT LOWEST PRICE

ರಾಜ್ಯದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಸರಕಾರ ನಿದ್ದೆ ಮಾಡಿ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಇವತ್ತು ಜನರಿಗೆ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದಾರೆ ಕಾಂಗ್ರೆಸ್ ಪಕ್ಷವನ್ನು ಜನ ನಂಬುವುದಿಲ್ಲ ಎಂದು ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

‌ಕೋಲಾರ ನಗರದ ಖಾದ್ರಿಪುರದಲ್ಲಿ ಮಂಗಳವಾರ ಓಂಶಕ್ತಿ ಫೌಂಡೇಶನ್ ವತಿಯಿಂದ ಮೇಲ್ ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಕೇವಲ ಅಽಕಾರದ ಆಸೆಗಾಗಿ ನಾಡಿನ ಜನತೆಗೆ ಇನ್ನೊರು ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಮನೆ ನಿರ್ವಹಣೆಗೆ ಎರಡು ಸಾವಿರ ತಿಂಗಳಿಗೆ ಅಂತ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದು ರಾಜ್ಯದ ಜನ ಬುದ್ದಿವಂತರಿಂದ್ದು ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲ್ಲ ಜನ ಈಗಾಗಲೇ ಮನಸ್ಸು ಮಾಡಿದ್ದಾರೆ ಬಿಜೆಪಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಽಕಾರಕ್ಕೆ ತರಲಿದ್ದಾರೆ ಎಂದರು.

ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬಸ್ ಯಾತ್ರೆ ಕೈಗೊಂಡಿದ್ದು ಜನಕ್ಕೆ ದೇಶದಲ್ಲಿ ನರೇಂದ್ರ ಮೋದಿಯವರು ಹಾಗೂ ರಾಜ್ಯದಲ್ಲಿ ಬಸವರಾಜ್ ಬೊಮ್ಮಯಿ ನೇತೃತ್ವದಲ್ಲಿ ಜನಪರ ಆಡಳಿತದ ಮುಂದೆ ಕಾಂಗ್ರೆಸ್ ಪಕ್ಷದ ಯಾವ ಯಾತ್ರೆಗಳು ಜನರಿಗೆ ಒಳ್ಳೆಯ ಯೋಜನೆಗಳನ್ನು ತರಲ್ಲ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಸೋಲಿನ ಭಯದಿಂದ ಸುಳ್ಳು ಆಶ್ವಾಸನೆಗಳನ್ನು ನೀಡಲು ಹೊರಟಿದ್ದಾರೆ ಎಂದರು.

ಖಾದ್ರಿಪುರ ಗ್ರಾಮ ಪಂಚಾಯತಿ ಸದಸ್ಯ ನಿರಂಜನ್ ಮಾತನಾಡಿ. ನಾಡಿನ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಓಂಶಕ್ತಿ ಫೌಂಡೇಶನ್ ವತಿಯಿಂದ ದೇವಸ್ಥಾನಕ್ಕೆ ಕಳಸಿಕೊಡುತ್ತಾ ಇದ್ದು ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಳೆಯ ದಿನಗಳು ಬರಲಿ ಎಂದು ಆಶಿಸಿದರು.

ಬಿಜೆಪಿ ಮುಖಂಡರಾದ ಸಾ.ಮಾ ಬಾಬು, ಭರತ್, ಶಂಕರ್, ನವೀನ್, ಮಂಜುನಾಥ್ ಸಿಂಗ್, ಕಾವ್ಯ ಮುಂತಾದವರು ಇದ್ದರು.

 

 

Leave a Reply

Your email address will not be published. Required fields are marked *

You missed

error: Content is protected !!