PLACE YOUR AD HERE AT LOWEST PRICE
ಕಳೆದ ೭೦ ವರ್ಷಗಳಲ್ಲಿ ಕೆಜಿಎಫ್ ಗಣಿಯಲ್ಲಿ ಹೆಕ್ಕಿ ತೆಗೆದ ಚಿನ್ನವನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ ಅದರಲ್ಲಿ ಕಾಂಗ್ರೆಸ್ ಆಡಳಿತದ ಪ್ರಧಾನಿಗಳಿಗೂ ಪಾಲು ಹೋಗಿದೆ!-ಸಂಸದ ಮುನಿಸ್ವಾಮಿ ಗಂಭೀರ ಆರೋಪ!
೭೦ ವರ್ಷ ಆಡಳಿತ ನಡೆಸಿದ ದೇಶದ ಪ್ರಧಾನಿ, ಗಣಿ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೋಲಾರ ಸಂಸದರ ಮನೆಗಳಿಗೆ ಕೆಜಿಎಫ್ ಚಿನ್ನ ಅಕ್ರಮವಾಗಿ ರವಾನೆಯಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಕೆಜಿಎಫ್ ಚಿನ್ನದ ಗಣಿ ಪುನಶ್ಚೇತನದ ಬಗ್ಗೆ ಮಾತನಾಡಿದ ವೇಳೆ, ಇಲ್ಲಿನ ಹಿರಿಯ ಕಾರ್ಮಿಕರು ಹೇಳುವ ಪ್ರಕಾರ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರದ ಹಿಂದಿನ ಎಲ್ಲಾ ಪ್ರಧಾನಮಂತ್ರಿಗಳೂ ಒಳಗೊಂಡಂತೆ ಗಣಿ ಸಚಿವ,ಮುಖ್ಯಮಂತ್ರಿ, ಕೋಲಾರ ಸಂಸದರ ಮನಗೆಗಳಿಗೆ ಅಕ್ರಮವಾಗಿ ಚಿನ್ನ ಸಾಗಿಸಲಾಗಿದೆ ಸ್ಪೋಟಕ ಮಾಹಿತಿ ಹೊರಬಂದಿದ್ದು ಕಳೆದ ೭೦ ವರ್ಷಗಳಲ್ಲಿ ಚಿನ್ನದ ಗಣಿಯನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ ಎಂದು ಸಂಸದ ಮುನಿಸ್ವಾಮಿ ದೂರಿದ್ದಾರೆ.
ಕೇಂದ್ರ ಸರ್ಕಾರ ಚಿನ್ನದ ಗಣಿ ಪುನಶ್ಚೇತನಕ್ಕೆ ಈಗಾಗಲೇ ಗ್ಲೋಬಲ್ ಟೆಂಡರ್ ಕರೆದಿದೆ. ಚಿನ್ನದ ಗಣಿಗಳಲ್ಲಿ ಈಗಲೂ ಚಿನ್ನ ಇದೆ ಆದರೆ, ಅಂದು ಸುರಂಗದಲ್ಲಿ ಚಿನ್ನ ಇದ್ದರೂ ಸಹ ಲೂಟಿ ಮಾಡುವ ಉದ್ದೇಶದಿಂದ ಅಧಿಕಾರಿಗಳು ಚಿನ್ನ ಇಲ್ಲವೆಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದು ಹಾಗೂ ೭೦ ವರ್ಷಗಳು ಗಣಿಯಿಂದ ಹೊರತೆಗೆದ ಅಪಾರ ಪ್ರಮಾಣದ ಚಿನ್ನದಲ್ಲಿ ಬಹುಪಾಲು ಅಕ್ರಮವಾಗಿ ಸಾಗಿಸಿದ್ದೇ ಗಣಿ ಮುಚ್ಚಲು ಕಾರಣವಾಗಿದೆ ಎಂದು ದೂರಿದರು.
ಈಗ ಚಿನ್ನದ ಗಣಿ ಬೀಗಹಾಕಿ ೨೨ ವರ್ಷಗಳೇ ಕಳೆದೆದೆ, ಗಣಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಗಮನಕ್ಕೆ ತರಲಾಗಿದ್ದು, ಗಣಿ ಒಳಗೆ ಸುರಂಗಗಳಲ್ಲಿ ನೀರು ತುಂಬಿಕೊ0ಡಿದ್ದು ಮತ್ತೆ ಸುರಂಗ ಮಾರ್ಗದಲ್ಲಿ ಚಿನ್ನದ ತೆಗೆಯುವುದು ಕಷ್ಟಸಾಧ್ಯವಾಗಿದ್ದು, ಭೂಮೇಲ್ಮೈಯಿಂದಲೇ ಚಿನ್ನದ ಅದಿರು ತೆಗೆಯಲು ಓಪನ್ ಕಾಸ್ಟ್ ಮೈನಿಂಗ್ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಗಣಿ ಕಾರ್ಮಿಕರು ಚಿನ್ನ ಶೋಧಿಸುವಿಕೆ ಹಾಗೂ ಚಿನ್ನದ ನಿಕ್ಷೇಪಗಳ ಜಾಡು ಹಿಡಿಯುವದರಲ್ಲಿ ನಿಸ್ಸೀಮರಾಗಿದ್ದು, ಚಿನ್ನದ ಗಣಿ ಪ್ರದೇಶದಲ್ಲಿ ಎಲ್ಲೇ ನಿಂತರೂ ಅದೇ ಜಾಗದಲ್ಲಿ ಮಣ್ಣನ್ನು ತೆಗೆದು ಚಿನ್ನವನ್ನು ಶೋಧಿಸಿಕೊಡಬಲ್ಲವರಾಗಿದ್ದು, ಇಲ್ಲಿನ ಸೈನಡ್ ಗುಡ್ಡಗಳಲ್ಲೇ ಸಾವಿರಾರು ಟನ್‌ಗಳಷ್ಟು ಚಿನ್ನವನ್ನು ತೆಗೆದುಕೊಡವಲ್ಲವರಾಗಿದ್ದಾರೆ ಎಂದು ಹೇಳಿದರು. ಈಗಾಗಲೇ ಗಣಿ ಇಲಾಖೆಯ ಕಾರ್ಯದರ್ಶಿ ಕಳೆದ ತಿಂಗಳು ಕೆಜಿಎಫ್ ಚಿನ್ನದ ಗಣಿ ಪ್ರದೇಶಕ್ಕೆ ಬೇಟಿ ನೀಡಿದ್ದು, ಗಣಿ ಕಾರ್ಖಾನೆಯ ಪುನರಾಂಭಕ್ಕೆ ಹಸಿರು ನಿಶಾನೆ ತೋರುವ ಶುಭ ಸಂದೇಶ ಶೀಘ್ರವೇ ಬರಲಿದೆ ಎಂದು ತಿಳಿಸಿದರು.