ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೆಜಿಎಫ್ ಟೌನ್, ರಾಬರ್ಟ್ಸನ್ ಪೇಟೆಯ ವಾಸಿ ಉಮೇಶ್ ಬಿನ್ ಪಿ.ರಾಜಾ ಎಂಬುವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿರುವ ಅರೋಪದ ಮೇಲೆ ಬಂಗಾರಪೇಟೆ ಪೋಲಿಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ವೃತ್ತ ನಿರೀಕ್ಷಕರಾದ ಸುನೀಲ್ ಕುಮಾರ್ ರವರು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಸದರಿ ಪ್ರಕರಣದ ಸಂಖ್ಯೆ:ಎಸ್.ಸಿ.11/2021ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನಿ ರವರು ಆರೋಪ ರುಜುವಾತಾದ ಹಿನ್ನಲೆ ಪೋಕ್ಸೊ ಕಾಯಿದೆ ಅಡಿಯಲ್ಲಿ ಆರೋಪಿಗೆ 20 ವರ್ಷ ಸಜೆ ಮತ್ತೆ ರೂ.15,000/-ಗಳ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ 6 ತಿಂಗಳ ಸಾಧಾರಣ ಸಜೆ ಎದುರಿಸಲು ಸೂಚಿಸಲಾಗಿದೆ. ಹಾಗೂ ನೊಂದ ಬಾಲಕಿಗೆ ರೂ.4,00,000/- ಗಳನ್ನು ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಡಿ.ಲಲಿತ ಕುಮಾರಿ ವಾದ ಮಂಡಿಸಿದ್ದರು.