ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೆಜಿಎಫ್ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಏನೆಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸಲು ಶೀಘ್ರದಲ್ಲೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಅವರು ತಾಲ್ಲೂಕಿನ ಕಮ್ಮಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅವರು
ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಹಳ್ಳಿಯನ್ನು ಅಭಿವೃದ್ಧಿ ಪಡಿಸಲು ನರೇಗಾ, ಕಿಸಾನ್ ಸಮ್ಮಾನ್, ಶುದ್ಧ ಕುಡಿಯುವ ನೀರು, ಕಲ್ಯಾಣಿ, ಪಿಂಚಣಿ, ಹಲವು ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಉತ್ತಮ ರೀತಿಯಲ್ಲಿ ಹಳ್ಳಿಗಳು ಅಭಿವೃದ್ಧಿಯಾಗಿವೆ.

ರಾಜ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಅಭಿವೃದ್ಧಿಯಲ್ಲಿ ರಾಜಿ ಇಲ್ಲದೆ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದ್ದಾರೆಂದರು. ಕಮ್ಮಸಂದ್ರ ಗ್ರಾಮದಲ್ಲಿ ಕೋಟಿಲಿಂಗೇಶ್ವರ ದೇಗುಲವು ವಿಶ್ವದಲ್ಲೇ ಪ್ರಖ್ಯಾತಿ ಪಡೆದಿದೆ.
ಅದೇ ರೀತಿಯಲ್ಲಿ ಅಭಿವೃದ್ಧಿಗಾಗಿ ಸಹಕಾರ ನೀಡಬೇಕೆಂದು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಮನವಿ ಮಾಡಿದ್ದರು
ಅವರ ಮನವಿಯಂತೆ ಅಧಿಕಾರಿಗಳನ್ನು ಕರೆಸಿ ಸಂಪೂರ್ಣ ಸಹಕಾರ ಕೊಡಲು ತಿಳಿಸಿದ್ದೆ ಅದರಂತೆ ಸಂಪೂರ್ಣ ಕಟ್ಟಡ, ಕಲ್ಯಾಣಿ, ಉದ್ಯಾನ ವನ ಇತರೆ ಕಾಮಗಾರಿಗಳನ್ನು ನರೇಗಾ ದಲ್ಲೇ ಮಾಡಿ ಮಾದರಿ ಗ್ರಾಪಂಯಾಗಿ
ನಿರ್ಮಿಸಿದ್ದಾರೆಂದು ಅಭಿನಂದನೆ ಸಲ್ಲಿಸಿದರು.
ತಾವು ಸಹ ಐಮಾಸ್ಟ್ ವಿದ್ಯುತ್ ದ್ವೀಪ, ಬಸ್ ನಿಲ್ಧಾಣ ಸೇರಿ ಹಲವು ಕಾಮಗಾರಿಗಳಿಗೆ ಅನುದಾನವನ್ನು ತಮ್ಮ ನಿಧಿಯಲ್ಲಿ ನೀಡಲಾಗಿತ್ತು ಎಂದರು.
ಈ ನೂತನ ಕಟ್ಟಡವನ್ನು ನಿರ್ಮಿಸಲು ಪಕ್ಷಾತೀತವಾಗಿ ಸರ್ವ ಸದಸ್ಯರು ಸಹಕಾರ ನೀಡಿದ್ದು ಸಂತೋಷ. ಇದೇ
ರೀತಿ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಬೇಕು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಕೆಲಸಗಳು ಆಗಬೇಕೋ ಅವುಗಳಿಗೆ ಅನುದಾನ ನೀಡುತ್ತೇವೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತೇವೆ ಶಾಸಕರಾಗಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಕೋಟಿಲಿಂಗೇಶ್ವರ ದೇಗುಲವು ಪ್ರಖ್ಯಾತಿ ಪಡೆದಂತೆ ಈ ಗ್ರಾಮವು ಇಡೀ ಜಿಲ್ಲೆಗೆ, ರಾಜ್ಯಕ್ಕೆ ಮಾದರಿಯಾಗಿ ಮಾಡುತ್ತೇವೆಂದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ಥಳಿಯನ್ನು ಗ್ರಾಪಂ ಬಳಿ ನಿರ್ಮಾಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರಿಗೂ ಸಮಾನತೆ, ಮೀಸಲಾತಿ ಕೊಟ್ಟ ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ರೂಡಿಸಿಕೊಳ್ಳಲು ಕರೆ ನೀಡಿದರು.
ಸಂಸದ ಎಸ್.ಮುನಿಸ್ವಾಮಿ ರನ್ನು ಸ್ಥಳೀಯ ಅಂಗವಿಕಲರೊಬ್ಬರು ದ್ವೀ ಚಕ್ರ ವಾಹನವನ್ನು ಮಂಜೂರು ಕೊಡಿಸಬೇಕೆಂದು ಅರ್ಜಿ, ದಾಖಲೆ ನೀಡಿದರು. ತಕ್ಷಣ ಅವರ ಸಹಾಯಕರನ್ನು ಕರೆದು ತಕ್ಷಣ ಇತನ ದೂರವಾಣಿ ಸಂಖ್ಯೆ ಪಡೆದುಕೊಂಡು ನನ್ನ ಸ್ವಂತ ಹಣದಲ್ಲಿ ಬೈಕ್ ಕೊಡಿಸು ಎಂದು ಭರವಸೆ ಕೊಟ್ಟರು.

ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾತನಾಡಿ, ದೃಢ ಸಂಕಲ್ಪಮಾಡಿ ಸಾಮಾನ್ಯರಿಗೆ ಸೌಲಭ್ಯ ನೀಡುವ ಗ್ರಾಪಂ ಕಟ್ಟಡವನ್ನು ಮಾದರಿಯಾಗಿ ನಿರ್ಮಾಣ ಮಾಡಿರುವುದು ಸಂತಸ ತಂದಿದೆ.
ಗ್ರಾಪಂ ಕಟ್ಟಡ ಜತೆಗೆ ಕಲ್ಯಾಣಿ ನಿರ್ಮಾಣ ಮತ್ತು ಸುಂದರ ಉದ್ಯಾನವನ ವನ್ನು ನಿರ್ಮಿಸಿದ್ದು, ಜನರಿಗೆ ಪರಿಸರ, ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಸದ್ಬಳಕೆಗೆ ಕರೆ ನೀಡಿದರು.
ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಯಾವುದೇ ಪಕ್ಷ ಬೇಧವಿಲ್ಲದೆ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ನರೇಗಾ ಯೋಜನೆಯ ಮೂಲಕ ನಿರ್ಮಿಸಿರುವುದು ಖುಷಿ ನೀಡಿದೆ.
ಗ್ರಾಮ ಪಂಚಾಯಿತಿ ಅದ್ಯಕ್ಷರು ಖುದ್ದು ಬೇಟಿ ಮಾಡಿ ಆಹ್ವಾನ ನೀಡಿದರು. ಆದರೆ ಪಿಡಿಒ ನಮ್ಮನ್ನು ಕೇಳದೆ ದಿನಾಂಕ ನಿಗಧಿ ಮಾಡಿದ್ದಾರೆ ಆದರೂ ಬೇಸರವಿಲ್ಲ ಎಂದರು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಅಂದಾಜು 28 ಲಕ್ಷ ರೂ., ಅನುದಾನದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ, 18 ಲಕ್ಷ ರೂ., ವೆಚ್ಚದಲ್ಲಿ ನೂತನ ಗ್ರಾಪಂ ಕಟ್ಟಡ, 30 ಲಕ್ಷ ರೂ., ಕಲ್ಯಾಣಿ, 15 ಲಕ್ಷ ರೂ., ವೆಚ್ಚದಲ್ಲಿ ಉದ್ಯಾನವನ.
5 ಲಕ್ಷ ಸಿಸಿ ರಸ್ತೆ, ಸಂಸದರ ಅನುದಾನದಲ್ಲಿ 5 ಲಕ್ಷ ರೂ., ಐಮಾಸ್ಟ್ ವಿದ್ಯುತ್ ದ್ವೀಪ, 5 ಲಕ್ಷ ರೂ., ಮಹಿಳಾ ಸಂಜೀವಿನ ಸಮುದಾಯ ಕೇಂದ್ರ, 5 ಲಕ್ಷ ವೆಚ್ಚದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ, ಬಸ್ ನಿಲ್ಧಾಣದಲ್ಲಿ ಸಂಸದರ ಅನುದಾನದಲ್ಲಿ ತಂಗುದಾನ ನಿರ್ಮಾಣ, ಸೇರಿ ಒಟ್ಟು ಸುಮಾರು 1.25 ಕೋಟಿ ರೂ., ಅನುದಾನವನ್ನು ನರೇಗಾದಲ್ಲೇ
ಕಾಮಗಾರಿ ನಡೆಸಿರುವುದು ಹೆಮ್ಮೆಯ ವಿಚಾರವಾಗಿದೆ.
ಈ ಸಂದರ್ಭದಲ್ಲಿ ಮಾವು ಅಭಿವೃದ್ಧಿ ನಿಗಮಾಧ್ಯಕ್ಷ ವಾಸುದೇವ್, ಮಾಜಿ ಶಾಸಕ ಬಿ.ಪಿ ವೆಂಕಟಮುನಿಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ, ಜಿಪಂ ಮಾಜಿ ಸದಸ್ಯ ಜಯಪ್ರಕಾಶ್, ಬಿ.ವಿ ಮಹೇಶ್, ಶ್ರೀನಿವಾಸಗೌಡ,
ತಹಶೀಲ್ದಾರ್ ಸುಜಾತ, ಇಒ ಮಂಜುನಾಥ್, ಗ್ರಾಪಂ ಅದ್ಯಕ್ಷ ಬಿ.ಸುರೇಶ್, ಉಪಾದ್ಯಕ್ಷ ದಾಮೋದರರೆಡ್ಡಿ, ಕಾರ್ಯದರ್ಶಿ ಕೇಶವ ರೆಡ್ಡಿ, ನರೇಗಾ ಇಂಜಿನೀಯರ್ ವಿಷ್ಣು, ಗ್ರಾಪಂ ಅಧ್ಯಕ್ಷರುಗಳಾದ ರಘು, ಸುನೀಲ್, ಸುರೇಶ್ ಬಾಬು, ಮಾಜಿ ಅಧ್ಯಕ್ಷ ನಾಗರಾಜ್, ಹೇಮಾರೆಡ್ಡಿ, ಎಲ್ಲಾ ಸದಸ್ಯರು, ಮುಖಂಡರು, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.