• Sat. Mar 2nd, 2024

ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ, ನೂರು ಬಾರಿ ಅಮಿತ್ ಶಾ, ಮೋದಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸತ್ಯ – ಸಿದ್ದರಾಮಯ್ಯ

PLACE YOUR AD HERE AT LOWEST PRICE

ರಾಜ್ಯಕ್ಕೆ ನೂರು ಬಾರಿ ಅಮಿತ್ ಶಾ, ಮೋದಿ ಬಂದರೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸತ್ಯ,ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ, ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಬೇಕು ಎಂದರು.

 ಕೋಲಾರದಲ್ಲಿ ಪ್ರಜಾಧ್ವಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.  ೧೩ ನೇ ಜಿಲ್ಲೆಯ ಪ್ರವಾಸ ಪ್ರತಿ ಜಿಲ್ಲೆಯಲ್ಲಿಯೂ ಪ್ರಜಾಧ್ವನಿಗೆ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಸ್ಪಂದನೆ ಜನಸಮೂಹದಿಂದ ಹರಿದು ಬರುತ್ತಿದೆ, ರಾಜ್ಯದ ಜನ ಬಿಜೆಪಿ ಸರಕಾರದ ಆಡಳಿತದಿಂದ ಬೇಸತ್ತಿದ್ದಾರೆ, ನೊಂದಿದ್ದಾರೆ, ಅನೇಕ ಕಷ್ಟಗಳ ಅನುಭವಿಸುತ್ತಿದ್ದಾರೆ, ಯಾವುದೇ ಕೆಲಸ ಲಂಚ ನೀಡದೆ ಆಗುತ್ತಿಲ್ಲ ಎಂದು ಟೀಕಿಸಿದರು.

ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರಕಾರ ಬಿಜೆಪಿ ಸರಕಾರದ್ದಾಗಿದೆ, ಶೇ.೪೦ ಪರ್ಸೆಂಟ್ ಕಮೀಷನ್ ಬಗ್ಗೆ ಮೂರು ಬಾರಿ ಸದನದಲ್ಲಿ ಚರ್ಚೆಗೆ ಕೋರಿದರೂ ಅವಕಾಶ ನೀಡಲಿಲ್ಲ, ಹೋಟೆಲ್ ತಿಂಡಿಗಳ ಮಾದರಿ ಪ್ರತಿ ಕೆಲಸಕ್ಕೂ ಲಂಚ ನಿಗದಿಪಡಿಸಲಾಗಿದೆ, ವಿಧಾನಸೌಧದ ಗೋಡೆ ಲಂಚ ಲಂಚ ಎಂದು ಪಿಸುಗುಡುತ್ತಿದೆ. ತಮ್ಮ ಅವಧಿಯ ಲಂಚದ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ.

ದೇಶದ ಯುವಕರೇ ಉದ್ಯೋಗ ಕೊಡದ ಬಿಜೆಪಿಯನ್ನು ನಂಬಬೇಡಿ, ಸಣ್ಣ ಕೈಗಾರಿಕೆ, ಮಧ್ಯಮ ಕೈಗಾರಿಕೆಗಳು ಮುಚ್ಚಿ ಹೋದವು. ೬೦ ಲಕ್ಷ ಉದ್ಯೋಗಳು ಕಡಿತಗೊಂಡವು,

೨ ವರ್ಷ ೧೦ ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಗೆ ರೈತರು ನೆನಪು  ಬರಲಿಲ್ಲವಾ, ಈಗ ಜೆಡಿಎಸ್ ಪಂಚರತ್ನ ಎಂದು ಓಡಾಡುತ್ತಿದೆ. ಕೆಸಿ ವ್ಯಾಲಿಗಾಗಿ ಜಿಲ್ಲೆಯ ಎಲ್ಲಾ ಮುಖಂಡರು ಬೇಡಿಕೆ ಮೇರೆಗೆ ೧೪೦೦ ಕೋಟಿ ನೀಡಿ ಕೆ.ಸಿ.ವ್ಯಾಲಿ ನೀರಿನಿಂದ ಕೆರೆಗಳ ತುಂಬಿಸಿದ್ದೇ ಕಾರಣ. ಈ ನೀರು ವಿಷ ಎನ್ನುತ್ತಿದ್ದಾರೆ ಕುಮಾರಸ್ವಾಮಿ, ಎತ್ತಿನ ಹೊಳೆಗೂ ವಿರೋಧ ಮಾಡಿದವರು ಕುಮಾರಸ್ವಾಮಿಯೇ, ರಾಜ್ಯದಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬಂದರೆ ಎತ್ತಿನ ಹೊಳೆ ನೀರು ಹರಿಸಿ ಕುಡಿಯುವನೀರು ಕೊಡುತ್ತೇನೆ.

ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಮೋದಿ ಭರವಸೆ ನೀಡಿದ್ದರೂ ಆದರೆ, ರೈತರ ವ್ಯವಸಾಯಕ್ಕಾಗಿ ಖರ್ಚು ಮಾಡಬೇಕಾದ ಹಣವನ್ನು ದುಪ್ಪಟ್ಟು ಮಾಡಿದರು. ರೈತರ ಸಾಲ ಮಾಡದೆ ಉದ್ಯಮಿಗಳ ೧೪ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ, ಮನಮೋಹನ್‌ಸಿಂಗ್ ೭೮ ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದ್ದರು. ರಾಜ್ಯದಲ್ಲಿ ೨೭ ಲಕ್ಷ ೨೭ ಸಾವಿರ ರೈತರಿಗೆ ೫೦ಸಾವಿರ ರೂ ಸಾಲ ೮೧೫೦ ಕೋಟಿ ಸಾಲ ಮನ್ನಾ ಮಾಡಿದ್ದೆ. ಎಸ್‌ಸಿ ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವಂತೆ ಕಾನೂನು ಮಾಡಿದ್ದು, ನಮ್ಮಸರಕಾರ ಹಿಂದೆ ಯಾವ ಸರಕಾರವೂ ಮಾಡಿಲ್ಲ, ಪರಿಶಿಷ್ಟ ಜಾತಿವರ್ಗದ ಗುತ್ತಿಗೆದಾರರಿಗೆ ಮೀಸಲಾತಿ, ಬಡ್ತಿ ಮೀಸಲಾತಿ, ದಲಿತರ ಕೈಗಾರಿಕೋದ್ಯಮಕ್ಕೆ ಸಹಕರಿಸಿದ್ದು ನಮ್ಮಸರಕಾರ.

ಕೋಲಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೆ.ಸಿ ವ್ಯಾಲಿ ಮೂರನೇ ಬಾರಿಸಂಸ್ಕರಣೆ, ಸಹಕಾರ ಸಂಘಗಳ ಮೂಲಕ ಸೀಶಕ್ತಿ ಸಂಘಗಳು ಪಡೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವ ತೀರ್ಮಾನ ಮಾಡುತ್ತೇವೆ. ಮತ್ತೇ ಅಧಿಕಾರಕ್ಕೆ ಬಂದರೆ ೧೦ ಸಾವಿರ ಕೋಟಿ ರೂಗಳನ್ನು ಅಲ್ಪಸಂಖ್ಯಾತರಿಗೆ ನೀಡುತ್ತೇವೆ.

ಜೆಡಿಎಸ್ ಬಿಜೆಪಿಯನ್ನು ಸೋಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿ, ಕೋಲಾರದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು, ಕೋಲಾರದಿಂದಲೇ ಸ್ಪರ್ಧಿಸುತ್ತೇನೆ   ಎಂದು ಪುನರುಚ್ಛರಿಸಿ ಭಾಷಣ ಮುಗಿಸಿದರು.

 

Leave a Reply

Your email address will not be published. Required fields are marked *

You missed

error: Content is protected !!