• Thu. Apr 25th, 2024

ಅಸ್ಪೃಷ್ಯತೆ ನಿವಾರಣೆಗೆ ಶ್ರಮಿಸಿದವರು ಡಾ.ಅಂಬೇಡ್ಕರ್:ಬೂದಿಕೋಟೆಯಲ್ಲಿ ಅಂಜಲಿದೇವಿ.

PLACE YOUR AD HERE AT LOWEST PRICE

 

ಭಾರತ ದೇಶದಲ್ಲಿ ಈಗಲೂ ಬೇರೂರಿರುವ ಅಸ್ಪೃಷ್ಯತೆಯ ಪಿಡುಗನ್ನು ಹೋಗಲಾಡಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಪಟ್ಟಷ್ಟು ಶ್ರಮ ಬೇರಾರೂ ಪಟ್ಟಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕಿ ಅಂಜಲಿದೇವಿ ಹೇಳೀದರು.

 

ಅವರು ಬಂಗಾರಪೇಟೆ ತಾಲ್ಲೂಕು ಬೂದಿಕೋಟೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ವೋದಯ ಗ್ರಾಮೀಣಾಭಿವೃದ್ಧಿ ಶೈಕ್ಷಣಿಕ ಮತ್ತು ಸಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ನಡೆದ ಅಸ್ಪೃಷ್ಯತೆ ನಿರ್ಮೂಲನೆಗಾಗಿ ವಿಚಾರಗೋಷ್ಠಿ ಮತ್ತು ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಬಿ.ಆರ್.ಅಂನಬೇಡ್ಕರ್ ರವರು ಭಾರತ ದೇಶದಲ್ಲಿ ಹಸಿವು ಬಾಯಾರಿಕೆಗಿಂತಲೂ ಕ್ರೂರವಾಗಿದ್ದ ಅಸ್ಪೃಷ್ಯತೆಯನ್ನು ಹೋಗಲಾಡಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಸಲುವಾಗಿ ಅನೇಕ ವರ್ಷಗಳ ಕಾಲ ಅದ್ಯಯನವನ್ನು ನಡೆಸಿದರು.

 

ದೇಶದಲ್ಲಿನ ಅಸ್ಪೃಷ್ಯೆತೆ ನಿರ್ಮೂಲನೆ ಮತ್ತು ತಾರತಮ್ಯ ನಿವಾರಣೆಯ ಮಾರ್ಗ ಹುಡುಕಲು ದೇಶ, ವಿದೇಶ ಗ್ರಂಥಾಲಯಗಳಲ್ಲಿ ಅನೇಕ ದಿನಗಳು ರಾತ್ರಿ ಹಗಲು ಅದ್ಯಯನ ನಡೆಸಿದ ಪರಿಣಾಮ ನಮಗೆ ವಿಷೇಶವಾದ ಸಂವಿಧಾನವನ್ನು ರಚಿಸಿಕೊಡಲು ಸಹಾಯವಾಯಿತು.

ಸಂವಿಧಾನದಿಂದಾಗಿ ಅಸ್ಪೃಷ್ಯೆತೆ ನಿರ್ಮೂಲನೆ, ಜಾತಿ ತಾರತಮ್ಯ ನಿರ್ಮೂಲನೆ, ಬಡತನ ನಿರ್ಮೂಲನೆ ಸೇರಿದಂತೆ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನದಿಂದ ಸ್ವತಂತ್ರ್ಯ  ಮತ್ತು ಸಮಾನತೆಯ ಜೀವನ ನಡೆಸಲು ಅನುಕೂಲವಾಗಿದೆ ಎಂದರು.

 

ಸಂವಿಧಾನದ ಮೂಲಕ ಕಠೀಣ ಕಾನೂನುಗಳು ಜಾರಿಗೆ ಬಂದಿಂದರೂ ಕೆಲವು ಕಡೆ ಈಗಲೂ ಅಸ್ಪೃಷ್ಯತೆ ಜಾತೀಯತೆ ಇರುವ ಬಗ್ಗೆ ವರಧಿಗಳಾಗುತ್ತಿವೆ. ಅವುಗಳನ್ನು ಹೋಗಲಾಡಿಸಲು ಮತ್ತು ಕಾನೂನು ಬಳಕೆಯಾಗಲು ಸಮಾಜದ ಪ್ರತಿಯೊಬ್ಬ ಪ್ರಜೆಯೂ ಶ್ರಮಿಸಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಮಾತ್ರ ರಚನೆ ಮಾಡಿಕೊಟ್ಟಿಲ್ಲ. ಬದಲಿಗೆ ದೇಶದ ನೀರಾವರಿ, ಆರ್ಥಿಕ, ವಿದೇಶಾಂಗ, ವಿಜ್ಙಾನ ಮೊದಲಾದ ಕ್ಷೇತ್ರಗಳಲ್ಲಿ ಅಗಾಧವಾದ ಸೇವೆಯನ್ನು ಮಾಡಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಓದಿದವರೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಈ ದೇಶದ ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕಾಗಿ ಮತ್ತು ವಿಮೋಚನೆಗಾಗಿ ಡಾ.ಬಿ.ಆರ್.ಅಂಬೇಡ್ಕರ್ ರವರಷ್ಟು ಹೋರಾಡಿದವವರು ಮತ್ತೊಬ್ಬರು ಕಂಡುಬಂದಿಲ್ಲ. ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ತಮ್ಮ ಕಾನೂನು ಮಂತ್ರಿ ಪದವಿಗೇ ಅವರು ರಾಜೀನಾಮೆ ನೀಡಿದ ತ್ಯಾಗಿ ಎಂದು ಬಣ್ಣಿಸಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾಭ್ಯಸಕ್ಕೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಿ ಹೆಣ್ಣು ಮಕ್ಕಳು ಚನ್ನಾಗಿ ಓದಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಸರ್ವೋದಯ ಸಂಸ್ಥೆಯ ಕಲಾತಂಡದವರು ಅಸ್ಪೃಷ್ಯೆತೆ ನಿರ್ಮೂಲನೆ ಬಗ್ಗೆ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ನಂತರ ಗ್ರಾಮದ  ಸಂತೆ ಮೈದಾನದಲ್ಲಿ ನಾಟಕ ಹಾಡುಗಳ ಮೂಲಕ ಸಾರ್ವಜನಿಕರಿಗೆ ತಿಳುವಳುಕೆ ಮೂಡಿಸಿದರು.

ಈ ಸಂದರ್ಭದಲ್ಲಿ ಬೂದಿಕೋಟೆ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಮಂಜುನಾಥ್, ಪಿಡಿಓ ಜವರೇಗೌಡ, ಪ್ರಾಂಶುಪಾಲರಾದ ಮಾಲಿನಿ, ಉಪನ್ಯಾಸಕರಾದ ಕೋದಂಡಗೌಡ, ವಾಣಿ ಮಂಜುಳ, ಸರ್ವೋದಯ ಸಂಸ್ಥೆಯ ಕಲಾವಿದ ವಿ.ಯಲ್ಲಪ್ಪ, ಸಿ.ಬಸಪ್ಪ, ಗಾಯಿತ್ರಿಬಾಯಿ, ವಾಣಿ, ಗಾಯಿತ್ರಿ, ವಿ.ನಾಗಪ್ಪ ಮೊದಲಾದವರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!