ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಆಂಜನೇಯ ಬಾಲದಂತೆ ಬೆಳೆಯುತ್ತಿರುವುದರಿಂದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂಡಲದ ಉಂಟಾಗಿದ್ದು ಆಕಾಂಕ್ಷಿಗಳನ್ನು ಒಂದು ಮಾಡಿಸಿ ಟಿಕೆಟ್ ಯಾರಿಗೇ ನೀಡಿದರೂ ಭಂಡಾಯ ಏಳದೆ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಎಚ್ಚರಿಕೆ ನೀಡಿದರು.
ಕೋಲಾರದ ಹೊರವಲಯದಲ್ಲಿ ಖಾಸಗಿ ಹೋಟೆಲ್‍ನಲ್ಲಿ ಕರೆದಿದ್ದ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಧಾನ ಸಭೆಯಲ್ಲಿ ಮಾತನಾಡಿದ ಅವರು ನೀವುಗಳ ಪೈಪೋಟಿಯಿಂದ ಹಾಗೂ ಕೊನೆಗಳಿಗೆಯಲ್ಲಿ ಟಿಕೆಟ್ ಸಿಗದಿದ್ದರೆ ಭಂಡಾಯ ಏಳಿ ನಿಮ್ಮನ್ನು ನಂಬಿಕೊಂಡು ಇರುವ ಕಾರ್ಯಕರ್ತರನ್ನು ಭೀದಿಗೆ ತರಬೇಡಿ ಎಂದು ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದರು.
ಪಕ್ಷದೊಳಗಿನ ಆತಂರಿಕ ಭಿನ್ನಮತದಿಂದ ಬೇರೆ ಪಕ್ಷದವರಿಗೆ ಲಾಭವಾಗಿ ಪರಿಣಮಿಸುವಂತಾಗಿದೆ. ಆದ್ದರಿಂದ ಆಕಾಂಕ್ಷಿಗಳು ಟಿಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮೊದಲು ಪಕ್ಷ ಸಂಘಟನೆಗೆ ಒತ್ತು ನೀಡಿ, ನಂತರ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಗೆಲ್ಲಲು ಒಂದಾಗಿ ಹೋರಾಟ ಮಾಡಿ ಎಂದು ಹಿತವಚನ ನೀಡಿದರು.
ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸಿದರೆ ಮೂರನೇ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಮಾಡುವೆ, ವೈಯಿಕ್ತಿಕ ಪ್ರತಿಷ್ಟೆಗಾಗಿ ಪಕ್ಷವನ್ನು ಹಾಳು ಮಾಡುವುದು ಬೇಡ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಗಲಿದೆ, ಆದ್ದರಿಂದ ನೀವು ಯಾರೂ ಟಿಕೆಟ್ ಸಿಗಲಿಲ್ಲವೆಂದು ಬೇಸತ್ತು ಪಕ್ಷ ಬಿಡುವ ಸಾಹಸಕ್ಕೆ ಮುಂದಾಗಬಾರದು ಎಂದರು.
ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿ ಗೆಲುವುಗೆ ಶ್ರಮಿಸಲಾಗುವುದೆಂದು ಕೋಲಾರಮ್ಮನ ಮೇಲೆ ಆಣೆ ಮಾಡಿ ಎಂದು ಎಲ್ಲಾ ಆಕಾಂಕ್ಷಿಗಳಿಂದ ಆಣೆ ಮಾಡಿಸಿಕೊಂಡರು. ಈಗ ಆಣೆ ಮಾಡಿ ನಂತರ ವಿರುದ್ದವಾಗಿ ನಡೆದುಕೊಂಡರೆ ಕೋಲಾರಮ್ಮ ನಿಮ್ಮನ್ನು ಬಿಡಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷನೇ ಅಧಿಕಾರಕ್ಕೆ ಬರುವುದು. ಕ್ಷೇತ್ರದಲ್ಲಿಯೂ ಸಹ ಪಕ್ಷಕ್ಕೆ ಪೂರಕ ವಾತಾವರಣವಿದೆ, ಆದರೆ ಟಿಕೆಟ್ ಗೊಂದಲದಿಂದ ಹಿನ್ನೆಡೆಯಾಗಿದೆ, ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಮುಖಂಡರು ಒಂದಾಗಿ ಒಗ್ಗಟ್ಟಾಗಿ ಶುಕ್ರವಾರದಿಂದಲೇ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪ್ರಚಾರ ಶುರು ಮಾಡಿ ಚುನಾವಣೆಯಲ್ಲಿ ಬಿಜೆಪಿ ಯಾಕೆ ಗೆಲ್ಲಲ್ಲ ನಾನೂ ನೋಡುವೆ ಎಂದರು.
ಈಗಾಗಲೇ ಕಾಂಗ್ರೆಸ್,ಜೆಡಿಎಸ್ ಪ್ರಚಾರ ಕೈಗೊಂಡಿದೆ, ಅವರಿಗೆ ಮತ ಕೇಳುವ ನೈತಿಕತೆ ಇಲ್ಲ, ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಕೈಗೊಂಡಿರುವ ಸಾಧನೆಗಳನ್ನೇ ನೀವು ಮತದಾರರ ಬಳಿ ತೆಗೆದುಕೊಂಡು ಹೋಗಿ ಮತ ಕೇಳಿ ಎಂದರು ತಿಳಿಸಿದರು.
ಆಕಾಂಕ್ಷಿಗಳೂ ಸಹ ಒಂದಾಗಿ ಭಿನ್ನಮತ ಬಿಟ್ಟು ಪಕ್ಷ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿರುವುದು ಕಾರ್ಯಕರ್ತರಿಗೆ ಹೊಸ ಚೈತನ್ಯ ಬಂದಿದೆ. ಸಭೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ,ಬಿ.ವಿ.ಮಹೇಶ್, ವಿ.ಶೇಷು, ಅಮರೇಶ್, ಪಕ್ಷದ
ಜಿಲ್ಲಾಧ್ಯಕ್ಷ ವೇಣುಗೋಪಾಲ್, ಮುಖಂಡ ಕೆ.ಚಂದ್ರಾರೆಡ್ಡಿ, ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್, ಕೆಜಿಎಫ್ ಸಂಪಂಗಿ, ಪುರಸಭೆ ಸದಸ್ಯ ಕಪಾಲಿಶಂಕರ್, ಬಿ.ಪಿ.ಮಹೇಶ್ ಮತ್ತಿತರರು ಇದ್ದರು.