• Fri. Apr 26th, 2024

ಕೆಚ್ಚೆದೆಯ ವ್ಯಕ್ತಿತ್ವದ ಸಂಗೊಳ್ಳಿರಾಯಣ್ಣ ನಮಗೆ ಆದರ್ಶ-ಮುನಿರಾಜು

ByNAMMA SUDDI

Jan 26, 2023

PLACE YOUR AD HERE AT LOWEST PRICE

ಕೆಚ್ಚೆದಯ ವ್ಯಕ್ತಿತ್ವದ ವಿಕಸನವನ್ನು ಯುವ ಜನಾಂಗ ಬೆಳಿಸಿಕೊಂಡು ಸಮಾಜ ಪರಿವರ್ತನಾ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ರಾಜ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ಎನ್.ಮುನಿರಾಜು ತಿಳಿಸಿದರು.

ಕೋಲಾರ ನಗರದ ಖಾದ್ರಿಪುರದಲ್ಲಿರುವ ನಲ್ಲೂರಮ್ಮ ಅಮ್ಮನ ಮಡಿಲು ಅನಾಥಾಶ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ೧೯೩ನೇ ಹುತಾತ್ಮ ದಿನಾಚರಣೆ ಅಂಗವಾಗಿ ಸಾಧಕರನ್ನು ಸ್ಮನ್ಮಾನಿಸಿ ಹಾಗೂ ಅನಾಥ ಮಕ್ಕಳಿಗೆ ಶೈಕ್ಷಣಿಕ ಪರಿಕರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ನಿಜವಾದ ದೇಶಾಭಿಮಾನವನ್ನು ಇಂದಿನ ಯುವ ಸಮೂಹ ಬೆಳಿಸಿಕೊಳ್ಳುವ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಬೇಕು ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ನೌಕರರ ಸಂಘದಡಿ ಕಳೆದ ೬ ವರ್ಷಗಳಿಂದಲೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸಾಧನೆ ಮಾಡಿದವವರನ್ನು ಗುರುತಿಸಿ, ಪೋತ್ಸಹ ನೀಡುವ ಮೂಲಕ ಬೇರೆಯವರಿಗೂ ಸ್ಫೂರ್ತಿ ಸಿಗಲಿ ಎಂಬುದೇ ನಮ್ಮ ಅಶಯವೆಂದರು.

ಹಾಲು ಮತ ಮಹಾಸಭಾ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ, ಕ್ರಾಂತಿವೀರನ ದೇಶದ ಭಕ್ತಿ ಕಿಚ್ಚನ್ನು ಪ್ರತಿಯೊಬ್ಬ ಭಾರತೀಯನು ಅಳವಡಿಸಿಕೊಳ್ಳಬೇಕು. ರಾಯಣ್ಣನ ಹೋರಾಟದ ಬದುಕು ಇನ್ನೂ ಸಾವಿರ ವರ್ಷವಾದರೂ ಅಮರ ಎಂದು ಕೊಂಡಾಡಿದರು.

ರಾಜ್ಯ ಕುರುಬ ಸಂಘದ ನಿರ್ದೇಶಕಿ ಸರಸ್ವತಮ್ಮ ಮಾತನಾಡಿ, ಬೆಳಗಾಂ ಜಿಲ್ಲೆಯಲ್ಲಿ ಸೈನಿಕ ಶಾಲೆ ಸ್ಥಾಪಿಸಿದಂತೆ ಕೋಲಾರದಲ್ಲೂ ಸ್ಥಾಪಿಸಬೇಕು. ಅದಕ್ಕಾಗಿ ಎಲ್ಲರ ಸಹಕಾರ, ಬೆಂಬಲ ಅಗತ್ಯವಿದೆ. ಸರ್ಕಾರದ ಗಮನಕ್ಕೆ ತರುವಂತ ಕೆಲಸ ಮಾಡೋಣ ಎಂದು ಹೇಳಿದರು.

ಈ ವೇಳೆ ಮಾಜಿ ಯೋಧ ಎ.ರಾಮಪ್ಪ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಉಪಾಧ್ಯಕ್ಷರಾದ ಡಿ.ಮುನಿಯಪ್ಪ, ವೆಂಕತಾರೋಣಪ್ಪ, ಕುಪ್ಪಯ್ಯ ಖಜಾಂಚಿ ಸಿ.ಮುನಿರಾಜು, ಸಂಘಟನಾ ಕಾರ್ಯದರ್ಶಿ ಭರತ್ ಕುಮಾರ್, ಕೆಎಸ್‌ಆರ್‌ಟಿಸಿ ಕನಕ ನೌಕರರ ಸಂಘದ ಅಧ್ಯಕ್ಷ ಡಿ.ಶಿವಕುಮಾರ್, ಮಾಜಿ ತಾ.ಪಂ ಸದಸ್ಯೆ ಅನಿತಾ ಆನಂದ್, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ, ಶಿವಪ್ರಕಾಶ್, ಎನ್.ಪ್ರಭಾವತಿ, ಜ್ಯೋತಿ ರಾಮಮೂರ್ತಿ, ಪೂರ್ಣಿಮಾ ಸೂಲೂರು ಅಂಜನಪ್ಪ, ಉಮಾ ಶಂಕರ್, ಸಂಜಯ್, ಅನಾಥಾಶ್ರಮ ಮೇಲ್ವಿಚಾರಕ ಭುವನೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!