ಓಂಶಕ್ತಿ ಫೌಂಡೇಶನ್ ವತಿಯಿಂದ ಬಡವರಿಗೆ ಕೂಲಿ ಕಾರ್ಮಿಕರಿಗೆ ನಡೆಸುತ್ತಾ ಇರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಓಂಶಕ್ತಿ ಫೌಂಡೇಶನ್ ಹಾಗೂ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ಕೋಲಾರ ನಗರದ ಹೊರವಲಯದ ವಿನೋಭನಗರದಲ್ಲಿ ಗುರುವಾರ 74 ನೆಯ ಗಣರಾಜೋತ್ಸವದ ಪ್ರಯುಕ್ತ ಓಂಶಕ್ತಿ ಫೌಂಡೇಶನ್ ವತಿಯಿಂದ ಭಾರತ ಮಾತಾ ಪೂಜಾ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ಆನೇಕ ಆರೋಗ್ಯ ಸೇವೆಗಳು ಸಮಾಜದ ಕಡು ಬಡವರಿಗೆ ತಲುಪುತ್ತಿಲ್ಲ ಮನುಷ್ಯನಿಗೆ ಕೊರೊನಾ ಸಂದರ್ಭದಲ್ಲಿ ಆರೋಗ್ಯದ ಮಹತ್ವ ಗೊತ್ತಾಗಿದೆ ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಯಿ ನೇತೃತ್ವದ ಸರಕಾರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಒದಗಿಸುವ ಕೆಲಸವನ್ನು ಮಾಡುತ್ತಾ ಇದ್ದಾರೆ ಸರ್ಕಾರದೊಂದಿಗೆ ಓಂಶಕ್ತಿ ಫೌಂಡೇಶನ್ ಕೂಡ ನಿಮ್ಮೊಂದಿಗೆ ಇದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು
ಕೊರೊನಾ ದೇಶಕ್ಕೆ ಕಾಲಿಟ್ಟ ಕೂಡಲೇ ಭಾರತದ ಕಥೆ ಮುಗಿದುಹೋಯಿತು ಎಂದು ಭಾವಿಸಿದ್ದ ಕಾಲಘಟ್ಟದಲ್ಲಿ ನಮ್ಮ ದೇಶದವರಿಗೆ ಎರಡು ಲಸಿಕೆ ಕೊಟ್ಟು ಹೊರದೇಶಗಳಿಗೆ ಲಸಿಕೆ ರಫ್ತು ಮಾಡಿದ ಕೀರ್ತಿ ನಮ್ಮ ದೇಶಕ್ಕೆ ಇದೆ ಭಾರತದ ಪ್ರಧಾನಿ ಮಂತ್ರಿಯೊಬ್ಬರೂ ಇನ್ನೂ ಕೆಲವೇ ದಿನಗಳಲ್ಲಿ ವಿಶ್ವ ಗುರು ಸ್ಥಾನ ಪಡೆಯಲಿದ್ದು ಭಾರತ ಹೇಗೆ ಬದಲಾಗುತ್ತಾ ಇದೆ ಎಂಬುದು ಸಾಕ್ಷಿಯಾಗಿದೆ ಎಂದರು
ಸಮಾಜದಲ್ಲಿ ಕೆಲವು ಬಡವರನ್ನು ಗುರಿಯಾಗಿಟ್ಟುಕೊಂಡು ಹಿಂದೂ ಧರ್ಮದ ಜನರನ್ನು ಮತಾಂತರ ಮಾಡಿಕೊಳ್ಳುತ್ತಾ ಇದ್ದು ಸರಕಾರದ ಸೌಲಭ್ಯಗಳನ್ನು ಪಡೆಯಲು ಮಾತ್ರ ಎಸ್ಸಿ ಎಸ್ಟಿ ಅಂತಾರೆ ಆದರೆ ಸೌಲಭ್ಯಗಳನ್ನು ಪಡೆದ ನಂತರ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಬಿಜೆಪಿ ಸರಕಾರ ಹಾಗೂ ನಾವು ನಿಮ್ಮೊಂದಿಗೆ ಇದ್ದು ಮಾತೃ ಧರ್ಮಕ್ಕೆ ಮರಳುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಶಾಂತಾ ಮಾತನಾಡಿ ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರವೇ ಕುಟುಂಬ ಅಭಿವೃದ್ಧಿಯಾಗಲು ಸಾಧ್ಯ ಸಾರ್ವಜನಿಕರು ಯಾವುದೇ ಖಾಯಿಲೆ ಬಂದಾಗ ಮೊದಲು ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಮತಮ್ಮ, ಸಾಮಾ ಬಾಬು, ನಾಮಲ್ ಮಂಜು, ಶಂಕರ್, ಕಾವ್ಯ, ಪ್ರೇಮಾ, ಶಶಿ.ಪವನ್, ಮುನಿಶಾಮಣ್ಣ, ವೇಣು, ಜಯಂತಿ ಹರೀಶ್ ಮುಂತಾದವರು ಇದ್ದರು.