• Thu. Sep 28th, 2023

ಕೋಲಾರದಲ್ಲಿ ವಿವೇಕ್ ನೇತ್ರಾಲಯದ ನೂತನ ಕಟ್ಟಡ ಉದ್ಘಾಟನೆ – ನೇತ್ರ ಚಿಕಿತ್ಸೆಗೆ ಸಾಮಾಜಿಕ ಕಾಳಜಿ ಅಗತ್ಯ-ಯೋಗೇಶ್ವರಾನಂದ ಮಹಾರಾಜ್

PLACE YOUR AD HERE AT LOWEST PRICE

ಮಾನವನ ಪಂಚೇಂದ್ರಿಯಗಳಲ್ಲಿ ಅತಿ ಅಮೂಲ್ಯವಾದುದು ನೇತ್ರಗಳಾಗಿದ್ದು, ಸಮಾಜದ ಒಳಿತು,ಕೆಡಕು ಕಾಣುವ ಈ ದೃಷ್ಟಿಯ ಸಮಸ್ಯೆಗಳಿಗೆ ಸಾಮಾಜಿಕ ಕಾಳಜಿಯೊಂದಿಗೆ ಸ್ಪಂದಿಸುತ್ತಾ ಬಂದಿರುವ ಡಾ.ಹೆಚ್.ಆರ್.ಮಂಜುನಾಥ್ ಅವರ ಕಾರ್ಯವನ್ನು ಬೆಂಗಳೂರಿನ ರಾಮಕೃಷ್ಣಾಶ್ರಮದ ಅಧ್ಯಕ್ಷರೂ ಆದ ಸ್ವಾಮಿ ಯೋಗೇಶ್ವರಾನಂದ ಮಹಾರಾಜ್ ಶ್ಲಾಘಿಸಿದರು.

ಕೋಲಾರ ನಗರದ ಡೂಂಲೈಟ್ ವೃತ್ತದ ಕೆಇಬಿ ಗಣಪತಿ ದೇವಾಲಯದ ಸಮೀಪ ನಿರ್ಮಿಸಿರುವ ಡಾ.ಹೆಚ್.ಆರ್.ಮಂಜುನಾಥ್ ಅವರ ವಿವೇಕ್ ನೇತ್ರಾಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಗಳ ಮೂಲಕ ಬಡವರ ನೇತ್ರ ರಕ್ಷಣೆಗೆ ನೆರವಾಗುತ್ತಿರುವ ಡಾ.ಮಂಜುನಾಥ್, ಇದೀಗ ಅತ್ಯಂತ ಸುಸಜ್ಜಿತ ಕಣ್ಣಿನ ಆಸ್ಪತ್ರೆ ನಿರ್ಮಿಸಿದ್ದು, ಇದು ಜಿಲ್ಲೆಯ ಬಡ,ಮಧ್ಯಮ ವರ್ಗದ ಜನತೆಗೆ ಸುಲಭದರದ ಚಿಕಿತ್ಸೆ ನೀಡುವ ಮೂಲಕ ನೆರವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್‌ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ನ್ಯಾಯಾಧೀಶರಾದ ಬಾಲಚಂದ್ರಭಟ್, ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ, ಬಿಸಪ್ಪಗೌಡ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದು ಶುಭ ಕೋರಿದರು.

 

Leave a Reply

Your email address will not be published. Required fields are marked *

error: Content is protected !!