• Thu. Sep 28th, 2023

ರಥಸಪ್ತಮಿ ಅಂಗವಾಗಿ ಅರಾಭಿಕೊತ್ತನೂರಿನಲ್ಲಿ ವೈಭವದ ಬ್ರಹ್ಮ ರಥೋತ್ಸವ

PLACE YOUR AD HERE AT LOWEST PRICE

ದೇವಾಲಯಗಳ ಊರು ಎಂದೇ ಖ್ಯಾತಿಯಾಗಿರುವ ಅರಾಭಿಕೊತ್ತನೂರು ಗ್ರಾಮದಲ್ಲಿ ಶ್ರೀ ಪ್ರಸನ್ನ ಸೋಮನಾಥೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಬೃಹತ್ ಗಾತ್ರದ ಹೂವಿನ ಹಾರಗಳಿಂದ ರಥವನ್ನು ಅಲಂಕರಿಸಿದ್ದು, ರಥ ಹೊರಡುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಹಣ್ಣುದವಳದ ಎಲೆ ರಥಕ್ಕೆ ಅರ್ಪಿಸಿ ಕೃತಾರ್ಥರಾದರು.

ರಥೋತ್ಸವದ ಅಂಗವಾಗಿ ಗ್ರಾಮದ ಸಮುದಾಯ ಭವನದಲ್ಲಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದಿದ್ದು, ದಾರಿಯುದ್ದಕ್ಕೂ ಹಲವಾರು ಮಂದಿ ಪಾನಕ,ಮಜ್ಜಿಗೆ,ಹೆಸರುಬೇಳೆ ವಿನಿಯೋಗದಲ್ಲಿ ನಿರತರಾಗಿದ್ದರು.

ಕೋಲಾರ ತಾಲೂಕಿನ ಹಾಗೂ ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಸಂಕ್ರಾಂತಿಯನ್ನೇ ಆಚರಿಸದ ಈ ಗ್ರಾಮದ ಜನತೆ ರಥಸಪ್ತಮಿಯ ಈ ರಥೋತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ, ಗ್ರಾಮದ ಬೆಟ್ಟಗಳಲ್ಲಿರುವ ಚಿರತೆಯನ್ನು ಭೇಟೆಯಾಡಿ ಊರಿಗೆ ಕರೆತಂದು ಗ್ರಾಮದ ಮಧ್ಯಭಾಗದಲ್ಲಿ ಮೆರವಣಿಗೆ ಮಾಡಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದರು.

ಆದರೆ ಬದಲಾದ ಪರಿಸ್ಥಿತಿ, ಸರ್ಕಾರ, ಅರಣ್ಯ ಇಲಾಖೆಯ ಕಾನೂನುಗಳಿಂದಾಗಿ ಚಿರತೆ ಭೇಟೆ ಕೈಬಿಟ್ಟು, ಸೋಮನಾಥೇಶ್ವರ ಸ್ವಾಮಿಯ ರಥೋತ್ಸವವನ್ನೇ ವೈಭವದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮದ ಸೋಮನಾಥೇಶ್ವರ ಸ್ವಾಮಿ, ಲಕ್ಷ್ಮೀವೆಂಕಟೇಶ್ವರ ಸ್ವಾಮಿ, ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ವಿದ್ಯಾಗಣಪತಿ, ಕರಗದಮ್ಮ, ರೇಣುಕಾ ಯಲ್ಲಮ್ಮ, ಶನೇಶ್ವರಸ್ವಾಮಿ, ಪಟಾಲಮ್ಮ ದೇವಿ, ಕುಂಟಗಂಗಮ್ಮ, ಸಿದ್ದೇಶ್ವರ ಸ್ವಾಮಿ,ಸತ್ಯಮ್ಮದೇವಿ,ಭೀಮೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರವನ್ನು ಏರ್ಪಡಿಸಲಾಗಿತ್ತು.
ರಥೋತ್ಸವಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ಹರೀಶ್, ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ,ಗ್ರಾ.ಪಂ ಅಧ್ಯಕ್ಷ ರಾಜಣ್ಣ, ಸದಸ್ಯರಾದ ನಂಜುಂಡಗೌಡ,ರೇಣುಕಾ, ಕವಿತಾ, ಮಾಜಿ ಸದಸ್ಯ ಎ.ಶ್ರೀಧರ್, ಮುಖಂಡರಾದ ಜಯರಾಮೇಗೌಡ, ಈಶ್ವರ್, ಮುನಿರಾಜು, ಮುಳ್ಳಹಳ್ಳಿ ಮಂಜುನಾಥ್, ಮುನಿಯಪ್ಪ, ಅಪ್ಪಿಗೌಡ,ನಾರಾಯಣಶೆಟ್ಟಿ, ಚಿಕ್ಕವೆಂಕಟಪ್ಪ,ಮಮತಮ್ಮ ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ಯುವಕ ಸಂಘಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಅನೇಕ ಮುಖಂಡರು ಹಾಜರಿದ್ದು, ಚಾಲನೆ ನೀಡಿದರು.

ಪ್ರಧಾನ ಅರ್ಚಕರಾದ ವೇದಬ್ರಹ್ಮ ಸತ್ಯಸೋಮಶೇಖರ್ ಧೀಕ್ಷಿತ್‌ಸೇರಿದಂತೆ ಸೋಮನಾಥೇಶ್ವರ ಅಭಿವೃದ್ದಿ ಸಮಿತಿ ಸದಸ್ಯರು ರಥೋತ್ಸವದ ಉಸ್ತುವಾರಿ ವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!