• Fri. Apr 26th, 2024

ಕೆಜಿಎಫ್: ಡಾ  ತಿಮ್ಮಯ್ಯ ಕಾಲೇಜಿನಲ್ಲಿ ಪದವಿ ಪ್ರಧಾನ ಕಾರ್ಯಕ್ರಮ.

PLACE YOUR AD HERE AT LOWEST PRICE

ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಬೇಕು, ಸಾಧನೆ ಮಾಡಿದವರ ಇತಿಹಾಸವನ್ನು  ಅರಿತುಕೊಳ್ಳುವ ಮೂಲಕ ಉನ್ನತ ಸಾಧನೆಗೆ ಪ್ರಯತ್ನಿಸಬೇಕೆಂದು ಬೆಂಗಳೂರಿನ ಗ್ಲೋಬಲ್
ಪಾರ್ಟ್‌ನರ್  ಇಕೋ ಸಿಸ್ಟಮ್ ಸೇಲ್ಸ್‌ನ  ಉಪಾಧ್ಯಕ್ಷ ಮಯೂರ್ ಭರತ್ ಹೇಳಿದರು.
ಕೆಜಿಎಫ್‌  ನಗರದ ಡಾ.ತಿಮ್ಮಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜೀವನಕ್ಕೆ ಶಿಕ್ಷಣ ಮುಖ್ಯ, ಜೀವನದಲ್ಲಿ ಗಳಿಸಿದ ಆಸ್ತಿ, ಸಂಪತ್ತು ಬೇರೆಯವರ ಪಾಲಾಗಬಹುದು ಆದರೆ, ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಕಲಿತ ಶಿಕ್ಷಣ ಮಾತ್ರ  ಬೇರೆಯವರ ಪಾಲಾಗಲು ಸಾಧ್ಯವಿಲ್ಲ ಎಂದರು.
ಕಾಲೇಜಿನ ಅಧ್ಯಕ್ಷ ಟಿ.ವೆಂಕಟವರ್ಧನ್ ಮಾತನಾಡಿ, ಒಬ್ಬ ವಿದ್ಯಾರ್ಥಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಒಳ್ಳೆಯ ಕಾಲೇಜು ಮತ್ತು ಉತ್ತಮ ಉಪನ್ಯಾಸಕರು ಮುಖ್ಯವಾಗುವುದಿಲ್ಲ, ಆ ವಿದ್ಯಾರ್ಥಿಯಲ್ಲಿ ಇರಬಹುದಾದ ಉತ್ತಮ ಅಧ್ಯಯನಗಳು ಸಹ ಮುಖ್ಯವಾಗಿರತ್ತವೆ.
 ನೀವು ಯಶಸ್ವಿ ವಿದ್ಯಾರ್ಥಿಗಯಾಗಲು ಬಯಸಿದರೆ ನಿಯಮಿತವಾಗಿ ಕಡಿಮೆ ಅವಧಿಯಲ್ಲಿ ಅಧ್ಯಯನ
ಮಾಡುವುದನ್ನು ಕಲಿಯುವುದು ತುಂಬಾ ಅವಶ್ಯಕವಾಗಿದ್ದು  ವಿದ್ಯಾರ್ಥಿ ಜೀವನ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ದಿಯ ಮೂಲಾಧಾರವೆಂದು ತಿಳಿಸಿದರು.
ತಿಮ್ಮಯ್ಯ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ಯಾಂಪಸ್‍ನ ಆಯ್ಕೆ ಮೂಲಕ ಉದ್ಯೋಗ ನೀಡಲು
ರಾಜ್ಯದ ಪ್ರತಿಷ್ಟಿತ ಕಂಪನಿಗಳು ಮುಂದೆ ಬಂದಿದ್ದು, ಉನ್ನತವಾಗಿ ತೇರ್ಗೆಡೆ ಹೊಂದಿರುವ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯು ವಿಫುಲವಾದ ಅವಕಾಶಗಳನ್ನು ಕಲ್ಪಿಸಿದೆ ಎಂದರು.
ತಾಂತ್ರಿಕ ಕಾಲೇಜಿನ ಮೂರು ವಿಭಾಗಗಳಲ್ಲಿ ಉನ್ನತ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದ ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಕ್ಷ ವೆಂಕಟವರ್ಧನ್ ವೈಯಕ್ತಿಕವಾಗಿ ಮೂವರು ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ನೀಡಿದರು.
ಉಳಿದ 21 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ಸೈಯದ್ ಆರಿಫ್ ಸ್ವಾಗತಿಸಿದರು, ಉಪ ಪ್ರಾಂಶುಪಾಲ ಶೆಣೈ ವಂದಿಸಿದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!