• Fri. Mar 1st, 2024

ಶ್ರೀನಿವಾಸಪುರ:ಜೆಡಿಎಸ್ ಪಕ್ಷಕ್ಕೆ ಅನ್ಯ ಪಕ್ಷಗಳಿಂದ 40 ಕುಟುಂಬಗಳ ಸೇರ್ಪಡೆ.

PLACE YOUR AD HERE AT LOWEST PRICE

ಸತತ 40ವರ್ಷಗಳ ರಾಜಕಾರಣದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷಗಳಿಗಿಂತ ವ್ಯಕ್ತಿಗಳಿಗೆ ಹೆಚ್ಚು ಮನ್ನಣೆ ನೀಡುತ್ತಾರೆ. ಈ ಕ್ಷೇತ್ರದಲ್ಲಿ (ಪ್ರಸಕ್ತಅವಧಿ ಬಿಟ್ಟು) ಒಮ್ಮೆ ಹಾಲಿ ಶಾಸಕ ರಮೇಶ್ ಕುಮಾರ್ ಮತ್ತು ಮಾಜಿ ಶಾಸಕ ಜಿ ಕೆ ವೆಂಕಟಶಿವಾರೆಡ್ಡಿ ಗೆಲ್ಲುತ್ತಾ ಬಂದಿಂದಾರೆ.

ಮತದಾರರು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ರಮೇಶ್ ಕುಮಾರ್ ರನ್ನು  ಶಾಸಕರಾಗಿ ಆಯ್ಕೆಮಾಡಿದ್ದಾರೆ. 2023ರ ವಿಧಾನಸಭೆ ಚುನಾವಣೆ ನನ್ನ ಕಡೆಯ ಚುನಾವಣೆಯೆಂದು  ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕರಾದ ಜಿ ಕೆ ವೆಂಕಟಶಿವಾರೆಡ್ಡಿ ಪ್ರಚಾರ ಆರಂಭಿಸಿದ್ದಾರೆ.

ಮಾಜಿ ಶಾಸಕ ವೆಂಕಟಶಿವಾರೆಡ್ಡಿರ ಗ್ರಾಮವಾದ ಗುಡಸವಾರಪಲ್ಲಿ, ಉಪ್ಪರಪಲ್ಲಿ, ಕಾಶಿಪಲ್ಲಿ, ಬಲ್ತಮರಿ, ದಿಗವಚಿಂತಪಲ್ಲಿ, ಗುರುವುಲೋಳ್ಳಗಡ್ಡ ಗ್ರಾಮಗಳಲ್ಲಿ ಸುಮಾರು 40 ಕುಟುಂಬಗಳು ಕಾಂಗ್ರೇಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

40 ಕುಟುಂಬಗಳು ಜೆಡಿಎಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕಾಂಗ್ರೇಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಸ್ವಾಗತ ಕೋರಿ ನಿಮಗೆ ಯಾವುದೇ ಕಷ್ಟ ಸುಖಗಳಿಗೆ ನಾನು ಇದ್ದೇನೆ ಎಂದು ಭರವಸೆ ನೀಡಿದರು.

ನಾನು ಸತತ ಎರಡು ಬಾರಿ ಸೋತಿದ್ದೇನೆ. ಆದರೆ ಮತದಾರರು ಎಂದೂ ನನ್ನ ಕೈ ಬಿಡಲಿಲ್ಲಾ. ಈಗಲೂ  ನಮ್ಮ ಪಕ್ಷಕ್ಕೆ ಸೇರ್ಪಡೆಯಾದವರಿಗೆ ನಾನು ಚಿರಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದರು.

ಮಹಿಳೆಯರು ಯಾವುದೇ ಕಾರಣಕ್ಕೂ ಮೋಸ ಹೊಗಬೇಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೇ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುತ್ತದೆ. ಇದು ನನ್ನ ಕಡೆಯ ಚುನಾವಣೆ. ನನಗೆ ನಿಮ್ಮ ಆಶೀರ್ವಾದ ಮಾಡಿ ನಿಮ್ಮ ಸೇವೆಗೆ ನಾನು ಸಿದ್ದನಿದ್ದೇನೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶ್ರೀನಿವಾಸ್, ತೂಪಲ್ಲಿ  ನಾರಾಯಣಸ್ವಾಮಿ, ಶಿವಪುರ ಶೆಂಕರ್, ಗಾಯತ್ರಿ ಮುತ್ತಪ್ಪ, ಕೆ ವಿ ಶಿವಾರೆಡ್ಡಿ, ಪೂಲು ಶಿವಾರೆಡ್ಡಿ, ನಾರಾಯಣಸ್ವಾಮಿ, ವೇಣುಗೋಪಾಲ್ ರೆಡ್ಡಿ, ಚಿನ್ನಪ್ಪರೆಡ್ಡಿ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!